ಭಾರತ ಕ್ರಿಕೆಟ್ ತಂಡದ ಮತ್ತು ಆರ್ಸಿಬಿಯ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಹಾಲ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಾಗಿ ಸದ್ಯ ಯುಎಇನಲ್ಲಿದ್ದಾರೆ. ಆದರೆ, ಇವರು ದುಬೈ ಫ್ಲೈಟ್ ಏರುವುದಕ್ಕೂ ಮುನ್ನ ಡ್ಯಾನ್ಸರ್, ಕೋರಿಯೋಗ್ರಾರ್, ಡಾಕ್ಟರ್ ಮತ್ತು ಯುಟ್ಯೂಬರ್ ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಚಹಾಲ್ ಜೊತೆ ಧನಶ್ರೀ ವರ್ಮಾ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಅವರು ಸಖತ್ ಸುದ್ದಿಯಲ್ಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಏನೇ ಹಂಚಿಕೊಂಡರು ಸಾಕಷ್ಟು ಲೈಕ್ಸ್, ಕಮೆಂಟ್ಗಳ ಮಳೆಯೇ ಸುರಿಯುತ್ತಿದೆ. ಅಷ್ಟರ ಮಟ್ಟಿಗೆ ಧನಶ್ರೀ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಆಗಸ್ಟ್ 8 ರಂದು ಯಜುವೇಂದ್ರ ಚಾಹಲ್ ಹಾಗೂ ಪ್ರಸಿದ್ಧ ಡ್ಯಾನ್ಸರ್ ಧನಶ್ರೀ ವರ್ಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ತಮ್ಮ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈ ನಡುವೆ ಧನಶ್ರೀ ಅವರ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
IPL 2020: ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿಗೆ ಶುರುವಾಗಿದೆ ನಡುಕ: ಯಾಕೆ?, ಈ ವಿಡಿಯೋ ನೋಡಿ
ಈ ವಿಡಿಯೋದಲ್ಲಿ ಧನಶ್ರೀ ಅವರು ಹಿಂದಿ ಸಾಂಗ್ ಒಂದಕ್ಕೆ ಭರ್ಜರಿ ಆಗಿ ಸ್ಟೆಪ್ ಹಾಕಿದ್ದಾರೆ. ಇವರ ನೃತ್ಯ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾನ್ಸ್ ನಲ್ಲಿ ಸೈ ಎನ್ನಿಸಿಕೊಂಡಿರುವ ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. 1.3 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಧನಶ್ರೀ.
ಧನಶ್ರೀಯ ವಿಡಿಯೋಕ್ಕೆ ಚಹಾಲ್ ಕೂಡ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ. ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಮಾತ್ರವಲ್ಲ ಯುಟ್ಯೂಬ್ನಲ್ಲೂ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. ಯುಟ್ಯೂಬರ್ ಆಗಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
IPL 2020: ಈ ಬಾರಿಯ ಐಪಿಎಲ್ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?
ಇತ್ತೀಚೆಗಷ್ಟೆ ಧನಶ್ರೀ ಅವರು ಚಹಾಲ್ ಜೊತೆಗೆ ಬಾಂಧವ್ಯ ಹೇಗಾಯಿತು ಎಂಬ ಕುರಿತು ಮಾತನಾಡಿದ್ದರು. ‘ಚಹಾಲ್ ಅವರು ಯುಟ್ಯೂಬ್ನಲ್ಲಿ ನನ್ನ ಡ್ಯಾನ್ಸ್ ವಿಡಿಯೋಗಳನ್ನು ನೋಡಿದ್ದರು ಮತ್ತು ನನ್ನ ಕೋರಿಯೋಗ್ರಾಫಿ ಕೆಲಸಗಳ ಬಗ್ಗೆಯೂ ಅರಿತಿದ್ದರು. ಲಾಕ್ಡೌನ್ ಸಮಯದಲ್ಲಿ ಕೆಲ ಹೊಸ ವಿಷಯಗಳನ್ನು ಕಲಿಯಲು ಚಾಹಲ್ ಮುಂದಾಗಿದ್ದರು. ಅದರಲ್ಲಿ ಡ್ಯಾನ್ಸ್ ಕೂಡ ಒಂದಾಗಿತ್ತು. ಹೀಗಾಗಿ ಅವರು ನನ್ನನ್ನು ಸಂಪರ್ಕಿಸಿದರು. ಡ್ಯಾನ್ಸ್ ಕಲಿಯಲಾರಂಭಿಸುವ ಜೊತೆಗೆ ನಿಧಾನವಾಗಿ ನಾವು ಸ್ನೇಹಿತರಾದೆವು. ಮುಂದೆ ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿ ನಿಶ್ಚಿತಾರ್ಥದವರೆಗೂ ಬಂದಿತು’ ಎಂದು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ