ಪ್ರತಿಯೊಬ್ಬರಿಗೂ ತಮ್ಮ ಪ್ರೀತಿಪಾತ್ರರ (Loved ones) ಜನ್ಮದಿನಕ್ಕೆ (Birthday) ಮರೆಯಲಾಗದ ಉಡುಗೊರೆ (Gift) ಕೊಡಬೇಕು ಎಂಬ ಬಯಕೆ ಇದ್ದೇ ಇರುತ್ತದೆ.. ಅದರಲ್ಲೂ ಮನ ಮೆಚ್ಚಿದ ಮಡದಿ (Wife) ಅಥವಾ ಪತಿಗೆ (Husband) ಪ್ರತಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ (Celebration) ಮಾಡಿ ಸದಾಕಾಲ ನೆನಪಿನಲ್ಲಿ ಇರಬೇಕೆಂಬ ಬಯಕೆ ಪ್ರತಿಯೊಬ್ಬರಲ್ಲೂ ಇರುತ್ತದೆ.
ಹೀಗಾಗಿಯೇ ಕೆಲವರು ವಿಶೇಷವಾಗಿ ಪ್ಲಾನ್ (Plan) ಮಾಡಿ ತಮ್ಮ ಮೆಚ್ಚಿದವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.. ಅದರಲ್ಲೂ ಶ್ರೀಮಂತ ವ್ಯಕ್ತಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ ವೈಭವೋಪೇತವಾಗಿ ನಾವು ಮೆಚ್ಚಿದವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಾರೆ.. ಇಂಥವರ ಸಾಲಿಗೆ ಫುಟ್ಬಾಲ್ ದಂತಕತೆ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಸೇರ್ಪಡೆಯಾಗುತ್ತಾರೆ..
ಲಕ್ಷ ಲಕ್ಷ ಖರ್ಚು ಮಾಡಿ ಪತ್ನಿಯ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟ ರೊನಾಲ್ಡೊ
ಫುಟ್ಬಾಲ್ ದಂತಕಥೆ, ಸ್ಟಾರ್ ಆಟಗಾರ ಮ್ಯಾಂಚೆಸ್ಟರ್ ಯುನೈಟೆಡ್ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ತಮ್ಮ ಗೆಳತಿ ಜಾರ್ಜಿನಾ ರೋಡ್ರಿಗಸ್ಗೆ ಎಂದು ಮರೆಯದ ಜನ್ಮದಿನದ ಉಡುಗೊರೆಯನ್ನೇ ನೀಡಿದ್ದಾರೆ.. ವಿಶ್ವದ ಅತಿ ಹೆಚ್ಚು ಎತ್ತರವಾದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ದುಬೈ ಬುರ್ಜ್ ಖಲೀಫಾ ಮೇಲೆ ತಮ್ಮ ಮಡದಿಯ ಲೇಸರ್ ಶೋ ವನ್ನ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಏರ್ಪಡಿಸುವ ಮೂಲಕ ಹುಟ್ಟುಹಬ್ಬಕ್ಕೆ ಮರೆಯಲಾಗದ ಉಡುಗೊರೆಯನ್ನು ಕ್ರಿಸ್ಚಿಯಾನೋ ರೋನಾಲ್ಡೋ ನೀಡಿದ್ದಾರೆ..
ಇದನ್ನೂ ಓದಿ: ಗಂಡು ಮಗುವನ್ನು ಬರಮಾಡಿಕೊಂಡ ಯುವರಾಜ್ ಸಿಂಗ್- ಹಜೆಲ್ ಕೀಚ್
ಗೆಳತಿಯ 28ನೇ ವರ್ಷದ ಹುಟ್ಟುಹಬ್ಬ ಅವಿಸ್ಮರಣೀಯವಾಗಿಸಿದ ರೋನಾಲ್ಡೋ
28ನೇ ವರ್ಷಕ್ಕೆ ಕಾಲಿಟ್ಟ ಜಾರ್ಜಿನಾ ರೊಡ್ರಿಗಸ್ಗೆ ಅವರ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿ ಇರಿಸಲು ದುಬೈನ ಹೃದಯಭಾಗದಲ್ಲಿರುವ ಬುರ್ಜ್ ಖಲೀಫಾ ಮೇಲೆ 50,000 ಪೌಂಡ್ಗಳಷ್ಟು ಹಣ ಖರ್ಚು ಮಾಡಿ ಬರೋಬ್ಬರಿ ಮೂವತ್ತು ಸೆಕೆಂಡುಗಳ ಕಾಲ ಲೇಸರ್ ಶೋ ಏರ್ಪಡಿಸಿದ್ದಾರೆ.. ಬುರ್ಜ್ ಖಲೀಫಾ ಮೇಲೆ ಜಾರ್ಜಿನಾ ರೊಡ್ರಿಗಸ್ ಫೋಟೋ ಜೊತೆಗೆ ಹ್ಯಾಪಿ ಬರ್ತಡೇ ಜಿಯೋ ಎಂದು ಲೇಸರ್ ಶೋ ಏರ್ಪಡಿಸುವ ಮೂಲಕ ಗೆಳತಿಗೆ ಮರೆಯಲಾಗದ ಹುಟ್ಟುಹಬ್ಬದ ಉಡುಗೊರೆಯನ್ನು ಕ್ರಿಸ್ಟಿಯಾನೋ ರೊನಾಲ್ಡೊ ನೀಡಿದ್ದಾರೆ.
ದುಬೈ ಪ್ರವಾಸದಲ್ಲಿರುವ ರೊನಾಲ್ಡೊ
ಇನ್ನೂ 370 ಮಿಲಿಯನ್ ಪೌಂಡ್ ಆಸ್ತಿಯ ಒಡೆಯನಾಗಿರುವ 36 ವರ್ಷದ ರೊನಾಲ್ಡೊ, ಸದ್ಯ ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಿದ್ದು,ಚಳಿಗಾಲದ ವಿರಾಮದ ಸಮಯವನ್ನು ಕುಟುಂಬದೊಂದಿಗೆ ದುಬೈನಲ್ಲಿ ಕಳೆಯುತ್ತಿದ್ದಾರೆ.
ಅರ್ಜೆಂಟೀನಾ ಮೂಲದ ಜಾರ್ಜಿನಾ ಅವರನ್ನು 2016ರಲ್ಲಿ ಸ್ಪೇನ್ನಲ್ಲಿ ರೊನಾಲ್ಡೋ ಹಾಗೂ ಜಾರ್ಜಿನಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಭೇಟಿ ಪರಿಚಯಕ್ಕೆ ತಿರುಗಿ ಆನಂತರ ಡೇಟಿಂಗ್ ನಡೆಸಲಾರಂಭಿಸಿದರು.ಬಳಿಕ ಇವರಿಬ್ಬರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ರೊನಾಲ್ಡೊ ಮತ್ತು ಜಾರ್ಜಿನಾ ದಂಪತಿಗಳಿಗೆ ನಾಲ್ಕು ವರ್ಷದ ಮಗನೂ ಇದ್ದು, ಆತ ಕೂಡ ಅವರೊಂದಿಗೆ ರಜೆಯ ಮಜಾದಲ್ಲಿದ್ದಾನೆ.
ಸದ್ಯ ಜಾರ್ಜಿನಾ ಹಾಗೂ ರೊನಾಲ್ಡೋ ಮತ್ತೊಮ್ಮೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.. ಈ ವಿಷಯವನ್ನ ಕೆಲವು ತಿಂಗಳುಗಳ ಹಿಂದಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ವತಹ ರೋನಾಲ್ಡೋ ಅವರೇ ಬಹಿರಂಗಪಡಿಸಿದ್ದರು.
ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಸಿಕ್ತು ಕೊಹ್ಲಿ ಪುತ್ರಿ ದರ್ಶನ.. ಥೇಟ್ ಅಪ್ಪನಂತೆ ಮುದ್ದಾಗಿದ್ದಾಳೆ ವಮಿಕಾ!
ಇನ್ನು ಐಕಾನಿಕ್ ಟವರ್ ಬುರ್ಜ್ ಖಲೀಫಾ ಮೇಲೆ ರಾತ್ರಿಯಲ್ಲಿ ಪ್ರಸಾರವಾಗುವ ಲೇಸರ್ ಶೋ ಗೆ ಭಾರಿ ಡಿಮ್ಯಾಂಡ್ ಇದ್ದು ಇದನ್ನು ನೋಡಲು ಪ್ರಪಂಚದ ನಾನಾ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಜನರು ಬರುತ್ತಲೇ ಇರುತ್ತಾರೆ... ಇತ್ತೀಚಿನ ವರದಿಗಳ ಪ್ರಕಾರ ಬುರ್ಜ್ ಖಲೀಫಾದ ಮುಂಭಾಗದಲ್ಲಿ ಮೂರು-ನಿಮಿಷದ ಪ್ರಚಾರ ಜಾಹೀರಾತು ಅಥವಾ ಸಂದೇಶವನ್ನು ಹಾಕಲು ಬರೊಬ್ಬರಿ ಕನಿಷ್ಠ 50,000 ಪೌಂಡ್ಗಳನ್ನು ಪಾವತಿಸಬೇಕು. ವರದಿಗಳ ಪ್ರಕಾರ ಈ ಮೊತ್ತ ವಾರಾಂತ್ಯದಲ್ಲಿ ಇನ್ನೂ ಹೆಚ್ಚಾಗಿರುತ್ತದೆ.. ಹೀಗಾಗಿ ಸಾಕಷ್ಟು ಸೆಲೆಬ್ರಿಟಿಗಳು ಕೋಟ್ಯಾಂತರ ರೂ ಹಣ ಖರ್ಚು ಮಾಡಿ ಬುರ್ಜ್ ಖಲೀಫಾ ಮೇಲೆ ತಮ್ಮ ಲೇಸರ್ ಶೋ ಪ್ರದರ್ಶನ ಏರ್ಪಡಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ