ಸಾಮಾನ್ಯವಾಗಿ ಈ ಬಾಲಿವುಡ್ (Bollywood) ನಟ-ನಟಿಯರ ಪುಟ್ಟ ಮಕ್ಕಳನ್ನು ಮತ್ತು ನೆಚ್ಚಿನ ಕ್ರಿಕೆಟಿಗರ ಮಕ್ಕಳನ್ನು ನೋಡುವುದು ಎಂದರೆ ಅವರ ಅಭಿಮಾನಿಗಳಿಗೆ ತುಂಬಾನೇ ಖುಷಿ ಕೊಡುವ ವಿಚಾರ ಅಂತ ಹೇಳಬಹುದು. ಅದರಲ್ಲೂ ಕ್ರಿಕೆಟಿಗ (Cricketer)ಯುವರಾಜ್ ಸಿಂಗ್ (Yuvaraj Singh) ಎಂದರೆ ಹೊಡಿ-ಬಡಿ ಆಟಕ್ಕೆ ತುಂಬಾನೇ ಜನಪ್ರಿಯವಾದವರು ಮತ್ತು ಇವರಿಗಿರುವ ಅಭಿಮಾನಿಗಳು (Fans) ಬೇರೆ ಕ್ರಿಕೆಟರ್ ಗಳಿಗಿಂತಲೂ ಸ್ವಲ್ಪ ಹೆಚ್ಚು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಇಲ್ಲಿ ಯುವರಾಜ್ ಸಿಂಗ್ ಮತ್ತು ನಟಿ ಹೇಜಲ್ ಕೀಚ್ ಅವರ ಮಗನ ಮುದ್ದಾದ ಫೋಟೋ ನೋಡೋದು ಎಂದರೆ ಯಾರಿಗೆ ತಾನೇ ಕುತೂಹಲ ಇರುವುದಿಲ್ಲ ಹೇಳಿ? ಹೌದು ನಟಿ ಹೇಜಲ್ ಕೀಚ್ ಮತ್ತು ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಇಂದು (ನವೆಂಬರ್ 30) ತಮ್ಮ ಆರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ಕೆಲವು ಮುದ್ದಾದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಂಬಂಧವು ವರ್ಷಗಳಿಂದ ವರ್ಷಕ್ಕೆ ಹೇಗೆ ವಿಕಸನಗೊಂಡಿದೆ ಎಂಬುದನ್ನು ತೋರಿಸುವ ಈ ಎರಡು ಫೋಟೋಗಳನ್ನು ಯುವಿ ಅವರು ಹಂಚಿಕೊಂಡಿದ್ದಾರೆ.
ಮದುವೆ ವಾರ್ಷಿಕೋತ್ಸವದಂದು ಮಗನ ಫೋಟೋ ಪೋಸ್ಟ್ ಮಾಡಿದ ಯುವಿ
ಪತಿ ಯುವರಾಜ್ ಸಿಂಗ್ ಅವರು 6 ವರ್ಷಗಳ ಒಗ್ಗಟ್ಟಿನ ಸಂಭ್ರಮದಲ್ಲಿದ್ದು, ತಮ್ಮ ಪತ್ನಿ ಹೇಜಲ್ ಅವರಿಗೆ 6ನೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಅವರು ಈ ಎರಡು ಫೋಟೋಗಳ ಜೊತೆಗೆ ಇನ್ನೂ ಬೇರೆ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಒಂದು ಫೋಟೋದಲ್ಲಿ ದಂಪತಿಗಳಿಬ್ಬರು ತಮ್ಮ ಮುದ್ದಾದ ಮಗ ಒರಿಯನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಯುವರಾಜ್ ಸಿಂಗ್ ಈ ಪೋಸ್ಟ್ ಗೆ ಶೀರ್ಷಿಕೆ ನೀಡಿ "ಹ್ಯಾಪಿ 6 ಬೇಬಿ! ನಮ್ಮ ಪ್ರೀತಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಮತ್ತು ಸ್ಥಿರವಾಗಿ ನಿಲ್ಲುವಂತೆ ಮಾಡಿದ ಚಿಕ್ಕ ಮತ್ತು ದೊಡ್ಡ ಕ್ಷಣಗಳಿಗೆ ನಿನಗಿಂತ ಉತ್ತಮ ಸಂಗಾತಿಯನ್ನು ಪಡೆಯಲು ಸಾಧ್ಯವಿಲ್ಲ. ವಾರ್ಷಿಕೋತ್ಸವದ ಶುಭಾಶಯಗಳು" ಎಂದು ಬರೆದಿದ್ದಾರೆ.
ಹೇಜಲ್ ಅವರು 2016 ರಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು. ಈ ವರ್ಷದ ಜನವರಿಯಲ್ಲಿ, ದಂಪತಿಗಳು ತಮ್ಮ ಗಂಡು ಮಗುವನ್ನು ಸ್ವಾಗತಿಸಿದರು ಮತ್ತು ಅವರು ಅವನಿಗೆ ಒರಿಯನ್ ಎಂದು ಹೆಸರಿಟ್ಟರು.
ಈ ಹಿಂದೆ ಸಹ ಮಗನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದರು ಹೇಜಲ್
ಈ ಹಿಂದೆ ದೀಪಾವಳಿ ಹಬ್ಬದ ದಿನದಂದು ಹೇಜಲ್ ತನ್ನ ಪತಿ ಯುವರಾಜ್ ಸಿಂಗ್ ಮತ್ತು ಮಗ ಒರಿಯನ್ ಅವರ ಸೂಪರ್ ಕ್ಯೂಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು ಮತ್ತು ಅವರು ಅದಕ್ಕೆ "ನನ್ನ ಕಡೆಯಿಂದ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು. ನಮ್ಮ ಪುಟ್ಟ ಮಗು ಒರಿಯನ್ ನೊಂದಿಗೆ ನಮ್ಮ ಮೊದಲ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬವು ನಿಮಗೆ ಪ್ರೀತಿ, ಒಗ್ಗಟ್ಟು, ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಆಶಿಸುತ್ತೇನೆ" ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದರು.
ಇಷ್ಟೇ ಅಲ್ಲದೆ ಹೇಜಲ್ ಅವರು ‘ಫಾದರ್ಸ್ ಡೇ’ ಯಂದು ಸಹ ಒಂದು ಪೋಸ್ಟ್ ಅನ್ನು ಹಂಚಿಕೊಂಡು ಅದಕ್ಕೆ "ವಿಶ್ವಕ್ಕೆ ಒರಿಯನ್ ಕೀಚ್ ಸಿಂಗ್ ಗೆ ಸ್ವಾಗತ. ಮಮ್ಮಿ ಮತ್ತು ಡ್ಯಾಡಿ ತಮ್ಮ ಪುಟ್ಟ ಮಗನನ್ನು ಪ್ರೀತಿಸುತ್ತಾರೆ. ನಿನ್ನ ಕಣ್ಣುಗಳು ಪ್ರತಿ ಮುಗುಳ್ನಗೆಯೊಂದಿಗೆ ಮಿನುಗುತ್ತವೆ.. ಹ್ಯಾಪಿ ಫಾದರ್ಸ್ ಡೇ" ಎಂದು ಬರೆದಿದ್ದರು.
ಇದನ್ನೂ ಓದಿ: Jod Gumbaz: ಹರಕೆ ಈಡೇರಲು ಬೀಗ ಲಾಕ್! ಇಷ್ಟಾರ್ಥ ಈಡೇರಿದ್ರೆ ಮಾತ್ರ ಅನ್ಲಾಕ್
ಈ ವರ್ಷದ ತಾಯಂದಿರ ದಿನದಂದು ಸಹ ತಾವು ಮತ್ತು ತಮ್ಮ ಪುಟ್ಟ ಮಗನ ಫೋಟೋಗಳನ್ನು ಹೇಜಲ್ ಅವರು ಪೋಸ್ಟ್ ಮಾಡಿದ್ದರು. ಹೇಜಲ್ ಕೀಚ್ ಅವರು ನಟ ಸಲ್ಮಾನ್ ಖಾನ್ ಮತ್ತು ನಟಿ ಕರೀನಾ ಕಪೂರ್ ಅವರ ‘ಬಾಡಿಗಾರ್ಡ್’, ತೆಲುಗು ಚಿತ್ರ ಬಿಲ್ಲಾ ಮತ್ತು ಮ್ಯಾಕ್ಸಿಮಮ್ ನಂತಹ ಚಿತ್ರಗಳಲ್ಲಿ ನಟಿಸಿದ್ದರು. ಟೆಲಿವಿಷನ್ ರಿಯಾಲಿಟಿ ಶೋ ಬಿಗ್ಬಾಸ್ ನ ಏಳನೇ ಸೀಸನ್ ನಲ್ಲಿಯು ಸಹ ಹೇಜಲ್ ಅವರು ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ