• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Sports: ತಂದೆಯನ್ನು ಕಳೆದುಕೊಂಡ ಪುಟ್ಟ ಅಭಿಮಾನಿಯನ್ನ ತಬ್ಬಿಕೊಂಡು ಧೈರ್ಯ ತುಂಬಿದ ಕ್ರಿಸ್ಟಿಯಾನೊ ರೊನಾಲ್ಡೊ

Sports: ತಂದೆಯನ್ನು ಕಳೆದುಕೊಂಡ ಪುಟ್ಟ ಅಭಿಮಾನಿಯನ್ನ ತಬ್ಬಿಕೊಂಡು ಧೈರ್ಯ ತುಂಬಿದ ಕ್ರಿಸ್ಟಿಯಾನೊ ರೊನಾಲ್ಡೊ

ರೊನಾಲ್ಡೊ ಮತ್ತು ಹುಡುಗ

ರೊನಾಲ್ಡೊ ಮತ್ತು ಹುಡುಗ

ಸಿರಿಯಾ ಮತ್ತು ಟರ್ಕಿಯನ್ನು ನಡುಗಿಸಿದ ಭೂಕಂಪಗಳಲ್ಲಿ ತನ್ನ ತಂದೆಯನ್ನು ಕಳೆದುಕೊಂಡ 10 ವರ್ಷದ ಹುಡುಗನನ್ನು ಕ್ರಿಸ್ಟಿಯಾನೊ ರೊನಾಲ್ಡೊ ಭೇಟಿ ಮಾಡುವ ಮೂಲಕ ಅನೇಕ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

  • Share this:

    ಕ್ರಿಕೆಟ್ (Cricket) ಆಟದಲ್ಲಿ ಬಹುಶಃ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಇಡೀ ಜಗತ್ತಿನಾದ್ಯಂತ ಎಷ್ಟು ಜನ ಅಭಿಮಾನಿಗಳು ಇದ್ದಾರೋ, ಫುಟ್‌ಬಾಲ್ ಆಟಗಾರನಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೂ ಸಹ ಅಷ್ಟೇ ಜನ ಅಭಿಮಾನಿಗಳಿದ್ದಾರೆ. ಜನಪ್ರಿಯ ಫುಟ್‌ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಲೇ ಇರುತ್ತದೆ. ಈಗಲೂ ಸಹ ಕ್ರಿಸ್ಟಿಯಾನೊ ಅವರ ಒಂದು ಭಾವುಕ ಕ್ಷಣದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ (Social Media) ಫುಲ್ ವೈರಲ್ ಆಗಿದೆ.


    ಸೌದಿ ಅರೇಬಿಯಾ ಕ್ಲಬ್ ಅಲ್-ನಾಸರ್ ಗೆ ತೆರಳಿದ ನಂತರ ಕ್ರಿಸ್ಟಿಯಾನೊ ಈ ಹಿಂದೆಗಿಂತಲೂ ತುಂಬಾನೇ ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ತಂದೆಯನ್ನು ಕಳೆದುಕೊಂಡ ಹುಡುಗನನ್ನು ತಬ್ಬಿಕೊಂಡ ರೊನಾಲ್ಡೊ


    ಪೋರ್ಚುಗೀಸ್ ಸೂಪರ್ ಸ್ಟಾರ್ ಇತ್ತೀಚೆಗೆ ಸಿರಿಯಾ ಮತ್ತು ಟರ್ಕಿಯನ್ನು ನಡುಗಿಸಿದ ಭೂಕಂಪಗಳಲ್ಲಿ ತನ್ನ ತಂದೆಯನ್ನು ಕಳೆದುಕೊಂಡ 10 ವರ್ಷದ ಹುಡುಗನನ್ನು ಕ್ರಿಸ್ಟಿಯಾನೊ ರೊನಾಲ್ಡೊ ಭೇಟಿ ಮಾಡುವ ಮೂಲಕ ಅನೇಕ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾರೆ ಅಂತ ಹೇಳಬಹುದು.


    ಕ್ಲಬ್ ಆಯೋಜಿಸಿದ್ದ ಸಭೆಯಲ್ಲಿ ರೊನಾಲ್ಡೊ ಆ ತಂದೆಯನ್ನು ಕಳೆದುಕೊಂಡು ಪುಟ್ಟ ಬಾಲಕನನ್ನು ತಬ್ಬಿಕೊಂಡು ಮಾತನಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.


    ಇದನ್ನೂ ಓದಿ: ಭಾರತ ತಂಡದಲ್ಲಿ ಉಮೇಶ್‌ ಸೈಡ್‌ಲೈನ್‌ ಆಟಗಾರ, ಹೀಗ್ಯಾಕ್ ಹೇಳಿದ್ರು ದಿನೇಶ್​ ಕಾರ್ತಿಕ್?


    ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟಿಯ ಸೌದಿ ನಿರ್ದೇಶಕರ ಮಂಡಳಿಯ ಅಧ್ಯಕ್ಷ ತುರ್ಕಿ ಅಲ್-ಶೇಖ್ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸಿರಿಯಾ ಮೂಲದ ನಬಿಲ್ ಸಯೀದ್ ಎಂದು ಗುರುತಿಸಲ್ಪಟ್ಟ ಬಾಲಕನನ್ನು ತಮ್ಮ ತವರು ಮೈದಾನದಲ್ಲಿ ಅಲ್-ನಾಸರ್ ತಂಡವು ಆಡುವುದನ್ನು ನೋಡಲು ಆಹ್ವಾನಿಸಲಾಯಿತು ಮತ್ತು ಅವನು ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೊಡ್ಡ ಅಭಿಮಾನಿಯಾಗಿದ್ದನು.



    ಕಳೆದ ದಶಕದಲ್ಲಿ ಫುಟ್‌ಬಾಲ್ ಅಭಿಮಾನಿಗಳಲ್ಲಿ ರೊನಾಲ್ಡೊ ಮತ್ತು ಮೆಸ್ಸಿಯದ್ದೆ ಮಾತು..


    ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಡುವಿನ ಹೋಲಿಕೆಗಳು ಕಳೆದ ದಶಕದಲ್ಲಿ ಫುಟ್ಬಾಲ್ ಅಭಿಮಾನಿಗಳ ನಡುವಿನ ಸಂಭಾಷಣೆಗಳಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದಾಗ್ಯೂ, ಕಳೆದ ಒಂದು ವರ್ಷದಲ್ಲಿ, ಮೆಸ್ಸಿ ಅರ್ಜೆಂಟೀನಾವನ್ನು ಫಿಫಾ ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ್ದರಿಂದ ಮತ್ತು ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ನಲ್ಲಿ ಒಲವು ಕಳೆದುಕೊಂಡು ಸೌದಿ ಅರೇಬಿಯಾದ ಅಲ್-ನಾಸರ್ ಗೆ ಸೇರುವುದರಿಂದ ಚರ್ಚೆಯು ಸ್ವಲ್ಪಮಟ್ಟಿಗೆ ಅಸಮತೋಲನಗೊಂಡಿದ್ದವು ಅಂತ ಹೇಳಬಹುದು.


    ರೊನಾಲ್ಡೊ ಮತ್ತು ಹುಡುಗ


    ಸೌದಿ ಅರೇಬಿಯಾದ ಪ್ರತಿಸ್ಪರ್ಧಿ ಕ್ಲಬ್ ಬೆಂಬಲಿಗರಿಂದ ರೊನಾಲ್ಡೊ ಅವರನ್ನು ಮೆಸ್ಸಿ ಸ್ವಾಗತಿಸಿದರು ಮತ್ತು ಅಲ್ ಬಾಟೆನ್ ವಿರುದ್ಧ ಅವರ ತಂಡದ ಗೆಲುವಿನ ನಂತರ ಅಂತಹ ಮತ್ತೊಂದು ಘಟನೆ ನಡೆಯಿತು. ರೊನಾಲ್ಡೊ ಸುರಂಗದ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಯುವ ಅಭಿಮಾನಿಯೊಬ್ಬರು ಮೆಸ್ಸಿ ಉತ್ತಮವಾಗಿದ್ದಾರೆ ಎಂದು ಕೂಗಿದರು.


    2022ನೇ ಸಾಲಿನ ಅತ್ಯುತ್ತಮ ಫಿಫಾ ಆಟಗಾರ ಪ್ರಶಸ್ತಿ ಪಡೆದ ಮೆಸ್ಸಿ


    ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ 2022ನೇ ಸಾಲಿನ ಅತ್ಯುತ್ತಮ ಫಿಫಾ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೆಸ್ಸಿ 2016 ರಲ್ಲಿ ಫಿಫಾ ಉದ್ಘಾಟಿಸಿದ ಗೌರವವನ್ನು ಗೆದ್ದಿರುವುದು ಇದು ಎರಡನೇ ಬಾರಿ ಅಂತ ಹೇಳಬಹುದು.




    35 ವರ್ಷದ ಮೆಸ್ಸಿ ತಮ್ಮ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಸಹ ಆಟಗಾರ ಮತ್ತು ವಿಶ್ವಕಪ್ ಫೈನಲ್ ಪ್ರತಿಸ್ಪರ್ಧಿ ಕೈಲಿಯನ್ ಎಂಬಾಪೆ ಮತ್ತು ಕರೀಮ್ ಬೆನ್ಜೆಮಾ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದರು. ಆಯ್ಕೆಯಾದ ರಾಷ್ಟ್ರೀಯ ತಂಡದ ನಾಯಕರು ಮತ್ತು ತರಬೇತುದಾರರು ಹಾಕಿದ ಮತಗಳ ಆಧಾರದ ಮೇಲೆ ಪ್ರಶಸ್ತಿಗೆ ವಿಜೇತರನ್ನು ನಿರ್ಧರಿಸಲಾಗುತ್ತದೆ.


    ಕ್ರಿಸ್ಟಿಯಾನೊ ರೊನಾಲ್ಡೊ ಬದಲಿಗೆ ಪೋರ್ಚುಗಲ್ ಪ್ರತಿನಿಧಿಯಾಗಿ ಪೆಪೆ ಮತ ಚಲಾಯಿಸಿದ್ದು ಆಶ್ಚರ್ಯಕರ ಸಂಗತಿಯಾಗಿದೆ. 2022 ರ ಫಿಫಾ ವಿಶ್ವಕಪ್ ಸಮಯದಲ್ಲಿ ಅಲ್-ನಾಸರ್ ಕ್ಲಬ್ ನ ಆಟಗಾರನನ್ನು ಅನೇಕ ಪಂದ್ಯಗಳಲ್ಲಿ ಬೆಂಚ್ ಮೇಲೆ ಕೂರಿಸಿದ್ದರಿಂದ ಪೋರ್ಚುಗಲ್ ನಾಯಕ ಮತದಾನದಿಂದ ದೂರ ಉಳಿದರು ಮತ್ತು ಆದ್ದರಿಂದ ಹಿರಿಯ ಆಟಗಾರ ಪೆಪೆಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು.

    Published by:Prajwal B
    First published: