ಬೆಂಗಳೂರು (ಸೆ. 02): ಜಮೈಕಾದಲ್ಲಿ ಸಾಗುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದರು. ಎರಡನೇ ದಿನದಾಟದಲ್ಲಿ ತನ್ನ 9 ನೇ ಓವರ್ನಲ್ಲಿ ಡ್ಯಾರೆನ್ ಬ್ರಾವೋ, ಶಾಮ್ರಾಹ್ ಬ್ರೂಕ್ಸ್ ಹಾಗೂ ರೋಸ್ಟೋನ್ ಚೇಸ್ ವಿಕೆಟ್ಗಳನ್ನು ಕಬಳಿಸಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು.
ಈ ಮೂಲಕ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾನ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಶ್ರೇಯಕ್ಕೆ ಬುಮ್ರಾ ಪಾತ್ರರಾಗಿದ್ದರು. ಬುಮ್ರಾರ ಈ ಸಾಧನೆಗೆ ಇಡೀ ದೇಶವೇ ಕೊಂಡಾಡಿದೆ. ಕ್ರಿಕೆಟ್ ದಿಗ್ಗಜರು ಬುಮ್ರಾ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ.
![Unsurprised Yuvraj Singh Congratulates Jasprit Bumrah For Test Hat-Trick]()
ಯುವರಾಜ್ ಸಿಂಗ್
IND vs WI: ಕೆರಿಬಿಯನ್ನರಿಗೆ ಬೇಡವಾಯಿತೆ ಟೆಸ್ಟ್ ಕ್ರಿಕೆಟ್?; ಪಂದ್ಯ ನೋಡಲು ಬಂದವರೆಷ್ಟು ಗೊತ್ತಾ..?
ಆದರೆ, ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಬುಮ್ರಾ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದು ನನಗೆ ಯಾವುದೇ ಆಶ್ಚರ್ಯ ತರಿಸಿಲ್ಲ ಎಂದು ಹೇಳಿದ್ದಾರೆ.
'ಜಸ್ಪ್ರೀತ್ ಬುಮ್ರಾ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದಕ್ಕೆ ಅವರಿಗೆ ಅಭಿನಂದನೆಗಳು. ಆದರೆ, ನೀವು ಹ್ಯಾಟ್ರಿಕ್ ವಿಕೆಟ್ ಕಿತ್ತಿರುವುದು ನನಗೆ ಅಶ್ವರ್ಯವೆನಿಲ್ಲ. ಯಾಕೆಂದರೆ ನೀವು ವಿಶ್ವದ ನಂಬರ್ 1 ಬೌಲರ್, ಅದನ್ನು ಮತ್ತೆ ಸಾಭೀತು ಮಾಡಿದ್ದೀರಿ, ನೀವು ಏನು ಎಂಬುದನ್ನು ಮತ್ತೊಮ್ಮೆ ಕ್ರೀಡಾ ಜಗತ್ತಿಗೆ ತೋರಿಸಿ ಕೊಟ್ಟಿದ್ದೀರಿ' ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಡುತ್ತಿದೆ. ಗೆಲ್ಲಲು 468 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಕೆರಿಬಿಯನ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ. ವಿಂಡೀಸ್ ಗೆಲುವಿಗೆ ಇನ್ನೂ 423 ರನ್ಗಳ ಅವಶ್ಯಕತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ