Letter for Kohli: ವಿರಾಟ್ ಕೊಹ್ಲಿಗೆ ಭಾವುಕ ಪತ್ರ ಬರೆದ ಯುವರಾಜ್ ಸಿಂಗ್, ಗೋಲ್ಡನ್ ಶೂ ಗಿಫ್ಟ್

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಪತ್ರದ ಜೊತೆಗೆ ಗೋಲ್ಡನ್ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕೊಹ್ಲಿಗೆ ಯುವರಾಜ್ ಸಿಂಗ್ ಬರೆದ ಪತ್ರ ಮತ್ತು ಶೂ

ಕೊಹ್ಲಿಗೆ ಯುವರಾಜ್ ಸಿಂಗ್ ಬರೆದ ಪತ್ರ ಮತ್ತು ಶೂ

 • Share this:
  ನವದೆಹಲಿ: ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಆಲ್ ರೌಂಡರ್ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಭಾವನಾತ್ಮಕ ಸಂದೇಶ ಹೊಂದಿರುವ ಪತ್ರವೊಂದನ್ನು ಬರೆದಿದ್ದಾರೆ. ಈ ಸಂದೇಶದಲ್ಲಿ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಮೆಚ್ಚುಗೆಯ ಸಾಲುಗಳನ್ನು ಉಲ್ಲೇಖ ಮಾಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವೃತ್ತಿ ಜೀವನದ ಬೆಳವಣಿಗೆಯನ್ನು ನಾನು ನೋಡಿದ್ದೇನೆ ಎಂದು ಯುವರಾಜ್ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ. ಪತ್ರದಲ್ಲಿ (Letter) ವಿರಾಟ್ ಕೊಹ್ಲಿಯ ಬದ್ಧತೆ ಮತ್ತು ಶಿಸ್ತಿನ ಕುರಿತು ಉಲ್ಲೇಖ ಮಾಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರದ ಜೊತೆಗೆ ವಿರಾಟ್ ಕೊಹ್ಲಿಗೆ ವಿಶೇಷವಾದ ಗೋಲ್ಡನ್ ಶೂಗಳನ್ನು ಉಡುಗೊರೆಯಾಗಿ (Gift) ನೀಡಿದ್ದಾರೆ.

  ಭಾರತ ಕ್ರಿಕೆಟ್‌ ತಂಡದ ಎಲ್ಲಾ ಮಾದರಿಯ ನಾಯಕತ್ವಕ್ಕೆ ನಿವೃತ್ತಿ ಹೇಳಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ, ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಬರೆದಿರುವ ಹೃದಯಪೂರ್ವಕ ಪತ್ರ ಹೀಗಿದೆ.

  ವಿರಾಟ್ ಕೊಹ್ಲಿಗೆ ಯುವರಾಜ್ ಸಿಂಗ್ ಪತ್ರ :

  ಭಾರತದ ಮಾಜಿ ಆಲ್‌ರೌಂಡರ್ ಆಟಗಾರ ಯುವರಾಜ್ ಸಿಂಗ್ ತಾವು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬರೆದಿರುವ ಪತ್ರದಲ್ಲಿ 'ವಿರಾಟ್, ನಿಮ್ಮ ವೃತ್ತಿ ಜೀವನ ಮತ್ತು ನಿಮ್ಮ ವ್ಯಕ್ತಿತ್ವ ಹೊರ ಹೊಮ್ಮುವುದನ್ನು, ನೀವು ಒಬ್ಬ ಕ್ರಿಕೆಟಿಗನಾಗಿ ಮತ್ತು ಅತ್ಯುನ್ನತ ವ್ಯಕ್ತಿಯಾಗಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ.  ಒಂದು ಕಾಲದಲ್ಲಿ ದಿಗ್ಗಜ ಆಟಗಾರರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಡೆದಿದ್ದೀರಿ. ನೀವು ಹೊಸ ಪೀಳಿಗೆಗೆ ದಾರಿ ಮಾಡಿ ಕೊಡುವ ದಂತಕಥೆಯಾಗಿದ್ದೀರಿ. ನೀವೊಬ್ಬ ಲೆಜೆಂಡರಿ ನಾಯಕ.

  ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್​​ಗೆ ಕನ್ನಡತಿ ವನಿತಾ ನಿವೃತ್ತಿ ಘೋಷಣೆ

  ಚಿಕ್ಕ ಹುಡುಗನಿಂದ ಶುರುವಾದ ಜರ್ನಿಯಿಂದ ಹಿಡಿದು ಈಗ ನೀವು ಶ್ರೇಷ್ಠ ಆಟಗಾರರ ಪಟ್ಟಿಗೆ ಸೇರಿದ್ದೀರಿ. ನೆಟ್ಸ್‌ನಲ್ಲಿ ನಿಮ್ಮ ಶಿಸ್ತು, ಮೈದಾನದಲ್ಲಿ ನಿಮ್ಮ ಉತ್ಸಾಹ ಮತ್ತು ಕ್ರೀಡೆಯಲ್ಲಿನ ನಿಮ್ಮ ಸಮರ್ಪಣಾ ಭಾವ ಈ ದೇಶದ ಪ್ರತಿ ಮಕ್ಕಳೂ ಕ್ರಿಕೆಟ್‌ ಬಗ್ಗೆ ಉತ್ಸಾಹ ಹಾಗೂ ಸ್ಫೂರ್ತಿ ಹೊಂದಲು ಕಾರಣವಾಗಿದೆ. ಮುಂದೊಂದು ದಿನ ಪ್ರತಿಯೊಬ್ಬರಲ್ಲೂ ನೀಲಿ ಜೆರ್ಸಿ ಹಾಕಿರುವ ಕನಸಿಗೆ ಪ್ರೇರೇಪಣೆ ನೀಡುತ್ತಿದೆ ಎಂದು ಬರೆದಿದ್ದಾರೆ. ‌

  ಕೊಹ್ಲಿಗೆ ಗೋಲ್ಡನ್ ಶೂಗಳನ್ನು ಉಡುಗೊರೆ ನೀಡಿದ ಯುವಿ:

  ನನಗೆ ನೀನು ಎಂದೆಂದಿಗೂ ಚೀಕು ಮತ್ತು ವಿಶ್ವರಾಜ ಕೊಹ್ಲಿ ನೀನು. ನೀವು ಪ್ರತಿ ವರ್ಷವೂ ನಿಮ್ಮ ಕ್ರಿಕೆಟ್ ಆಟದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೀರಿ. ಈ ಅದ್ಭುತ ಆಟದಲ್ಲಿ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದೀರಿ. ನೀವೊಬ್ಬ ದಿಗ್ಗಜ ನಾಯಕ, ಅದ್ಭುತ ಆಟಗಾರ. ನೀವೊಬ್ಬ ಸೂಪರ್‌ಸ್ಟಾರ್  ಎಂದು ಯುವರಾಜ್ ಪ್ರೀತಿಪೂರ್ವಕ ಪತ್ರ ಬರೆದಿದ್ದಾರೆ. ವಿರಾಟ್ ಕೊಹ್ಲಿಗೆ ವಿಶೇಷವಾದ ಗೋಲ್ಡನ್ ಶೂ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ದೇಶ ಹೆಮ್ಮೆ ಪಡುವಂತೆ ಆಡುತ್ತೀರಿ. ನಿಮ್ಮ ಕೊಡುಗೆಗೆ ನನ್ನ ಕಡೆಯಿಂದ ಗೋಲ್ಡನ್ ಬೂಟ್ ಉಡುಗೊರೆ ಎಂದು ಕೊಹ್ಲಿಗೆ ಯುವರಾಜ್‌ ಸಿಂಗ್‌ ಹಾರೈಸಿ ಪತ್ರ ಬರೆದಿದ್ದಾರೆ.

  ಇದನ್ನೂ ಓದಿ: ಸೂರ್ಯಕುಮಾರ್ ಭರ್ಜರಿ ಆಟದಿಂದ T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಟೀಮ್ ಇಂಡಿಯಾ

  ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಭಾರತ ತಂಡದ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು. ಈ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಕೊಡುಗೆಯನ್ನು ಭಾರತೀಯ ಕ್ರಿಕೆಟ್‌ ಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.
  Published by:renukadariyannavar
  First published: