Yuzvendra Chahal: ಬೂಮ್​.. ಬೂಮ್​.. ಬುಮ್ರಾ ದಾಖಲೆ ಉಡೀಸ್​ ಮಾಡೋಕೆ ತುದಿಗಾಲಲ್ಲಿ ನಿಂತ ಚಹಾಲ್​!

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20I ನಲ್ಲಿ ಯುಜ್ವೇಂದ್ರ ಚಹಾಲ್ ಒಂದು ವಿಕೆಟ್ ಪಡೆಯುವ ಮೂಲಕ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಆಗಲಿದ್ದಾರೆ.

ಬುಮ್ರಾ, ಯುಜುವೇಂದ್ರ ಚಹಾಲ್‌

ಬುಮ್ರಾ, ಯುಜುವೇಂದ್ರ ಚಹಾಲ್‌

  • Share this:
ಭಾರತ(Team India) ಮತ್ತು ವೆಸ್ಟ್​ ಇಂಡೀಸ್(West Indies) ನಡುವಿನ 3ನೇ ಟಿ-20 ಪಂದ್ಯ(3rd T-20 Match) ಇಂದು ನಡೆಯಲಿದೆ. ಈಗಾಗಲೇ ಎರಡು ಟಿ-20 ಪಂದ್ಯಗಳಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲೂ ವೆಸ್ಟ್​ ಇಂಡೀಸ್​ ಆಟಗಾರರಿಗೆ ಮಣ್ಣು ಮುಕ್ಕಿಸೋಕೆ ಟೀ ಇಂಡಿಯಾ ಸಜ್ಜಾಗಿದ್ದಾರೆ. ಅತ್ತ ಈ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ತವಕದಲ್ಲಿ ವೆಸ್ಟ್​ ಇಂಡೀಸ್​ ಆಟಗಾರರಿದ್ದಾರೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಭಾನುವಾರ(Sunday) ಆಗಿರುವು ಕಾರಣ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20(3rd T-20 Match) ಪಂದ್ಯದಲ್ಲಿ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಲಿದೆ. ಈಡನ್ ಗಾರ್ಡನ್‌(Eden Garden)ನಲ್ಲಿ ನಡೆಯಲಿರುವ ಈ ಕೊನೆಯ ಟಿ20 ಪಂದ್ಯ ಯುಜುವೇಂದ್ರ ಚಹಾಲ್‌(Yuzvendra Chahal)ಗೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಚಹಾಲ್ ಭಾರತದ ನಂಬರ್ ಒನ್(Number One) ಟಿ20 ಬೌಲರ್(T-20 Bowler) ಆಗುವ ಅವಕಾಶ ಪಡೆದಿದ್ದಾರೆ. ಅದರಲ್ಲೂ ಭಾರತ ತಂಡದವರೆ ಆದ ವೇಗದ ಬೌಲರ್​ ಒಬ್ಬರ ದಾಖಲೆ(Records)ಯನ್ನು ಮುರಿಯೋಕೆ ಚಹಾಲ್​ ಕಾಯುತ್ತಿದ್ದಾರೆ.

ಭಾರತದ ನಂಬರ್​ ಒನ್​ ಟಿ -20 ಬೌಲರ್​ ಆಗಲು ಒಂದೇ ವಿಕೆಟ್​!

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ T20I ನಲ್ಲಿ ಯುಜ್ವೇಂದ್ರ ಚಹಾಲ್ ಒಂದು ವಿಕೆಟ್ ಪಡೆಯುವ ಮೂಲಕ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಆಗಲಿದ್ದಾರೆ. ಈ ವಿಷಯದಲ್ಲಿ ಅವರು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಲಿದ್ದಾರೆ. ಸದ್ಯ ಇಬ್ಬರೂ ಆಟಗಾರರ ಖಾತೆಯಲ್ಲಿ 66 ವಿಕೆಟ್‌ಗಳಿವೆ. ಇಂದಿನ ಪಂದ್ಯದಲ್ಲಿ ಚಹಾಲ್​ ಒಂದು ವಿಕೆಟ್​ ತೆಗೆದು ಬುಮ್ರಾ ಅವರನ್ನು ಹಿಂದಿಕ್ಕಲಿದ್ದಾರೆ.

ಇದನ್ನೂ ಓದಿ: ಶತಕವೀರ ಯಜುವೇಂದ್ರ ಚಹಾಲ್.. ಒನ್​ ಡೇ ಪಂದ್ಯಗಳಲ್ಲಿ 104 ವಿಕೆಟ್​ ಕಬಳಿಸಿದ ಸ್ಪಿನ್​ ಮಾಂತ್ರಿಕ!

ಎರಡನೇ ಟಿ20 ಪಂದ್ಯದಲ್ಲಿ ಚಹಾಲ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಚಹಾಲ್ ಆರಂಭಿಕರಾದ ಕೈಲ್ ಮೈಯರ್ಸ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಈ ವಿಕೆಟ್‌ನೊಂದಿಗೆ ಚಹಾಲ್ ಭಾರತದ ಪರ T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಸರಿಗಟ್ಟಿದರು.

ಶತಕವೀರ ಯಜುವೇಂದ್ರ ಚಹಾಲ್

ಏಕದಿನ ಕ್ರಿಕೆಟ್(ODI) ಮಾದರಿಯಲ್ಲಿ ಭಾರತ(India)ದ ಲೆಗ್ ಸ್ಪಿನ್ನರ್(Leg Spinner) ಯಜುವೇಂದ್ರ ಚಾಹಲ್(Yuzvendra Chahal) ಅತ್ಯಂತ ಅರ್ಹವಾದ ಮೈಲಿಗಲ್ಲಿನ್ನು ಸಾಧಿಸಿದ್ದಾರೆ. ಬಲಗೈ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಸ್ಮರಣೀಯ 100 ವಿಕೆಟ್‍(Wicket)ಗಳ ಸಾಧನೆ ಮಾಡಿದ್ದಾರೆ. ಚದುರಂಗದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿರುವ ಹಿನ್ನೆಲೆ ಹೊಂದಿರುವ 31 ವರ್ಷದ ಈ ಲೆಗ್ ಸ್ಪಿನ್ನರ್, ಇತ್ತೀಚಿನ ದಿನಗಳಲ್ಲಿ ಅಸಾಂಪ್ರದಾಯಿಕ ಹಾಗೂ ಕಠಿಣ ಮಾದರಿಯಾಗಿ ಬದಲಾಗಿರುವ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‍(International)ನಲ್ಲಿ ಆಡುತ್ತಿರುವವರ ಪೈಕಿ ಒಬ್ಬರಾಗಿದ್ದಾರೆ. ಇಲ್ಲಿಯವರೆಗೆ 60 ಪಂದ್ಯಗಳನ್ನಾಡಿರುವ ಚಹಾಲ್‍, 27.88 ಸರಾಸರಿಯೊಂದಿಗೆ 104 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ : 3ನೇ ಪಂದ್ಯದಲ್ಲೂ ಮಣ್ಣು ಮುಕ್ಕಿಸೋಕೆ ಭಾರತ ಸಜ್ಜು! ಇವತ್ತಾದ್ರೂ ಗೆದ್ದು ಮಾನ ಉಳಿಸಿಕೊಳ್ತಾರಾ ವೆಸ್ಟ್​ ಇಂಡೀಸ್?

ಟೀ ಇಂಡಿಯಾದ  ಪ್ರಮುಖ ಬೌಲರ್​ ಚಹಾಲ್​!

2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಐಸಿಸಿ ವಿಶ್ವಕಪ್‍ನಲ್ಲಿ ಚಾಹಲ್ ಭಾರತ ತಂಡದ ಪ್ರಮುಖ ಬೌಲರ್​​ಗಳ ಪೈಕಿ ಒಬ್ಬರಾಗಿದ್ದರು. ಈ ಕ್ರೀಡಾಕೂಟದಲ್ಲಿ 74 ಓವರ್ ಬೌಲ್ ಮಾಡಿದ್ದ ಚಾಹಲ್, 36.83ರ ಸರಾಸರಿಯಲ್ಲಿ 12 ವಿಕೆಟ್ ಕಬಳಿಸಿದ್ದರು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ರವಿಚಂದ್ರನ್ ಅಶ‍್ವಿನ್ ಹಾಗೂ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಟ್ಟಿತ್ತು.

2016-2021ರವರೆಗೆ ಭಾರತ ಜಯಿಸಿರುವ 40 ಪಂದ್ಯಗಳಲ್ಲಿ ಚಹಾಲ್ ತಂಡದ ಜೊತೆಗಿದ್ದರು. ಅವರು ಈವರೆಗೆ ಏಕದಿನ ಕ್ರಿಕೆಟ್ ಪಂದ್ಯಗಳ ಮಾದರಿಯಲ್ಲಿ 11 ದೇಶಗಳ ವಿರುದ್ಧ ಆಟವಾಡಿದ್ದು, ಈ ಪೈಕಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಎರಡು ಅಂಕಿಯ (16-122) ವಿಕೆಟ್ ಗಳಿಕೆ ಸಾಧನೆ ಮಾಡಿದ್ದಾರೆ.
Published by:Vasudeva M
First published: