ಮತ್ತೆ ಕ್ರಿಕೆಟ್ ಆಡಲಿದ್ದಾರೆ ಯುವರಾಜ್​; ಸಿಕ್ಸರ್ ಕಿಂಗ್ ಮನವಿಗೆ ಜೈ ಎಂದ ಬಿಸಿಸಿಐ

ಈಗಾಗಲೇ ಐಪಿಎಲ್​ನಲ್ಲಿ ಆಡುವುದಿಲ್ಲ ಎಂದು ತಿಳಿಸಿರುವ ಯುವರಾಜ್, ನಿವೃತ್ತಿ ಬಳಿಕ ಕೆಲ ವರ್ಷಗಳ ಕಾಲ ಕ್ರಿಕೆಟ್​ನ ಖುಷಿಯನ್ನು ಅನುಭವಿಸಲು ಇಚ್ಛಿಸುತ್ತೇನೆ ಎಂದಿದ್ದರು.

Vinay Bhat | news18
Updated:June 21, 2019, 4:26 PM IST
ಮತ್ತೆ ಕ್ರಿಕೆಟ್ ಆಡಲಿದ್ದಾರೆ ಯುವರಾಜ್​; ಸಿಕ್ಸರ್ ಕಿಂಗ್ ಮನವಿಗೆ ಜೈ ಎಂದ ಬಿಸಿಸಿಐ
ಯುವರಾಜ್ ಸಿಂಗ್
Vinay Bhat | news18
Updated: June 21, 2019, 4:26 PM IST
ಬೆಂಗಳೂರು (ಜೂ. 21): ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಅವರು ಸದ್ಯ ಮತ್ತೆ ಮೈದಾನದಲ್ಲಿ ಕಾದಾಟ ನಡೆಸಲು ಸಜ್ಜಾಗಿದ್ದಾರೆ.

ಐಪಿಎಲ್ ಸೇರಿ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಹಿಂದೆ ಸರಿದಿರುವ ಯುವಿ ವಿದೇಶಿ ಟಿ-20 ಲೀಗ್​ನಲ್ಲಿ ಆಡಲು ಅನುಮತಿಕೋರಿ ಮೊನ್ನೆಯಷ್ಟೇ ಬಿಸಿಸಿಗೆ ಪತ್ರ ಬರೆದಿದ್ದರು. ಸದ್ಯ ಯುವಿ ಮನವಿಗೆ ಬಿಸಿಸಿಐ ಅಸ್ತು ಎಂದಿದ್ದು, ಕೆನಡಾ ಗ್ಲೋಬಲ್ ಟಿ-20 ಲೀಗ್​ನಲ್ಲಿ ಟೊರಾಂಟೋ ಇಂಟರ್​ನ್ಯಾಷನಲ್​​ ಪರವಾಗಿ ಬ್ಯಾಟ್ ಬೀಸಲಿದ್ದಾರೆ.

ಇದೇ ಜೂನ್ 10 ರಂದು ಯುವಿ ನಿವೃತ್ತಿ ಘೊಷಿಸಿದ್ದರು. ಅಲ್ಲದೇ ಇದೇವೇಳೆ ನಾನು ಮುಂದೆ ವಿದೇಶಿ ಟಿ-20 ಟೂರ್ನಿಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು.

Yuvraj Formally Writes to BCCI Seeking Nod For Participation in Overseas T20 Leagues
ಯುವರಾಜ್ ಸಿಂಗ್


ಕೆನಡಾ ಗ್ಲೋಬಲ್ ಟಿ-20 ತನ್ನ ಟ್ವಿಟರ್ ಖಾತೆಯಲ್ಲಿ ಯುವರಾಜ್ ಆಗಮನದ ಬಗ್ಗೆ ಪೋಸ್ಟ್ ಮಾಡಿದೆ. ಹೀಗಾಗಿ ಸಿಕ್ಸರ್ ಕಿಂಗ್ ಟಿ-20 ಲೀಗ್ ಮಿಂಚು ಹರಿಸಲಿದ್ದಾರೆ. ಇದರಿಂದ ಯುವರಾಜ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

 

 
Loading...
ಭಾರತದ ವಿರುದ್ಧ ಪಾಕ್ ಹೀನಾಯ ಸೋಲು; ಇಡೀ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಇಮ್ರಾನ್​ಗೆ ಪತ್ರ ಬರೆದ ಅಕ್ಮಲ್!

ಯುವರಾಜ್ ಜೊತೆಗೆ ನ್ಯೂಜಿಲ್ಯಾಂಡ್​​ ತಂಡದ ನಾಯಕ ಕೇನ್ ವಿಲಿಯಮ್ಸನ್​, ಬ್ರೆಂಡನ್ ಮೆಕಲಂ, ಕ್ರಿಸ್ ಲಿನ್, ಶೋಯೆಬ್ ಮಲಿಕ್, ಫಾಫ್​ ಡುಪ್ಲೆಸಿಸ್​​, ಕೀರೊನ್ ಪೊಲ್ಲಾರ್ಡ್​, ಆ್ಯಂಡ್ರೋ ರಸೆಲ್, ಶಕಿಬ್ ಅಲ್ ಹಸನ್, ಕಾಲಿನ್ ಮುನ್ರೋ ಕೂಡ ಕೆನಡಾ ಗ್ಲೋಬಲ್ ಟಿ-20 ಟೂರ್ನಿಯಲ್ಲಿ ಆಡಲಿದ್ದಾರೆ.

ಈಗಾಗಲೇ ಐಪಿಎಲ್​ನಲ್ಲಿ ಆಡುವುದಿಲ್ಲ ಎಂದು ತಿಳಿಸಿರುವ ಯುವರಾಜ್, ನಿವೃತ್ತಿ ಬಳಿಕ ಕೆಲ ವರ್ಷಗಳ ಕಾಲ ಕ್ರಿಕೆಟ್​ನ ಖುಷಿಯನ್ನು ಅನುಭವಿಸಲು ಇಚ್ಛಿಸುತ್ತೇನೆ. ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕುರಿತು ಆಲೋಚಿಸಿ ಒತ್ತಡಕ್ಕೆ ಒಳಗಾಗಿದ್ದೇನೆ. ನನಗೀಗ ನೆಮ್ಮದಿ ಸಿಕ್ಕಿದೆ. ಹೀಗಾಗಿ ವಿದೇಶಿ ಟಿ-20 ಲೀಗ್ ಗಳಲ್ಲಿ ಭಾಗವಹಿಸುತ್ತೇನೆ ಎಂದಿದ್ದರು.

First published:June 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...