ಯುವರಾಜ್ ಸಿಂಗ್
- News18
- Last Updated:
May 2, 2019, 3:20 PM IST
2011 ವಿಶ್ವಕಪ್ ಫೈನಲ್ ಪಂದ್ಯವನ್ನು ಯಾರಿಂದಲು ಮರೆಯಲು ಸಾಧ್ಯವಿಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ವಿನ್ನಿಂಗ್ ಸಿಕ್ಸರ್ ಸಿಡಿಸಿ ಎರಡನೇ ಬಾರಿ ಭಾರತ ವಿಶ್ವಕಪ್ ಎತ್ತಿ ಹಿಡಿಯುವಂತೆ ಮಾಡಿದರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದರು.
ಆ ಬಳಿಕ ಕಳಪೆ ಫಾರ್ಮ್ಗೆ ಮರಳಿದ ಯುವಿಯನ್ನು ಕೊನೆಗೂ ಈಬಾರಿ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿತು. ಹೀಗಾಗಿ 12ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ಗೆ ಕಮ್ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ ಸಿಕ್ಸರ್ಗಳ ಸರದಾರ.
ಈಗಾಗಲೇ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ
ಯುವರಾಜ್ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ವಾಂಖೆಡೆ ಮೈದಾನಕ್ಕೆ ಇಳಿದ ಕೂಡಲೇ ಯುವಿಗೆ 2011ರ ವಿಶ್ವಕಪ್ ಫೈನಲ್ ನೆನಪು ಕಾಡುತ್ತಿದೆಯಂತೆ. ಅಭ್ಯಾಸಕ್ಕಾಗಿ ಮೈದಾನಕ್ಕೆ ಇಳಿಯುವಾಗ ಮಾತನಾಡಿರುವ ಯುವಿ, ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಈ ಬಾರಿಯ ಐಪಿಎಲ್ನಲ್ಲಿ ಸ್ಟಾರ್ ಆಟಗಾರರಿರುವ 3 ಬಲಿಷ್ಠ ತಂಡಗಳು ಇವುಗಳೆ ನೋಡಿ
ಈ ಮೈದಾನಕ್ಕೆ ಇಳಿದ ಕೂಡಲೇ ಮೊದಲಿಗೆ ವಿಶ್ವಕಪ್ ನೆನಪು ಮರುಕಳಿಸುತ್ತದೆ. ಇದೇ ನನ್ನ ಜೀವನದ ಮರೆಯಲಾಗದ ನೆನಪು ಎಂದಿದ್ದಾರೆ.
First published:
March 19, 2019, 12:21 PM IST