ಈ ಕ್ರೀಡಾಪಟುಗಳಿಗೆ ಐಷಾರಾಮಿ ಕಾರುಗಳು (Cars), ಬೈಕುಗಳು (Bikes) ಎಂದರೆ ತುಂಬಾನೇ ಇಷ್ಟ ಅಂತ ಕಾಣುತ್ತದೆ. ಭಾರತದ ಕ್ರಿಕೆಟ್ (Indian Cricket) ತಂಡದ ಮಾಜಿ ನಾಯಕ ಎಂ ಎಸ್ ಧೋನಿ (M.S.Dhoni) ಅವರಿಗೂ ಈ ಐಷಾರಾಮಿ ಕಾರುಗಳು, ಬೈಕುಗಳು ಎಂದರೆ ತುಂಬಾನೇ ಇಷ್ಟ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಹಾಗೆಯೇ ಈ ಫುಟ್ಬಾಲ್ ಆಟಗಾರರಿಗೂ (Football Player) ಈ ಐಷಾರಾಮಿ ಕಾರುಗಳು, ಸ್ಪೋರ್ಟ್ಸ್ ಕಾರುಗಳು ಎಂದರೆ ತುಂಬಾನೇ ಪ್ರೀತಿ ಅಂತ ಹೇಳಬಹುದು. ಹೀಗೆ ತನ್ನ ಪತಿಯ ಇಷ್ಟವನ್ನು ಅರಿತುಕೊಂಡು ಜನಪ್ರಿಯ ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರಿಗೆ ಅವರ ಹೆಂಡತಿ ಜಾರ್ಜಿನಾ ರೊಡ್ರಿಗಸ್ (Georgina Rodriguez) ಅವರು ರೋಲ್ಸ್ ರಾಯ್ಸ್ (Rolls-Royce) ಅನ್ನು ಉಡುಗೊರೆಯಾಗಿ ನೀಡಿದ್ದಾರೆ ನೋಡಿ.
ಒಂದು ತಿಂಗಳ ಹಿಂದೆಯಷ್ಟೆ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ತಮ್ಮ ಒಪ್ಪಂದವನ್ನು ಕೊನೆಗೊಳಿಸಿದ್ದ ರೊನಾಲ್ಡೊ ಅವರು ಸದ್ಯಕ್ಕೆ ಯಾವುದೇ ಫುಟ್ಬಾಲ್ ಕ್ಲಬ್ ಗೆ ಇನ್ನೂ ಸೇರಿಲ್ಲ, ಮನೆಯಲ್ಲಿಯೇ ಅವರು ತಮ್ಮ ಕುಟುಂಬದೊಡನೆ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ ನೋಡಿ.
View this post on Instagram
ರೊನಾಲ್ಡೊ ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಖಾತೆಯ ಪೇಜ್ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಅದರಲ್ಲಿ ಅವರು ಉಡುಗೊರೆಯಾಗಿ ನೀಡಬೇಕೆಂದಿದ್ದ ಹೊಚ್ಚ ಹೊಸ ರೋಲ್ಸ್-ರಾಯ್ಸ್ ಅನ್ನು ದೊಡ್ಡ ರಿಬ್ಬನ್ ನಿಂದ ಸುತ್ತಲಾಗಿದೆ. ರೊನಾಲ್ಡೊ ತನ್ನ ಸಂಗಾತಿ ತನಗಾಗಿ ಏನು ಉಡುಗೊರೆಯನ್ನು ತಂದಿದ್ದಾಳೆ ಅಂತ ನೋಡಲು ಬಂದಾಗ ಈ ದೊಡ್ಡ ಐಷಾರಾಮಿ ಕಾರನ್ನು ನೋಡಿ ಒಂದು ಕ್ಷಣ ತುಂಬಾನೇ ಆಶ್ಚರ್ಯಚಕಿತರಾದರು.
ಪೋರ್ಚುಗೀಸ್ ಫುಟ್ಬಾಲ್ ಆಟಗಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮಗೆ ತಮ್ಮ ಸಂಗಾತಿ ನೀಡಿದ ಐಷಾರಾಮಿ ಕಾರಿನ ಫೋಟೋವನ್ನು ಮತ್ತು ತಮ್ಮ ಪ್ರೀತಿಯ ಸಂಗಾತಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಒಂದು ಸಂದೇಶವನ್ನು ಸಹ ಪೋಸ್ಟ್ ಮಾಡಿದ್ದಾರೆ.
ರೊನಾಲ್ಡೊ ಅವರ ಸಂಗಾತಿ ಜಾರ್ಜಿನಾ ಹಂಚಿಕೊಂಡ ವೀಡಿಯೋದಲ್ಲಿ ಏನೆಲ್ಲಾ ಇದೆ ಗೊತ್ತೇ?
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ, ರೊಡ್ರಿಗಸ್ ತನ್ನ ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಹೇಗೆಲ್ಲಾ ಆಚರಿಸಿದರು ಅಂತ ಅದರ ಒಂದು ನೋಟವನ್ನು ಅಭಿಮಾನಿಗಳಿಗೆ ನೀಡಿದರು.
ರೋಲ್ಸ್ ರಾಯ್ಸ್ ಕಾರು, ಕೆಲವು ಲೂಯಿಸ್ ವಿಟ್ಟನ್ ಬ್ಯಾಗ್ ಗಳು ಮತ್ತು ಮಕ್ಕಳಿಗಾಗಿ ಕೆಲವು ಬೈಸಿಕಲ್ ಗಳು ಸೇರಿದಂತೆ ಕೆಲವು ಅದ್ದೂರಿ ಉಡುಗೊರೆಗಳನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದು.
"ಧನ್ಯವಾದಗಳು, ನನ್ನ ಲವ್" ಎಂದು ರೊನಾಲ್ಡೊ ಉತ್ತರಿಸುತ್ತಾ, ರೋಲ್ಸ್ ರಾಯ್ಸ್ ಗಾಗಿ ತನ್ನ ಸಂಗಾತಿಗೆ ಧನ್ಯವಾದ ಅರ್ಪಿಸಿದ್ದಾರೆ. ಮಿರರ್ ಯುಕೆ ಪ್ರಕಾರ, ಈ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ ಎಂದು ವರದಿಯಾಗಿದೆ, ಇದು ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಫುಟ್ಬಾಲ್ ತಾರೆ ಇನ್ನೂ ಯಾವುದೇ ಫುಟ್ಬಾಲ್ ಕ್ಲಬ್ ಗೆ ಸೇರಿಲ್ಲ
'ಪರಸ್ಪರ ಒಪ್ಪಂದ' ದ ಮೂಲಕ ನವೆಂಬರ್ ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ತೊರೆದಾಗಿನಿಂದ, ಪೋರ್ಚುಗೀಸ್ ತಾರೆ ಇನ್ನೂ ಹೊಸ ಫುಟ್ಬಾಲ್ ಕ್ಲಬ್ ನ ಹುಡುಕಾಟದಲ್ಲಿದ್ದಾರೆ ಎಂದು ಹೇಳಬಹುದು.
ಕೆಲವು ವರದಿಗಳು ಅವರು ಸೌದಿ ಅರೇಬಿಯಾದ ಅಲ್-ನಾಸರ್ ಕ್ಲಬ್ ಗೆ ಸೇರಲಿದ್ದಾರೆ ಎಂದು ಸೂಚಿಸಿವೆ, ಆದರೆ 37 ವರ್ಷದ ಅವರು ಕ್ಲಬ್ ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದನ್ನು ಸಾರ್ವಜನಿಕವಾಗಿ ನಿರಾಕರಿಸಿದ್ದಾರೆ.
ಫಿಫಾ ವಿಶ್ವಕಪ್ 2022 ರಲ್ಲಿ ರೊನಾಲ್ಡೊ ಪೋರ್ಚುಗಲ್ ನೊಂದಿಗೆ ಉತ್ತಮ ಸಮಯವನ್ನು ಹೊಂದಿರಲಿಲ್ಲ. ಯುನೈಟೆಡ್ ನ ಎಲ್ಲಾ ಗುಂಪು-ಹಂತದ ಆಟಗಳನ್ನು ಪ್ರಾರಂಭಿಸಿದ ನಂತರ, ಅನುಭವಿ ಫಾರ್ವರ್ಡ್ ಆಟಗಾರರಾದ ಇವರನ್ನು 16 ಸುತ್ತಿನ ಪಂದ್ಯಗಳಲ್ಲಿ ಮತ್ತು ಕ್ವಾರ್ಟರ್-ಫೈನಲ್ ಪಂದ್ಯಗಳಲ್ಲಿ ಬೆಂಚ್ ಮೇಲೆಯೇ ಕೂರಿಸಲಾಯಿತು.
ಪೋರ್ಚುಗಲ್ ಅಂತಿಮವಾಗಿ ಕೊನೆಯ 8 ರ ಹಂತದಲ್ಲಿ ಸ್ಪರ್ಧೆಯಿಂದ ಹೊರಬಿದ್ದಿತು, ಮೊರಾಕ್ಕೊ ವಿರುದ್ಧ 0-1 ಗೋಲಿನಿಂದ ಸೋಲನುಭವಿಸಿತು.
ಪೋರ್ಚುಗಲ್ ನ ವಿಶ್ವಕಪ್ ಅಭಿಯಾನ ಮುಗಿದ ಸ್ವಲ್ಪ ಸಮಯದ ನಂತರ, ರೊನಾಲ್ಡೊ ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪೋರ್ಚುಗಲ್ ಗಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ ಎಂದು ಖಚಿತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ