IND A vs SA A: ಚಹಾಲ್ ಸ್ಪಿನ್ ದಾಳಿಗೆ ನಲುಗಿದ ಹರಿಣಗಳು; ಪಾಂಡೆ ಪಡೆಗೆ ಭರ್ಜರಿ ಗೆಲುವು

69 ರನ್​ಗಳ ಗೆಲುವಿನೊಂದಿಗೆ ಮನೀಶ್ ಪಾಂಡೆ ಪಡೆ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Vinay Bhat | news18-kannada
Updated:August 30, 2019, 11:35 AM IST
IND A vs SA A: ಚಹಾಲ್ ಸ್ಪಿನ್ ದಾಳಿಗೆ ನಲುಗಿದ ಹರಿಣಗಳು; ಪಾಂಡೆ ಪಡೆಗೆ ಭರ್ಜರಿ ಗೆಲುವು
ಯಜುವೇಂದ್ರ ಚಹಾಲ್
Vinay Bhat | news18-kannada
Updated: August 30, 2019, 11:35 AM IST
ಬೆಂಗಳೂರು (ಆ. 29):ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ ಭರ್ಜರಿ ಗೆಲುವು ಸಾಧಿಸಿದೆ. ಚಹಾಲ್ ಬೌಲಿಂಗ್ ದಾಳಿ ಹಾಗೂ ದುಬೆ ಮತ್ತು ಅಕ್ಷರ್​​ರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಪಾಂಡೆ ಪಡೆ 69 ರನ್​ಗಳಿಂದ ಗೆದ್ದು ಬೀಗಿದ್ದು 1-0 ಮುನ್ನಡೆ ಸಾಧಿಸಿದೆ.

ಆರಂಭದಲ್ಲಿ ಮಳೆ ಅಡ್ಡಿಸಿದ ಕಾರಣ ಪಂದ್ಯವನ್ನು 47 ಓವರ್​ಗೆ ಸೀಮಿತಗೊಳಿಸಲಾಯಿತು.

ಹೀಗಾಗಿ ಭಾರತ ಎ ನೀಡಿದ್ದ 328 ರನ್​ಗಳ ಕಠಿಣ ಸವಾಲು ಬೆನ್ನಟ್ಟಿದ ಆಫ್ರಿಕಾ ಎ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. 5ನೇ ವಿಕೆಟ್​ಗೆ ರೀಜಾ ಹೆಂಡ್ರಿಕ್ಸ್​ ಜೊತೆಗೂಡಿ ಹೆನ್ರಿಚ್ ಕ್ಲಾಸೆನ್ 61 ರನ್​ಗಳ ಕಾಣಿಕೆ ನೀಡಿದ್ದೇ ಹೆಚ್ಚು. ಉಳಿದ ಬ್ಯಾಟ್ಸ್​​ಮನ್​ಗಳು ವೈಫಲ್ಯ ಅನುಭವಿಸಿದರು.

ರೀಜಾ 108 ಎಸೆತಗಳಲ್ಲಿ 110 ರನ್ ಬಾರಿಸಿದರೆ, ಕ್ಲಾಸೆನ್ 58 ರನ್ ಗಳಿಸಿದರಷ್ಟೆ. ಪರಿಣಾಮ ಆಫ್ರಿಕಾ ಎ 45 ಓವರ್​​ನಲ್ಲೇ 258 ರನ್​ಗಳಿಗೆ ಆಲೌಟ್ ಆಯಿತು. ಭಾರತ ಎ ಪರ ಯಜುವೇಂದ್ರ ಚಹಾಲ್ 5 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ 2, ದೀಪಕ್ ಚಹಾರ್, ಖಲೀಲ್ ಅಹ್ಮದ್ ಹಾಗೂ ಕ್ರುನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

ಅಂತರಾಷ್ಟ್ರೀಯ ಅಥ್ಲೆಟಿಕ್ಸ್​​​ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಕರುನಾಡಿನ ಪ್ರತಿಭೆ

 



69 ರನ್​ಗಳ ಗೆಲುವಿನೊಂದಿಗೆ ಮನೀಶ್ ಪಾಂಡೆ ಪಡೆ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಬಾಜಿಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಎ ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟ ಆಡಿತು. ರುತುರಾಜ್ ಗಾಯಕ್ವಾಡ್ 10 ಹಾಗೂ ಶುಭ್ಮನ್ ಗಿಲ್ 46 ರನ್ ಗಳಿಸಿದರು. ನಂತರ ಬಂದ ಅನ್ಮೋಲ್​ಪ್ರೀತ್ ಸಿಂಗ್ 29 ರನ್ ಗಳಿಸಿದರೆ, ನಾಯಕ ಮನೀಶ್ ಪಾಂಡೆ 39 ರನ್​ಗೆ ಬ್ಯಾಟ್ ಕೆಳಗಿಟ್ಟರು. ಇಶಾನ್ ಕಿಶನ್ ಆಟ 37 ರನ್​ಗೆ ಅಂತ್ಯವಾದರೆ, ಕ್ರುನಾಲ್ ಪಾಂಡ್ಯ 14 ರನ್​ ಗಳಿಸಿದರಷ್ಟೆ.

ಆದರೆ, ಅಂತಿಮ 10 ಓವರ್ ಇರುವಾಗ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆಫ್ರಿಕನ್ ಬೌಲರ್​ಗಳ ಬೆಂಡೆತ್ತಿದ ಈ ಜೋಡಿ ಅರ್ಧಶತಕ ಸಿಡಿಸಿ ಮಿಂಚಿದರಲ್ಲದೆ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಈ ಜೋಡಿಯ ಖಾತೆಯಿಂದ 68 ಎಸೆತಗಳಲ್ಲಿ 121 ರನ್​ಗಳ ಕಾಣಿಕೆ ಮೂಡಿಬಂತು.

 



ಅಂತಿಮವಾಗಿ ಭಾರತ ಎ 47 ಓವರ್​ಗೆ 6 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿತು. ದುಬೆ 60 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್​ನೊಂದಿಗೆ ಅಜೇಯ 79 ರನ್ ಬಾರಿಸಿದರೆ, ಅಕ್ಷರ್ ಕೇವಲ 36 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 60 ರನ್ ಚಚ್ಚಿದರು. ಆಫ್ರಿಕಾ ಎ ಪರ ಬ್ಯೂರನ್ ಹೆಂಡ್ರಿಕ್ಸ್​ ಹಾಗೂ ಫಾರ್ಟುನ್ ತಲಾ 2 ವಿಕೆಟ್ ಪಡೆದರು.

 

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...