HOME » NEWS » Sports » CRICKET YUVRAJ SINGH NAMED IN FIR OVER CASTEIST REMARKS ZP

Yuvraj Singh: ಜಾತಿ ನಿಂದನೆ ಆರೋಪ: ಯುವರಾಜ್ ಸಿಂಗ್ ವಿರುದ್ದ ಎಫ್​ಐಆರ್ ದಾಖಲು

ಚಹಲ್ ಮಾಡೋ ಟಿಕ್-ಟಾಕ್ ವೀಡಿಯೊ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾತನಾಡ್ತಾ, ಈ ಯುಜಿ ಹಾಗೂ ಕುಲ್ದೀಪ್​ಗೆ ಬೇರೆ ಕೆಲಸ ಇಲ್ಲ ಎಂದು ಯುವರಾಜ್​ ​ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ಯುಜಿ ಟಿಕ್​-ಟಾಕ್​ನಲ್ಲಿ ವಿಡಿಯೋ ಹಾಕಿದ್ದು ನೋಡಿದಿಯಾ, ನಾನು ಈ ಹಿಂದೆ ಯುಜಿಗೆ ಇದನ್ನೇ ಕೇಳಿದ್ದೆ.

news18-kannada
Updated:February 15, 2021, 4:06 PM IST
Yuvraj Singh: ಜಾತಿ ನಿಂದನೆ ಆರೋಪ: ಯುವರಾಜ್ ಸಿಂಗ್ ವಿರುದ್ದ ಎಫ್​ಐಆರ್ ದಾಖಲು
Yuvraj Singh
  • Share this:
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಪೊಲೀಸರು ಜಾತಿ ನಿಂದನೆ ಆರೋಪದಡಿ ಎಫ್​ಐಆರ್​ ದಾಖಲಿಸಿದ್ದಾರೆ. ಕಳೆದ ವರ್ಷ ಲಾಕ್​ಡೌನ್ ವೇಳೆ ಯುವರಾಜ್ ಸಿಂಗ್ ಲೈವ್ ಚಾಟ್​ನಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2020ರ ಜೂನ್​ನಲ್ಲಿ ರೋಹಿತ್‌ ಶರ್ಮಾ ಜೊತೆಗೆ ಇನ್‌ಸ್ಟಾಗ್ರಾಂ ಲೈವ್‌ ಚಾಟ್‌ನಲ್ಲಿ ಭಾಗವಹಿಸಿದ್ದ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಯಜುವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್ ಬಗ್ಗೆ ಜಾತಿ ಸೂಚಕ ಪದ ಬಳಸಿದ್ದರು.

ಚಹಲ್ ಮಾಡೋ ಟಿಕ್-ಟಾಕ್ ವೀಡಿಯೊ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾತನಾಡ್ತಾ, ಈ ಯುಜಿ ಹಾಗೂ ಕುಲ್ದೀಪ್​ಗೆ ಬೇರೆ ಕೆಲಸ ಇಲ್ಲ ಎಂದು ಯುವರಾಜ್​ ​ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ಯುಜಿ ಟಿಕ್​-ಟಾಕ್​ನಲ್ಲಿ ವಿಡಿಯೋ ಹಾಕಿದ್ದು ನೋಡಿದಿಯಾ, ನಾನು ಈ ಹಿಂದೆ ಯುಜಿಗೆ ಇದನ್ನೇ ಕೇಳಿದ್ದೆ, ತಂದೆಯನ್ನು ಕುಣಿಸುತ್ತಿದ್ದಿಯಲ್ಲಾ ನಿಂಗೇನು ಹುಚ್ಚು ಹಿಡೀತಾ ಅಂತ ರೋಹಿತ್​ ಶರ್ಮಾ ಮಾತನಾಡಿದ್ದರು.

ಈ ಸಂಭಾಷಣೆ ವೇಳೆ ಯುವಿ ಜಾತಿ ಸೂಚಕ ಪದ ಬಳಸಿದ್ದರು. ಈ ವಿಚಾರ ವೈರಲ್ ಆಗುತ್ತಿದ್ದಂತೆ ಯುವರಾಜ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು. ಆದರೆ ಈ ಬಗ್ಗೆ ದಲಿತ ಮಾನವ ಹಕ್ಕುಗಳ ವಕೀಲ ಕನ್ವೀನರ್ ರಜತ್ ಕಲ್ಸನ್ ಅವರು 8 ತಿಂಗಳ ಹಿಂದೆಯೇ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹರ್ಯಾಣದ ಹಿಸಾರ್​ನ ಪೊಲೀಸರು ಈಗ ಎಫ್​ಐಆರ್​ ದಾಖಲಿಸಿದ್ದಾರೆ.

ಹಿಸಾರ್‌ನ ಹನ್ಸಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತೀಯ ಕ್ರಿಕೆಟಿಗ ಯುವಿ ವಿರುದ್ಧ ಐಪಿಸಿ ಸೆಕ್ಷನ್‌ 153, 153 ಎ, 295, 505 ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.
Published by: zahir
First published: February 15, 2021, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories