• Home
  • »
  • News
  • »
  • sports
  • »
  • Video: ಬಾಂಗ್ಲಾ-ಜಿಂಬಾಬ್ವೆ ಆಟಗಾರರ ಕೋಪ-ತಾಪ: ಮೈದಾನದಲ್ಲೇ ಜಗಳಕ್ಕಿಳಿದ ಯುವ ಕ್ರಿಕೆಟಿಗರು..!

Video: ಬಾಂಗ್ಲಾ-ಜಿಂಬಾಬ್ವೆ ಆಟಗಾರರ ಕೋಪ-ತಾಪ: ಮೈದಾನದಲ್ಲೇ ಜಗಳಕ್ಕಿಳಿದ ಯುವ ಕ್ರಿಕೆಟಿಗರು..!

Muzarabani-and-Taskin

Muzarabani-and-Taskin

ಆತಿಥೇಯ ಜಿಂಬಾಬ್ವೆ ವಿರುದ್ದ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲ ಇನಿಂಗ್ಸ್​ನಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಮಾಡಿದ ಬಾಂಗ್ಲಾ ಮಹಮದುಲ್ಲಾ ಅವರ ಅಜೇಯ 150 ರನ್​ಗಳ ನೆರವಿನಿಂದ 468 ರನ್​ಗಳನ್ನು ಕಲೆಹಾಕಿತು.

ಮುಂದೆ ಓದಿ ...
  • Share this:

    ಕ್ರಿಕೆಟ್ ಅಂಗಳದಲ್ಲಿ ಕೋಪತಾಪಗಳು ಸರ್ವ ಸಾಮಾನ್ಯ. ಅದರಲ್ಲೂ ಭಾರತ-ಆಸ್ಟ್ರೇಲಿಯಾ ನಡುವಣ ಸರಣಿ, ಆ್ಯಶಸ್ ಸರಣಿ, ಭಾರತ-ಪಾಕ್ ಕ್ರಿಕೆಟ್ ಕದನದಲ್ಲಿ ವಾಕ್ಸಮರ ಕಂಡು ಬರುತ್ತಿರುತ್ತವೆ. ಆದರೆ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಪಂದ್ಯದಲ್ಲೂ ಇಂತಹದೊಂದು ಜಿದ್ದಾಜಿದ್ದಿ ಕಂಡು ಬಂದಿರುವುದು ಇದೇ ಮೊದಲ ಬಾರಿ ಎನ್ನಬಹುದು.


    ಹೌದು, ಆತಿಥೇಯ ಜಿಂಬಾಬ್ವೆ ವಿರುದ್ದ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲ ಇನಿಂಗ್ಸ್​ನಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಮಾಡಿದ ಬಾಂಗ್ಲಾ ಮಹಮದುಲ್ಲಾ ಅವರ ಅಜೇಯ 150 ರನ್​ಗಳ ನೆರವಿನಿಂದ 468 ರನ್​ಗಳನ್ನು ಕಲೆಹಾಕಿತು.


    270 ರನ್​ಗಳಿಗೆ ಬಾಂಗ್ಲಾದೇಶದ 8 ವಿಕೆಟ್ ಉರುಳಿಸಿದ ಜಿಂಬಾಬ್ವೆಗೆ ಸವಾಲಾಗಿದ್ದು ಬೌಲರ್ ತಸ್ಕಿನ್ ಅಹ್ಮದ್. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಸ್ಕಿನ್ (75 ರನ್)- ಮಹಮದುಲ್ಲಾ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಈ ನಡುವೆ ವಿಕೆಟ್ ಸಿಗದೇ ಹತಾಶರಾಗಿದ್ದ ಜಿಂಬಾಬ್ವೆ ಬೌಲರುಗಳ ಕೋಪ ಕೂಡ ನೆತ್ತಿಗೇರಿತ್ತು.


    ಈ ಹತಾಶೆ ನಡುವೆ 85 ನೇ ಓವರ್‌ನಲ್ಲಿ ಜಿಂಬಾಬ್ವೆ ವೇಗಿ ಮುಜರಾಬಾನಿ ಎಸೆತವನ್ನು ತಸ್ಕಿನ್ ನಿರ್ಲಕ್ಷಿಸಿದರು. ಅಲ್ಲದೆ ಕಾಲಿನ ಚಲನೆಯ ಮೂಲಕ ಬೌಲರ್​ನನ್ನು ಕಿಚಾಯಿಸಿದರು. ಇತ್ತ ಮೊದಲೇ ಕೋಪ ನೆತ್ತಿಗೇರಿಸಿಕೊಂಡಿದ್ದ ಮುಜರಾಬಾನಿ ತಸ್ಕಿನ್ ಬಳಿಗೆ ತೆರಳಿ ಮುಖಕ್ಕೆ ಮುಖ ಕೊಟ್ಟು ಪರಸ್ಪರ ಬೈದಾದಿಕೊಂಡರು. ಇತ್ತ ಅಂಪೈರ್ ಮಧ್ಯ ಪ್ರವೇಶಿಸುವ ಮುನ್ನವೇ ಇಬ್ಬರು ಆಟಗಾರರನ್ನು ಸಹ ಆಟಗಾರರ ದೂರ ಮಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಇದೀಗ ಈ ಗುದ್ದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


    ಇನ್ನು ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಬಾಂಗ್ಲಾದೇಶ ನೀಡಿದ 468 ರನ್​ಗಳ ಸವಾಲಿಗೆ ಜಿಂಬಾಬ್ವೆ ಪ್ರತಿಯುತ್ತರ ನೀಡುತ್ತಿದೆ. ಮೂರನೇ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್​ಗಳಿಸಿದೆ.



    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

    Published by:zahir
    First published: