• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಇದೇ ಮೊದಲ ಬಾರಿಗೆ ಜಾಹೀರಾತುವಿನಲ್ಲಿ ಕಾಣಿಸಿಕೊಂಡ ಧೋನಿ ಮಗಳು ಝೀವಾ: ಇಲ್ಲಿದೆ ವಿಡಿಯೋ

ಇದೇ ಮೊದಲ ಬಾರಿಗೆ ಜಾಹೀರಾತುವಿನಲ್ಲಿ ಕಾಣಿಸಿಕೊಂಡ ಧೋನಿ ಮಗಳು ಝೀವಾ: ಇಲ್ಲಿದೆ ವಿಡಿಯೋ

Ziva Singh Dhoni

Ziva Singh Dhoni

ಇದೀಗ ಎಂ ಎಸ್ ಧೋನಿ ಮಗಳು ಝೀವಾ ಕೂಡ ಅಪ್ಪನ ಹಾದಿಯನ್ನೇ ಅನುಸರಿಸುತ್ತಿದ್ದು, ಟಿವಿ ಜಾಹೀರಾತಿನಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

  • Share this:

    ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ವಿಶ್ವದಾದ್ಯಂತ ಎಷ್ಟು ಖ್ಯಾತಿ ಪಡೆದಿದ್ದಾರೋ ಅವರ ಮಗಳು ಝೀವಾ ಸಹ ಅಷ್ಟೇ ಹೆಸರುವಾಸಿ ಎಂಬುದರಲ್ಲಿ ಎರಡು ಮಾತಿಲ್ಲ. ಅಪ್ಪನ ಜೊತೆಗೆ ತರಲೆ ಮಾಡಿಕೊಳ್ಳುತ್ತಿರುವ ಝೀವಾ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಝೀವಾಳ ಫೋಟೋ ಅಥವಾ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹಾಕಿದರೆ ಅದು ವೈರಲ್ ಆಗುವುದು ಪಕ್ಕ. ಧೋನಿ ಝೀವಾ ಜೊತೆ ಆಟವಾಡುವ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇವೆ. ಇದು ಝೀವಾಳ ಇನ್​ಸ್ಟಾಗ್ರಾಂ ಖಾತೆ ನೋಡಿದರೆ ತಿಳಿಯುತ್ತದೆ. ಇನ್​ಸ್ಟಾದಲ್ಲಿ ಝೀವಾ ಅವರನ್ನು ಬರೋಬ್ಬರಿ 1.8 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಇವರು ಎಷ್ಟು ಫೇಮಸ್ ಎಂದು.


    ಇದೇ ಜನಪ್ರಿಯತೆ ಸದ್ಯ ಝೀವಾಳನ್ನು ಜಾಹೀರಾತು ಲೋಕಕ್ಕೆ ಕಾಲಿಡುವಂತೆ ಮಾಡಿದೆ. ಹೌದು, ಧೋನಿ ಈಗಾಗಲೆ ವಿವಿಧ ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಯಲ್ಲೂ ಸಾಕಷ್ಟು ಗಮನ ಸೆಳೆದಿದ್ದಾರೆ. ಇದೀಗ ಅವರ ಪುತ್ರಿ ಝೀವಾ ಕೂಡ ಅಪ್ಪನ ಹಾದಿಯನ್ನೇ ಅನುಸರಿಸುತ್ತಿದ್ದು, ಟಿವಿ ಜಾಹೀರಾತಿನಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ.


    India vs Australia: ರಟ್ಟಾಯ್ತು ಗುಟ್ಟು: ರೋಹಿತ್ ಶರ್ಮಾಗೆ ಉಪ ನಾಯಕ ಪಟ್ಟ ನೀಡಿದ್ದು ಯಾಕೆ ಗೊತ್ತೇ?


    6 ವರ್ಷದ ಪುತ್ರಿ ಝೀವಾ ಜತೆಗೆ ಧೋನಿ ಅವರು 'ಓರಿಯೊ' ಬಿಸ್ಕಿಟ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 'ಮೈದಾನಕ್ಕೆ ಯಾರು ಇಳಿದಿದ್ದಾರೆ ನೋಡಿ' ಎಂಬ ಅಡಿಬರಹದೊಂದಿಗೆ 'ಓರಿಯೋ ಇಂಡಿಯಾ' ಇನ್‌ಸ್ಟಾಗ್ರಾಂನಲ್ಲಿ ಧೋನಿ ಮತ್ತು ಝೀವಾ ಜಾಹೀರಾತಿನಲ್ಲಿ ನಟಿಸಿರುವ ಕ್ಷಣಗಳ ಚಿತ್ರವನ್ನು ಪ್ರಕಟಿಸಿದೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.



    ಭಾರತ ಕ್ರಿಕೆಟ್ ತಂಡಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ 2020ರ ಆಗಸ್ಟ್‌ 15ರಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೃತ್ತಿ ಬದುಕಿನ ಪ್ರಮುಖ ಫೋಟೊಗಳನ್ನು ಒಳಗೊಂಡ ವಿಡಿಯೋ ಒಂದನ್ನು ಹಂಚಿಕೊಂಡು ನಿವೃತ್ತಿ ಹೊಂದುತ್ತಿರುವ ಸಂಗತಿಯನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡರು.


    David Warner: ಸೂಪರ್ ಸ್ಟಾರ್ ರಜಿನಿಕಾಂತ್ ಅವತಾರ ತಾಳಿದ ವಾರ್ನರ್: ತಲೈವಾ ಫ್ಯಾನ್ಸ್ ಫುಲ್ ಖುಷ್


    2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಂತರ ದೀರ್ಘ ಅವಧಿಯ ವಿರಾಮ ತೆಗೆದುಕೊಂಡಿದ್ದ ಧೋನಿ, 2020ರಲ್ಲಿ ಆಯೋಜನೆಯಾಗಬೇಕಿದ್ದ ಟಿ-20 ವಿಶ್ವಕಪ್ ಟೂರ್ನಿ ಕೋವಿಡ್‌-19 ಕಾರಣ ಮುಂದೂಡಲ್ಪಟ್ಟ ಬೆನ್ನಲ್ಲೇ ತಮ್ಮ ನಿವೃತ್ತಿ ಪ್ರಕಟಿಸಿದರು.


    ಐಸಿಸಿ ಆಯೋಜನೆಯ ಒಡಿಐ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್‌ ಟ್ರೋಫಿ ಮೂರೂ ಟೂರ್ನಿಗಳನ್ನು ಗೆದ್ದ ವಿಶ್ವದ ಏಕಮಾತ್ರ ನಾಯಕನಾಗಿರುವ ಎಂಎಸ್‌ ಧೋನಿ, 350 ಒಡಿಐಗಳಲ್ಲಿ 10773 ರನ್ ಮತ್ತು 90 ಟೆಸ್ಟ್‌ಗಳಿಂದ 4876 ರನ್‌ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ 98 ಪಂದ್ಯಗಳಿಂದ 1617 ರನ್‌ಗಳನ್ನು ಬಾರಿಸಿದ್ದಾರೆ.

    Published by:Vinay Bhat
    First published: