ಟಿ-20 ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸುವುದು ಸಾಧ್ಯವಾಗದ ಮಾತು ಎಂದು ಹೇಳಲಾಗಿತ್ತು. ಆದರೆ, ಕ್ರಿಕೆಟ್ನಲ್ಲಿ ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆ ಕಂಡರೆ ಸದ್ಯದಲ್ಲೇ ಟಿ-20 ಯಲ್ಲಿ ಬ್ಯಾಟ್ಸ್ಮನ್ 200 ರನ್ ಸಿಡಿಸದರೆ ಅಚ್ಚರಿಯಿಲ್ಲ ಎಂಬಂತಾಗಿದೆ.
ಟಿ-20 ಕ್ರಿಕೆಟ್ನಲ್ಲಿ 200 ರನ್ಗಿಂತ ಅಧಿಕ ಟಾರ್ಗೆಟ್ ನೀಡುವುದು ಈಗ ಸಾಮಾನ್ಯ. ಈ ಟಾರ್ಗೆಟ್ ಅನ್ನು ಬೆನ್ನಟ್ಟಿ ಗೆಲುವು ಸಾಧಿಸುತ್ತಿರುವುದು ಹೊಸ ವಿಚಾರವೇನಲ್ಲ.
![Yuvraj Singh Names Three Batsmens Who Can Score Double Century in T20 Cricket]()
ಯುವರಾಜ್ ಸಿಂಗ್.
IND vs NZ: ವೈಟ್ವಾಷ್ ಮಾಡಲು ಮಾಸ್ಟರ್ ಪ್ಲಾನ್; ಕಿವೀಸ್ ಪಡೆಯಿಂದ ಹೊರಬಿತ್ತು ಶಾಕಿಂಗ್ ಸುದ್ದಿ!
ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸಿದಾಗಲೇ ತಿಳಿದಿದ್ದು ಬ್ಯಾಟ್ಸ್ಮನ್ ಒಬ್ಬ 50 ಓವರ್ನ ಪಂದ್ಯದಲ್ಲಿ 200 ರನ್ ಗಡಿ ದಾಟ ಬಹುದೆಂದು. ಬಳಿಕ ಇದೇ ಸಾಧನೆಯನ್ನು ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ಕ್ರಿಸ್ ಗೇಲ್ ಸೇರಿ ಪ್ರಮುಖರು ಮಾಡಿದ್ದಾರೆ.
ಆದರೆ, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾಬೊಬ್ಬ ಬ್ಯಾಟ್ಸ್ಮನ್ ದ್ವಿಶತಕದ ಸಾಧನೆ ಮಾಡಿಲ್ಲ. ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ನಲ್ಲಿ ಅಜೇಯ 175 ರನ್ ಚಚ್ಚಿರುವುದು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟ್ಸ್ಮನ್ ಒಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಂತರಾಷ್ಟ್ರೀಯ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ 172 ರನ್ ಗಳಿಸಿದ್ದಾರೆ.
ದಾಖಲೆ ಮೇಲೆ ದಾಖಲೆ ಬರೆದ ಜೈಸ್ವಾಲ್; ವಿಶ್ವಕಪ್ನಲ್ಲಿ ಸಿಡಿಸಿದ ಸಿಕ್ಸ್, ರನ್, ಶತಕ, ಅರ್ಧಶತಕ ಎಷ್ಟು ಗೊತ್ತಾ?
ಆದರೆ, ಸದ್ಯ ಇಡೀ ಜಗತ್ತು ಟಿ-20 ಕ್ರಿಕೆಟ್ನಲ್ಲಿ ಮೊದಲ ದ್ವಿಶತಕ ಸಿಡಿಸುವ ಬ್ಯಾಟ್ಸ್ಮನ್ ಯಾರು? ಎಂಬುವುದನ್ನು ಎದುರು ನೋಡುತ್ತಿದೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಉತ್ತರ ನೀಡಿದ್ದಾರೆ.
ಯುವಿ ಪ್ರಕಾರ ಟಿ-20 ಯಲ್ಲಿ ಡಬಲ್ ಸೆಂಚುರಿ ಬಾರಿಸುವ ಆಟಗಾರರು ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ರೋಹಿತ್ ಶರ್ಮಾ. ಇವರ ಒಂದಲ್ಲ ಒಂದು ದಿನ ಟಿ-20 ಕ್ರಿಕೆಟ್ನಲ್ಲಿ 200 ರನ್ ಬಾರಿಸುತ್ತಾರೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ