ಯುವರಾಜನಿಗೆ ಬೀಳ್ಕೊಡುಗೆ ಇಲ್ಲದ ವಿದಾಯ; ಲೆಜೆಂಡ್​ನ ನಿವೃತ್ತಿಗೆ ಗೆಳೆಯರ ಶುಭ ಹಾರೈಕೆ

Yuvraj Singh Retires: ಜೀವನದ 2ನೇ ಇನ್ನಿಂಗ್ಸ್ ಆರಂಭಿಸಿರುವ ಯುವರಾಜ್​ಗೆ ಅನೇಕರು ಶುಭ ಕೋರಿದ್ದಾರೆ. ವಿರಾಟ್ ಕೊಹ್ಲಿ, ಸೆಹ್ವಾಗ್, ಸಚಿನ್ ಸೇರಿದಂತೆ ಅನೇಕರು ಯುವಿಗೆ ಶುಭ ಹಾರೈಸಿದ್ದಾರೆ.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

  • News18
  • Last Updated :
  • Share this:
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕ್ರಿಕೆಟ್ ಬದುಕಿಗೆ ಗುಡ್​ಬೈ ಹೇಳಿದ್ದಾರೆ. ಏಕದಿನ-ಟಿ20 ಕ್ರಿಕೆಟ್​​ನಲ್ಲಿ ಶ್ರೇಷ್ಠ ಬ್ಯಾಟ್ಸ್​​ಮನ್ ಯುವರಾಜ್ ಸಿಂಗ್, ಟೀಂ ಇಂಡಿಯಾದಲ್ಲಿ ಮ್ಯಾಚ್ ಫಿನೀಶರ್ ಆಗಿ ಗುರುತಿಸಿಕೊಂಡಿದ್ದರು. ಹಲವು ಸ್ಮರಣೀಯ ಇನ್ನಿಂಗ್ಸ್ ಹಾಗೂ ದಾಖಲೆಗಳನ್ನ ಸೃಷ್ಠಿಸಿರುವ ಯುವಿ  2007ರ ಟಿ20 ವಿಶ್ವಕಪ್, 2011ರ ಐಸಿಸಿ ವಿಶ್ವಕಪ್​​ನಲ್ಲಿ ಹೀರೋ ಆಗಿ ಮಿಂಚಿದರು. ಆದರೆ ಇನ್ಮುಂದೆ ಯುವಿಯನ್ನ ನಾವು ಮತ್ತೆ ಟೀಂ ಇಂಡಿಯಾ ಜೆರ್ಸಿಯಲ್ಲಿ ನೋಡಲು ಅವಕಾಶವಿಲ್ಲ.

ಯುವರಾಜ್ ಸಿಂಗ್ ಸೋಲೊಪ್ಪಿಕೊಳ್ಳಲಾರದ ಅಪ್ಪಟ ಹೋರಾಟಗಾರ. ಶರವೇಗದಲ್ಲಿ ರನ್ ಗಳಿಸುತ್ತಾ ಪಂದ್ಯವನ್ನ ಏಕಾಂಗಿಯಾಗಿ ಗೆಲ್ಲಿಸಿಕೊಡಬಲ್ಲ ತಾಕತ್ತಿರುವ ಆಟಗಾರ. ಯುವರಾಜ್ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ 25 ವರ್ಷಗಳ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸಿದ್ದಾರೆ.

17 ವರ್ಷಗಳ ಅಮೋಘ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ ಮುಗಿಸಿದ ಯುವಿ ಜೀವನದಲ್ಲಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್​ನ ಪ್ರದರ್ಶನ ಬಹುದೊಡ್ಡದು. ಇದರ ಜೊತೆಗೆ 6 ಎಸೆತಗಳಲ್ಲಿ ಯುವಿ 6 ಸಿಕ್ಸರ್ ಸಿಡಿಸಿದ್ದನ್ನ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ.

Yo Yo Test: 'ಯೋ ಯೋ ಟೆಸ್ಟ್​ ಪಾಸ್​ ಮಾಡಿದರೂ ಅವಕಾಶ ಕೊಡಲಿಲ್ಲ, ಸಮಯ ಬಂದಾಗ ಮಾತಾಡ್ತೀನಿ'; ಯುವಿ

Yuvraj Singh Retires from International Cricket & IPL, Keeps Overseas T20 Door Open
ಯುವರಾಜ್ ಸಿಂಗ್


ಇಂತಹ ಆಟಗಾರನಿಗೆ ಟೀಂ ಇಂಡಿಯಾ ಪರ ಬಿಸಿಸಿಐ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡುವ ಅವಕಾಶ ಕೊಡಲಿಲ್ಲ. ರಾಹುಲ್ ದ್ರಾವಿಡ್,​ ವಿವಿಎಸ್​ ಲಕ್ಷ್ಮಣ್​, ಗಂಗೂಲಿ, ಸೆಹ್ವಾಗ್​ ಹಾಗೂ ಗಂಭೀರ್​ರಂತಯೇ ಯುವಿ ಕೂಡ ಬೀಳ್ಕೊಡುಗೆ ಪಂದ್ಯವಾಡದೇ ನಿವೃತ್ತಿ ಘೋಷಿಸ ಬೇಕಾಗಿ ಬಂತು.

ಸದ್ಯ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಿರುವ ಯುವರಾಜ್​ಗೆ ಅನೇಕರು ಶುಭ ಕೋರಿದ್ದಾರೆ. ವಿರಾಟ್ ಕೊಹ್ಲಿ, ಸೆಹ್ವಾಗ್, ಸಚಿನ್ ಸೇರಿದಂತೆ ಅನೇಕರು ಯುವಿಗೆ ಶುಭ ಹಾರೈಸಿದ್ದಾರೆ.

ವಿಶೇಷ ಅಂದರೆ ಯುವಿ ಬ್ಯಾಟ್​ನಿಂದ 6 ಬಾಲ್​​ಗೆ 6 ಸಿಕ್ಸರ್ ಹೊಡೆಸಿಕೊಂಡ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡ 'ಮುಂದಿನ ದಿನಗಳನ್ನು ಆನಂದಿಸಿ ದಿಗ್ಗಜ' ಎಂದು ಟ್ವೀಟ್ ಮಾಡಿ ಶುಭಕೋರಿದ್ದಾರೆ.

  

  First published: