ಕೆನಡಾ ಟಿ-20 ಬಳಿಕ ಮತ್ತೆ ಮೈದಾನದಲ್ಲಿ ಅಬ್ಬರಿಸಲು ತಯಾರಾದ ಯುವರಾಜ್; ಯಾವ ತಂಡಕ್ಕೆ?

10 ದಿನಗಳ ಕಾಲ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದ್ದು, ನವೆಂಬರ್ 15 ರಿಂದ 24 ವರೆಗೆ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಹೆಚ್ಚಿನ ತಂಡಗಳು ಭಾಗವಹಿಸುವ ಸಾಧ್ಯತೆ ಇದ್ದರೆ ಇನ್ನಷ್ಟು ದಿನಗಳ ಕಾಲ ಆಯೋಜನೆ ಮಾಡಲಿದೆಯಂತೆ.

Vinay Bhat | news18-kannada
Updated:October 17, 2019, 2:51 PM IST
ಕೆನಡಾ ಟಿ-20 ಬಳಿಕ ಮತ್ತೆ ಮೈದಾನದಲ್ಲಿ ಅಬ್ಬರಿಸಲು ತಯಾರಾದ ಯುವರಾಜ್; ಯಾವ ತಂಡಕ್ಕೆ?
ಬಿಸಿಸಿಐಯ ಕೆಲವು ಕೆಟ್ಟ ನಿರ್ಧಾರಗಳು ಭಾರತ ವಿಶ್ವಕಪ್ನಲ್ಲಿ ಸೋಲಲು ಪ್ರಮುಖ ಕಾರಣ ಎಂದು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
  • Share this:
ಬೆಂಗಳೂರು (ಅ. 17): ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡಿದ ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ-20 ಟೂರ್ನಿಯಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಯುವಿ ಆಟ ನೋಡಲು ಅಭಿಮಾನಿಗಳಿಗೆ ಭಾಗ್ಯ ಒದಗಿಬಂದಿರಲಿಲ್ಲ. ಆದರೆ, ಸದ್ಯ ಯುವಿ ತಮ್ಮ ಫ್ಯಾನ್ಸ್​ಗೆ ಮತ್ತೆ ಗುಡ್​ನ್ಯೂಸ್ ನೀಡಿದ್ದಾರೆ.

ಅಬುಧಾಬಿಯಲ್ಲಿ ನಡೆಯಲಿರುವ ಟಿ-10 ಲೀಗ್​ನಲ್ಲಿ ಯುವರಾಜ್ ಬ್ಯಾಟ್ ಬೀಸಲಿದ್ದಾರಂತೆ. ಈ ಬಗ್ಗೆ ಯುವಿ ಎರಡು ಮೂರು ದಿನಗಳಲ್ಲಿ ಸ್ಪಷ್ಟನೆ ನೀಡಲಿದ್ದಾರೆ ಎಂದು ಅಬುಧಾಬಿ ಟಿ-10 ಲೀಗ್ ಅಧ್ಯಕ್ಷ ಶಾಜಿ ಉಲ್ ಮುಲ್ಕ್​ ಹೇಳಿದ್ದಾರೆ.

Yuvraj Singh To Join Abu Dhabi T10 Soon, Says Chairman Shaji Ul Mulk
ಯುವರಾಜ್ ಸಿಂಗ್


ಭಾರತ-ಪಾಕಿಸ್ತಾನ ನಡುವೆ ಮತ್ತೆ ಕ್ರಿಕೆಟ್?; ಗಂಗೂಲಿ ಹೇಳಿದ್ದೇನು ಗೊತ್ತಾ..?

"ಟಿ-10 ಲೀಗ್​ ಅನ್ನು ಸಾಕಷ್ಟು ಜನಪ್ರಿಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ. ಜಹೀರ್ ಖಾನ್, ಮುನಾಫ್ ಪಟೇಲ್, ಪ್ರವೀಣ್ ಕುಮಾರ್, ಪ್ರವೀಣ್ ತಂಬೆ ಸೇರಿ 6-7 ಭಾರತೀಯ ಆಟಗಾರರು ಈಗಾಗಲೇ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಯುವರಾಜ್ ಕೂಡ ಆಡುವುದಾಗಿ ಹೇಳಿದ್ದಾರೆ. 2-3 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ" ಎಂದು ಶಾಜಿ ಹೇಳಿದ್ದಾರೆ.

10 ದಿನಗಳ ಕಾಲ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದ್ದು, ನವೆಂಬರ್ 15 ರಿಂದ 24 ವರೆಗೆ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಹೆಚ್ಚಿನ ತಂಡಗಳು ಭಾಗವಹಿಸುವ ಸಾಧ್ಯತೆ ಇದ್ದರೆ ಇನ್ನಷ್ಟು ದಿನಗಳ ಕಾಲ ಆಯೋಜನೆ ಮಾಡಲಿದೆಯಂತೆ.

ಆರ್​ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ; ಹರಾಜಿಗೂ ಮುನ್ನ ಮೂರು ಸ್ಟಾರ್ ಆಟಗಾರರು ಹೊರಕ್ಕೆ?"ಇತರೆ ಟಿ-20 ಟೂರ್ನಮೆಂಟ್​ಗಳೆಲ್ಲ ಸಾಮಾನ್ಯವಾಗಿ 20 ರಿಂದ 30 ದಿನಗಳ ಕಾಲ ನಡೆಯುತ್ತದೆ. ಟಿ-10 ಲೀಗ್ ಇನ್ನಷ್ಟು ಪ್ರಸಿದ್ದಿ ಪಡೆಯಬೇಕು. ಹೀಗಾಗಿ ಟೂರ್ನಿಯನ್ನು 15 ದಿನಗಳ ಕಾಲ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ" ಎಂದು ಶಾಜಿ ಉಲ್ ಮುಲ್ಕ್​ ಹೇಳಿದರು.

First published: October 17, 2019, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading