ವಿರಾಟ್​ ಕೊಹ್ಲಿ ಔಟ್ ಅಥವಾ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

(AP Photo/Aijaz Rahi)

(AP Photo/Aijaz Rahi)

India vs New Zealand : ಥರ್ಡ್ ಅಂಪೈರ್ ಮೇಲ್ಮನವಿ ಪರಿಶೀಲಿಸಿದಾಗ ಚೆಂಡು ವಿಕೆಟ್ ತುದಿಯಲ್ಲಿ ಬೇಲ್ಸ್‌ಗಷ್ಟೇ ಬಡಿಯುತ್ತಿತ್ತು. ಅದರಂತೆ ಕೊಹ್ಲಿ ಔಟ್ ಎಂದು ತೀರ್ಪು ನೀಡಲಾಯಿತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಲೇ ಟೀಂ ಇಂಡಿಯಾ ನಾಯಕ ಹೊರ ನಡೆದಿದ್ದರು.

  • News18
  • 3-MIN READ
  • Last Updated :
  • Share this:

ವಿಶ್ವಕಪ್ ಮೊದಲ ಸೆಮಿ ಫೈನಲ್​ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಔಟಾಗಿರುವ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಟ್ರೆಂಟ್ ಬೌಲ್ಟ್​ ಎಸೆದ ಮೂರನೇ ಓವರ್​ನಲ್ಲಿ ಕೊಹ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾಗಿದ್ದರು.


ಬೌಲರ್ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಅಂಪೈರ್ ನೀಡಿದ ಈ ತೀರ್ಪಿನಿಂದ ಕೊಹ್ಲಿ ಕೋಪಗೊಂಡರು. ಅಷ್ಟೇ ಅಲ್ಲದೆ ಸಹ ಸಹ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಜತೆ ಸಮಾಲೋಚಿಸಿ ಡಿಆರ್​ಎಸ್​ ಮೊರೆ ಹೋದರು.ಥರ್ಡ್ ಅಂಪೈರ್ ಮೇಲ್ಮನವಿ ಪರಿಶೀಲಿಸಿದಾಗ ಚೆಂಡು ವಿಕೆಟ್ ತುದಿಯಲ್ಲಿ ಬೇಲ್ಸ್‌ಗಷ್ಟೇ ಬಡಿಯುತ್ತಿತ್ತು. ಅದರಂತೆ ಕೊಹ್ಲಿ ಔಟ್ ಎಂದು ತೀರ್ಪು ನೀಡಲಾಯಿತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಲೇ ಟೀಂ ಇಂಡಿಯಾ ನಾಯಕ ಹೊರ ನಡೆದಿದ್ದರು.


ಆದರೆ ಫೀಲ್ಡ್​ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಎಂಬ ಪ್ರಶ್ನೆಗಳು ಎದ್ದಿವೆ. ಥರ್ಡ್​ ಅಂಪೈರ್ ಎರಡು ಮೂರು ಬಾರಿ​ ರಿವ್ಯೂ ಪರೀಶಿಲಿಸಿದ ಬಳಿಕವಷ್ಟೇ ಬಾಲ್ ಬೇಲ್ಸ್​ಗೆ ಬಡಿದಿರುವುದು ಕಂಡು ಬಂದಿದೆ. ಅದೇಗೆ ಫೀಲ್ಡ್​ ಅಂಪೈರ್ ನೇರವಾಗಿ ಕೊಹ್ಲಿ ಔಟ್​ ಎಂದು ತೀರ್ಪು ನೀಡಿದ್ದರು ಎಂದು ಹಲವರು ಸಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಕೆಲವರು ಚಹಾಲ್, ಬುಮ್ರಾ ಎಸೆತದಲ್ಲಿ ಎಲ್​ಬಿ ಆಗಿದ್ದರೂ ಔಟ್ ನೀಡದ ಅಂಪೈರ್ ಕೊಹ್ಲಿಯನ್ನು ಬೇಗನೆ ಪೆವಿಲಿಯನ್​ ಕಳುಹಿಸುವ ತವಕದಲ್ಲಿದ್ದರು. ಇಲ್ಲಿ ಅಂಪೈರ್​ಗೆ ಇಂಡಿಯಾ ಗೆಲ್ಲುವುದು ಬೇಕಾಗಿಲ್ಲ. ಹಾಗೆಯೇ ಕೊಹ್ಲಿ ನಾಟೌಟ್​ ಆಗುವುದು ಕೂಡ ಎಂದು ಪ್ರತಿಕ್ರಿಯಿಸಿದ್ದಾರೆ.


Published by:zahir
First published: