VVS Laxman: ಟೀಮ್ ಇಂಡಿಯಾದಲ್ಲಿ ಈ ಇಬ್ಬರನ್ನು ಆಡಿಸಲೇಬೇಕು..!

ಟಿ20 ವಿಶ್ವಕಪ್​ನ್ನು ಗಮನದಲ್ಲಿಟ್ಟು ಈ ಸರಣಿಗಾಗಿ ತಂಡವನ್ನು ರೂಪಿಸಬೇಕಿದೆ ಎಂದಿರುವ ಲಕ್ಷ್ಮಣ್, ಚಹಲ್ ಅತ್ಯಂತ ಯಶಸ್ವಿ ಅನುಭವಿ ಬೌಲರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

Team India

Team India

  • Share this:
    ಶ್ರೀಲಂಕಾ ವಿರುದ್ದ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಭಾರತ ತಂಡ ಪ್ರಮುಖ ಆಟಗಾರರು ಇಂಗ್ಲೆಂಡ್​ನಲ್ಲಿದ್ದರೆ, ಇತ್ತ ಬಿಸಿಸಿಐ ಮತ್ತೊಂದು ಬಲಿಷ್ಠ ಪಡೆಯನ್ನು ರೂಪಿಸಿ ಲಂಕಾ ವಿರುದ್ದ ಸರಣಿಗೆ ಕಳುಹಿಸಿದೆ. ಅಷ್ಟೇ ಅಲ್ಲದೆ ಈ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿರುವುದು ಮತ್ತೊಂದು ವಿಶೇಷ. ಇನ್ನು ಶ್ರೀಲಂಕಾ ವಿರುದ್ದದ ಸರಣಿಯ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಭಾರತ ಗೆಲ್ಲಬೇಕಿದ್ದರೆ ಸಮತೋಲನದ ತಂಡ ರೂಪಿಸಬೇಕಿದೆ ಎಂದಿದ್ದಾರೆ.

    ಅದಕ್ಕಾಗಿ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಸ್ಪಿನ್ ಅಸ್ತ್ರಗಳಾಗಿ ಯುಜಯವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಅವರನ್ನು ಆಡಿಸಬೇಕು. ಈ ಜೋಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುವ ಸಾಧ್ಯತೆಯಿದೆ ಎಂದಿದ್ದಾರೆ ಲಕ್ಷ್ಮಣ್.

    ಪ್ರಸ್ತುತ ತಂಡದಲ್ಲಿ 6 ಮಂದಿ ಸ್ಪಿನ್ನರ್‌ಗಳು ಇದ್ದು, ಅವರಲ್ಲಿ ಚಹಲ್ ಹಾಗೂ ಕುಲ್ದೀಪ್ ಅವರನ್ನು ನಾನು ಮೂರು ಏಕದಿನ ಪಂದ್ಯಗಳಲ್ಲಿಯೂ ನೋಡಲು ಬಯಸುತ್ತೇನೆ. ಸಾಮಾನ್ಯವಾಗಿ ಏಕದಿನ ಪಂದ್ಯಗಳಲ್ಲಿ ಎಲ್ಲಾ ಬೌಲರ್‌ಗಳು ಕೂಡ 10 ಓವರ್‌ಗಳನ್ನು ಎಸೆಯುವ ಅವಕಾಶ ಇರುತ್ತದೆ. ಹೆಚ್ಚು ಓವರ್ ಎಸೆದರೆ ಹೆಚ್ಚಿನ ಯಶಸ್ಸು ಕೂಡ ಗಳಿಸುವ ಅವಕಾಶ ಸಿಗಲಿದೆ. ಈ ಮೂಲಕ ಬೌಲರುಗಳು ಆತ್ಮ ವಿಶ್ವಾಸವನ್ನು ಮರಳಿ ಪಡೆಯಬಹುದು ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

    ಟಿ20 ವಿಶ್ವಕಪ್​ನ್ನು ಗಮನದಲ್ಲಿಟ್ಟು ಈ ಸರಣಿಗಾಗಿ ತಂಡವನ್ನು ರೂಪಿಸಬೇಕಿದೆ ಎಂದಿರುವ ಲಕ್ಷ್ಮಣ್, ಚಹಲ್ ಅತ್ಯಂತ ಯಶಸ್ವಿ ಅನುಭವಿ ಬೌಲರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕುಲ್ದೀಪ್ ಯಾದವ್ ಅವರಲ್ಲಿ ಅಂತಹ ಆತ್ಮವಿಶ್ವಾಸ ಹುಟ್ಟುಹಾಕುವ ಅಗತ್ಯವಿದೆ. ಇದರಿಂದ ಟಿ20 ವಿಶ್ವಕಪ್ ತಂಡಕ್ಕೆ ಅನುಕೂಲವಾಗಲಿದೆ ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟರು.



    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:zahir
    First published: