ಬರಲಿದೆ ಯುವರಾಜ್ ಸಿಂಗ್ ಬಯೋಪಿಕ್ ಸಿನಿಮಾ; ಹೀರೋ ಇವರೇ ಆಗಬೇಕೆಂದ ಸಿಕ್ಸರ್ ಕಿಂಗ್

Yuvraj Singh biopic: ವಿಶ್ವ ಕ್ರಿಕೆಟ್‌ ಕಂಡ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಯುವರಾಜ್ ಸಿಂಗ್, ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ಗಳಿಸಿಕೊಟ್ಟಿದ್ದಾರೆ. 2011ನೇ ವಿಶ್ವಕಪ್‌ನಲ್ಲಿ ಕ್ಯಾನ್ಸರ್ ರೋಗದ ಹೊರತಾಗಿಯೂ ಯುವರಾಜ್ ಸಿಂಗ್ ಅಮೋಘ ಪ್ರದರ್ಶನ ನೀಡಿದ್ದರು.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

 • Share this:
  ಈಗೇನಿದ್ದರು ಜೀನಾಧರಿತ ಸಿನಿಮಾಗಳ ಕಾಲ. ಅದರಲ್ಲು ಖ್ಯಾತ ಕ್ರಿಕೆಟಿಗರ ಬಯೋಪಿಕ್ ಬಾಲಿವುಡ್​ನಲ್ಲಿ ಸಾಕಷ್ಟು ಸದ್ದು ಮಾಡಿವೆ. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ, ಬಾಕ್ಸಿಂಗ್ ತಾರೆ ಮೇರಿ ಕೋಮ್ ಹೀಗೆ ಖ್ಯಾತ ಕ್ರೀಡಾಪಟುಗಳ ಜೀವನ ಸಿನಿಮಾವಾಗಿ ಮಾರ್ಪಟ್ಟಿದೆ.

  Yuvraj Singh thinks Siddhant Chaturvedi star in his biopic
  ಸಿದ್ಧಾಂತ್ ಚತುರ್ವೇದಿ


  ಅಲ್ಲದೆ ಕಪಿಲ್ ದೇವ್ ಬಗ್ಗೆ ಸಿನಿಮಾ 83 ಬಿಡುಗಡೆಗೆ ತಯಾರಾಗಿದೆ. ಸೈನಾ ನೆಹ್ವಾಲ್ ಕುರಿತ ಸಿನಿಮಾ ಕೂಡ ರೆಡಿಯಾಗುತ್ತಿದೆ. ಸದ್ಯ ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ಜೀವನ ಆಧರಿತ ಸಿನಿಮಾ ಸಹ ತಯಾರಾಗುವ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತವೆ.

  ಒಂದುವೇಳೆ ಯುವರಾಜ್ ಸಿಂಗ್ ಬಗ್ಗೆ ಸಿನಿಮಾ ಬಂದಲ್ಲಿ ನಾಯಕ ಯಾರಾಗಬೇಕು?. ಇದಕ್ಕೆ ಸ್ವತಃ ಯುವರಾಜ್ ಅವರೇ ಉತ್ತರ ನೀಡಿದ್ದಾರೆ.

  'ನನ್ನ ಜೀವನಾಧರಿತ ಸಿನಿಮಾ ಮಾಡುವುದಾದರೆ ಇದರಲ್ಲಿ ನನ್ನ ಪಾತ್ರವನ್ನು ಜನಪ್ರಿಯ ಗಲ್ಲಿ ಬಾಯ್ ಬಾಲಿವುಡ್ ಚಿತ್ರದಲ್ಲಿ ಎಂಸಿ ಶೇರ್ ಕಥಾಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿರುವ ನಟ ಸಿದ್ದಾಂತ್ ಚತುರ್ವೇದಿ ನಟಿಸಬೇಕು' ಎಂದು ಹೇಳಿದ್ದಾರೆ.

  ಸಿದ್ಧಾಂತ್ ಚತುರ್ವೇದಿ ಕಾಣಲು ಯುವರಾಜ್ ಸಿಂಗ್ ರಂತೆಯೇ ಕಾಣುತ್ತಾರೆ. ಜೊತೆಗೆ ಪ್ರತಿಭಾವಂತ ನಟ ಕೂಡ ಹೌದು. ಗಲ್ಲಿ ಬಾಯ್ ಸಿನಿಮಾ ನಂತರ ಸಾಕಷ್ಟು ಅವಕಾಶಗಳು ಸಿಗಲು ಆರಂಭವಾಗಿವೆ. ಅಲ್ಲದೆ ಇವರು 2017 ರಲ್ಲಿ ಕ್ರಿಕೆಟ್ ಸಂಬಂಧಿತ ವೆಬ್‌ ಸೀರೀಸ್ 'ಇನ್‌ಸೈಡ್ ಎಡ್ಜ್‌' ಚಿತ್ರದಲ್ಲೂ ನಟಿಸಿದ್ದಾರೆ.

  2011ನೇ ವಿಶ್ವಕಪ್‌ನಲ್ಲಿ ಕ್ಯಾನ್ಸರ್ ರೋಗದ ಹೊರತಾಗಿಯೂ ಯುವರಾಜ್ ಸಿಂಗ್ ಅಮೋಘ ಪ್ರದರ್ಶನ ನೀಡಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  ವಿಶ್ವ ಕ್ರಿಕೆಟ್‌ ಕಂಡ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಯುವರಾಜ್ ಸಿಂಗ್, ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ಗಳಿಸಿಕೊಟ್ಟಿದ್ದಾರೆ. ಐಸಿಸಿಯ ಪ್ರಮುಖ ಪ್ರಶಸ್ತಿಗಳಾದ ಅಂಡರ್-19 ವಿಶ್ವಕಪ್‌, ಟಿ-20 ವಿಶ್ವಕಪ್‌, ಏಕದಿನ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದ ತಂಡದಲ್ಲಿದ್ದ ಏಕೈಕ ಭಾರತೀಯ ಎಂಬ ಶ್ರೇಯ ಹೊಂದಿದ್ದಾರೆ.

  ಯುವರಾಜ್ ಸಿಂಗ್ ಏಕದಿನ ಕ್ರಿಕೆಟ್‌ನಲ್ಲಿ 304 ಪಂದ್ಯಗಳಿಂದ (278 ಇನಿಂಗ್ಸ್‌) 8,701 ಕಲೆಹಾಕಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ 58 ಪಂದ್ಯಗಳ 51 ಇನಿಂಗ್ಸ್‌ಗಳಿಂದ 1,117 ರನ್‌ ಬಾರಿಸಿದ್ದಾರೆ. ಈ ಮೂರೂ ಮಾದರಿಯಲ್ಲಿ ಕ್ರಮವಾಗಿ 9 ವಿಕೆಟ್‌, 111 ವಿಕೆಟ್‌ ಮತ್ತು 28 ವಿಕೆಟ್‌ ಉರುಳಿಸಿದ್ದಾರೆ.
  First published: