ಅಂದು ಒಪ್ಪೊತ್ತಿನ ಊಟಕ್ಕಾಗಿ ವಿಶ್ವದ ಶ್ರೀಮಂತ ಫುಟ್​ಬಾಲ್ ಆಟಗಾರನ ಪರದಾಟ: ಇಂದು ತುಂಡು ಬರ್ಗರ್​ ನೀಡಿದವರಿಗಾಗಿ ಹುಡುಕಾಟ

Cristiano Ronaldo: ಕಳೆದ ವರ್ಷ ಪತ್ನಿ ಮತ್ತು ಪುತ್ರನೊಂದಿಗೆ ಗ್ರೀಸ್ ಪ್ರವಾಸ ಹೋದ ಸಂದರ್ಭದಲ್ಲಿ ಪೋರ್ಚುಗಲ್​ ಆಟಗಾರ ಕೋಸ್ಟಾ ನವರಿನೊ ಎಂಬ ರೆಸ್ಟೊರೆಂಟ್​ನಲ್ಲಿ ತಂಗಿದ್ದರು. ಫುಟ್​ಬಾಲ್ ಮೈದಾನದಲ್ಲಿ ಕಾಲಿನಿಂದಲೇ ಕಾವ್ಯ ರಚಿಸುವ ಆಟಗಾರನ ಉಪಚರಿಸುವುದೇ ಭಾಗ್ಯ ಎಂದು ತಿಳಿದಿದ್ದ ಅಲ್ಲಿನ ಸಿಬ್ಬಂದಿಗೆ ಕೊನೆಗೆ ಅಚ್ಚರಿಯೊಂದು ಕಾದಿತ್ತು.

zahir | news18-kannada
Updated:September 20, 2019, 12:29 PM IST
ಅಂದು ಒಪ್ಪೊತ್ತಿನ ಊಟಕ್ಕಾಗಿ ವಿಶ್ವದ ಶ್ರೀಮಂತ ಫುಟ್​ಬಾಲ್ ಆಟಗಾರನ ಪರದಾಟ: ಇಂದು ತುಂಡು ಬರ್ಗರ್​ ನೀಡಿದವರಿಗಾಗಿ ಹುಡುಕಾಟ
Cristiano ronaldo
  • Share this:
ಫುಟ್​ಬಾಲ್​ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಾನೇಗೆ ಇತರೆ ತಾರೆಗಳಿಕ್ಕಿಂತ ಭಿನ್ನ ಎಂದು ಅನೇಕ ಬಾರಿ ನಿರೂಪಿಸಿದ್ದರು. ಇದಕ್ಕೆ ಹೊಸ ಸೇರ್ಪಡೆ ಬಾಲ್ಯದಲ್ಲಿ ತಿಂಡಿ ನೀಡಿದವರ ಹುಡುಕಾಟ. ಫುಟ್​ಬಾಲ್​ ಅಂಗಳದ ಆಕ್ರಮಣಕಾರಿ ಆಟಗಾರ ಎಂದು ಖ್ಯಾತಿ ಪಡೆದಿರುವ ಕ್ರಿಸ್ಟಿಯಾನೊ ಮೈದಾನದ ಹೊರಗೆ ಮಾತ್ರ ಮಾನವೀಯತೆಯ ಸರದಾರ. ವೃತ್ತಿಜೀವನದಲ್ಲಿ ಅನೇಕ ವಿಶ್ವದಾಖಲೆಗಳನ್ನು ಸೃಷ್ಟಿಸಿರುವ ರೋನಾಲ್ಡೊ ಈಗ ವಿಶ್ವದ ಶ್ರೀಮಂತ ಆಟಗಾರನಾಗಿರಬಹುದು. ಆದರೆ ಅಂದೊಂದು ಕಾಲದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದರು ಎಂಬುದೇ ಸತ್ಯ.

ಪ್ರೋರ್ಚುಗಲ್​ನಲ್ಲಿ ಜನಿಸಿದ ರೊನಾಲ್ಡೊ ಅವರ ತಂದೆಯು ಮಹಾನ್ ಕುಡುಕನಾಗಿದ್ದ. ಹೀಗಾಗಿ ಬಾಲ್ಯದಲ್ಲೇ ಕ್ರಿಸ್ಟಿಯಾನೊ ಜೀವನ ಹಳಿ ತಪ್ಪಿತು. ಎಲ್ಲಿವರೆಗೆ ಎಂದರೆ ಅನೇಕ ಬಾರಿ ಹಸಿದ ಹೊಟ್ಟೆಯಲ್ಲೇ ಮಲಗಬೇಕಿತ್ತು. ಇಂತಹ ಸಮಯದಲ್ಲಿ ರೊನಾಲ್ಡೊ ಮೆಕ್​ಡೊನಾಲ್ಡ್​ ಔಟ್​ಲೆಟ್​ಗೆ ಹೋಗುತ್ತಿದ್ದರಂತೆ. ಅದು ಕೂಡ ಹಿಂಬದಿಯ ಮೂಲಕ.

12ನೇ ವಯಸ್ಸಿನಲ್ಲೇ ಹಸಿವೇನೆಂದು ನಾನು ಅರಿತುಕೊಂಡಿದ್ದೆ. ನನಗೆ ಬಾಲ್ಯದಲ್ಲಿ ಸರಿಯಾದ ಪೋಷಣೆ ಸಿಕ್ಕಿರಲಿಲ್ಲ. ಮೂರು ಹೊತ್ತಿನ ಊಟ ಎಂಬುದು ಮರೀಚಿಕೆ. ಹೀಗಾಗಿ ಅನೇಕ ಬಾರಿ ನಾನು ಹಣವಿಲ್ಲದಿದ್ದಾಗ ಲಿಸ್ಬನ್​ ನಗರದಲ್ಲಿರುವ ಮೆಕ್​ಡೊನಾಲ್ಡ್ ಔಟ್​ಲೆಟ್​ಗೆ ಹೋಗುತ್ತಿದ್ದೆ. ರಾತ್ರಿ ಸಮಯದಲ್ಲಿ ಹಸಿವಾದಾಗ ನನ್ನ ಪಯಣ ಅತ್ತ ಕಡೆಯಾಗಿತ್ತು. ಹಿಂಬದಿ ಮೂಲಕ ಅಡುಗೆ ಮನೆಯತ್ತಿರ ಹೋಗುತ್ತಿದ್ದ ನಾನು, ಬರ್ಗರ್ ಉಳಿದಿದೆಯೇ ಎಂದು ಕೇಳುತ್ತಿದ್ದೆ. ಯಾರಾದರೂ ತಿಂದು ಉಳಿದ ಬರ್ಗರ್​ಗಳ ಬಾಕಿಯನ್ನು ನನಗೆ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರು ನೀಡುತ್ತಿದ್ದರು ಎಂದು ರೊನಾಲ್ಡೊ ಇತ್ತೀಚೆಗೆ ಪಿಯರ್ಸ್​ ಮೊರ್ಗನ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ ವೇಳೆ ಅಲ್ಲಿ ಮೂವರು ಹುಡುಗಿಯರು ಕೆಲಸ ಮಾಡುತ್ತಿದ್ದರು. ಅದರಲ್ಲಿ ಒಬ್ಬರ ಹೆಸರು ನೆನಪಿದೆ, ಅಡೆನಾ ಎಂದು. ಅವರನ್ನು ಈಗಲೂ ಹುಡುಕುತ್ತಿರುವೆ. ಆದರೆ ಇಲ್ಲಿಯವರೆಗೆ ನನಗೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಒಂದು ಸಂದರ್ಭದಲ್ಲಿ ನಾನು ಪೋರ್ಚುಗಲ್​ನಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದೆ. ಆದರೆ ಪ್ರಯೋಜನವಾಗಲಿಲ್ಲ. ಅಂದು ನನಗೆ ಆಹಾರ ಒದಗಿಸಿದ ಅವರನ್ನು ಭೇಟಿಯಾಗಬೇಕೆಂಬ ಮಹದಾಸೆಯಿದೆ. ಅವರನ್ನು ಮನೆಗೆ ಕರೆಸಿ ಅವರೊಂದಿಗೆ ಸ್ಪೆಷಲ್ ಡಿನ್ನರ್ ಮಾಡಬೇಕು. ಅಲ್ಲದೆ ನನ್ನ ಬಾಲ್ಯದ ಹಸಿವು ನೀಗಿಸಿದ ಅವರಿಗೆ ಧನ್ಯವಾದ ಹೇಳಬೇಕು ಎಂದು ರೊನಾಲ್ಡೊ ಹೇಳಿದರು.

ಕೊನೆಗೂ ಸಿಕ್ಕಿದ್ರಾ ಅಡೆನಾ?
ಈ ಸಂದರ್ಶನ ಭಾರೀ ವೈರಲ್ ಕೂಡ ಆಗಿದೆ. ಅಲ್ಲದೆ ಇಂಟರ್​ವ್ಯೂ ನಡೆಸಿದ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೊರ್ಗನ್ ರೊನಾಲ್ಡೊ ಅವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ಅಂದು ಅನ್ನ ಹಾಕಿದ ಮೂವರು ಹುಡುಗಿಯರಲ್ಲಿ ಒಬ್ಬರು ಸಿಕ್ಕಿದ್ದಾರೆಂದು. ಪೋರ್ಚುಗಲ್ ರೆಡಿಯೋವೊಂದು ಪೌಲಾ ಲೆಕಾ ಎಂಬ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಮೆಕ್​ಡೋನಾಲ್ಡ್​​ ಈಕೆ ಕೆಲಸಕ್ಕಿದ್ದಾಗ ಅಲ್ಲಿ ಅಡೆನಾ ಸೀನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರಂತೆ.

ರೊನಾಲ್ಡೊ ಕಥೆಯನ್ನು ಕೇಳಿದ ಪೌಲಾ ಅವರು ಹೇಳಿದ ಅಡೆನಾ ಅವರೇ ಆಗಿದ್ದಾರೆ. ಆದರೆ ಈಗ ಅವರು ನನ್ನ ಸಂಪರ್ಕದಲ್ಲಿಲ್ಲ ಎಂದು ರೆಡಿಯೋಗೆ ತಿಳಿಸಿದ್ದಾರೆ. ರಾತ್ರಿ ವೇಳೆ ಉಳಿದ ಬರ್ಗರ್​ಗಾಗಿ ರೊನಾಲ್ಡೊ ಹಾಗೂ ಕೆಲ ಹುಡುಗರು ಬರುತ್ತಿದ್ದರು. ನಾವು ಅವರಿಗೆ ಅಳಿದು ಉಳಿದು ಹೋದ ಬರ್ಗರ್​ಗಳನ್ನು ನೀಡುತ್ತಿದ್ದೆವು ಎಂದು ಪೌಲಾ ತಿಳಿಸಿದ್ದಾರೆ. ಇಂತಹದೊಂದು ಸುದ್ದಿ ಹೊರಬೀಳುತ್ತಿದ್ದಂತೆ ಇದೀಗ ಪೋರ್ಚುಗಲ್​ನಲ್ಲಿ ಅಡೆನಾ ಹೆಸರು ಚರ್ಚೆಗೆ ಬಂದಿದೆ. ಮೂವರಲ್ಲಿ ಒಬ್ಬರು ಅದು ನಾನೇ ಅಂದಿರುವುದು ಇದೀಗ ರೊನಾಲ್ಡೊ ಹುಡುಕಾಟವನ್ನು ಜೀವಂತವಾಗಿರಿಸಿದೆ.ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ : ಆಕ್ರಮಣಕಾರಿ ಆಟಗಾರನ ಮಾನವೀಯತೆ

ಮಾನವೀಯತೆಯ ಸರದಾರ:
ಕಳೆದ ವರ್ಷ ಪತ್ನಿ ಮತ್ತು ಪುತ್ರನೊಂದಿಗೆ ಗ್ರೀಸ್ ಪ್ರವಾಸ ಹೋದ ಸಂದರ್ಭದಲ್ಲಿ ಪೋರ್ಚುಗಲ್​ ಆಟಗಾರ ಕೋಸ್ಟಾ ನವರಿನೊ ಎಂಬ ರೆಸ್ಟೊರೆಂಟ್​ನಲ್ಲಿ ತಂಗಿದ್ದರು. ಫುಟ್​ಬಾಲ್ ಮೈದಾನದಲ್ಲಿ ಕಾಲಿನಿಂದಲೇ ಕಾವ್ಯ ರಚಿಸುವ ಆಟಗಾರನ ಉಪಚರಿಸುವುದೇ ಭಾಗ್ಯ ಎಂದು ತಿಳಿದಿದ್ದ ಅಲ್ಲಿನ ಸಿಬ್ಬಂದಿಗೆ ಕೊನೆಗೆ ಅಚ್ಚರಿಯೊಂದು ಕಾದಿತ್ತು.

ತಮ್ಮ ವಿಶ್ರಾಂತಿ ಮುಗಿಸಿ ಪಯಣ ಮುಂದುವರೆಸಿದ್ದ ರೊನಾಲ್ಡೊ ಹೊರಡುವ ಮುನ್ನ 20000 ಯೂರೋ ಹಣವನ್ನು ಟಿಪ್ಸ್​ ಆಗಿ ನೀಡಿದ್ದರು. ಅಂದರೆ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚಿನ ಮೊತ್ತ. ಈ ಟಿಪ್ಸ್​ ಅನ್ನು ತಮಗಾಗಿ ಸಮಯ ವ್ಯಯಿಸಿದ ಸಿಬ್ಬಂದಿಗಳಿಗೆ ಹಂಚುವಂತೆ ಕ್ರಿಸ್ಟಿಯಾನೊ ರೆಸ್ಟೊರೆಂಟ್​ ಮ್ಯಾನೇಜರ್​ಗೆ ತಿಳಿಸಿದ್ದರು.

ಇದನ್ನೂ ಓದಿ: ಜಿಯೋ  ಡಿಟಿಹೆಚ್​ ಎಫೆಕ್ಟ್: ಗ್ರಾಹಕರಿಗೆ ಉಚಿತ ಸೇವೆ, ಕ್ಯಾಶ್​ಬ್ಯಾಕ್ ಆಫರ್ ​ನೀಡಿದ ಡಿಶ್ ಟಿವಿ ಕಂಪೆನಿಗಳು

ರೊನಾಲ್ಡೊ ಕುಟುಂಬವನ್ನು 10 ಮಂದಿಯ ತಂಡ ಉಪಚರಿಸಿದ್ದು, ತಲಾ 2 ಸಾವಿರ ಯುರೋನಂತೆ ಈ ಟಿಪ್ಸ್​ ಹಣವನ್ನು ಹಂಚಲಾಯಿತು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್ಟಿಯಾನೊ ಫೋಟೋವನ್ನು ಹಾಕಿ ರೆಸ್ಟೊರೆಂಟ್​ ಸಿಬ್ಬಂದಿಗಳು ಧನ್ಯವಾದ ತಿಳಿಸಿದ್ದರು. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಮೈದಾನದ ಹೊರಗೆ ಕ್ರಿಸ್ಟಿಯಾನೊ ರೊನಾಲ್ಡೊ ಹೀರೋ ಆಗಿ ಮಿಂಚಿದ್ದಾರೆ. ಅಲ್ಲದೆ ಫುಟ್​ಬಾಲ್​ ಲೋಕದ ವಿಶಾಲ ಹೃದಯಿ ಎಂಬ ಮೆಚ್ಚುಗೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದಿತ್ತು.

ಇದೀಗ ರೊನಾಲ್ಡೊ ಅವರ ಮತ್ತೊಂದು ಮುಖ ಕೂಡ ಅನಾವರಣವಾಗಿದೆ. ತನಗಾಗಿ 12ನೇ ವಯಸ್ಸಿನಲ್ಲಿ ಆಹಾರ ನೀಡಿದ ಮಹಿಳೆಯರನ್ನು ಕಳೆದ 22 ವರ್ಷಗಳಿಂದ ನೆನಪಲ್ಲಿಟ್ಟು ಹುಡುಕಾಟ ನಡೆಸುತ್ತಿರುವುದಕ್ಕೆ ಏನೆನ್ನೋಣ? ಇದಲ್ಲವೇ ಮಾನವೀಯತೆ/ಕೃತಜ್ಞತೆ.
First published: September 20, 2019, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading