'ಯುವರಾಜ್​​ಗೆ ಕೊನೆಯ ಐಪಿಎಲ್​​' ವಿಚಾರ ತಿಳಿದಿದ್ದರೂ ಅವಕಾಶ ನೀಡದ ಮುಂಬೈ ಇಂಡಿಯನ್ಸ್?

ಈ ಬಾರಿಯ ಐಪಿಎಲ್​ನಲ್ಲಿ ಯುವಿ ಆಡಿದ್ದು ಕೇವಲ 4 ಪಂದ್ಯಗಳನ್ನಷ್ಟೆ. ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದರು. ಒಟ್ಟು 4 ಪಂದ್ಯಗಳಲ್ಲಿ 98 ರನ್ ಕಲೆಹಾಕಿರು.

ಈ ಸಂದರ್ಭ 2016ರ ಐಪಿಎಲ್ಗೂ ಮುನ್ನ ನಡೆದ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯುವಿ ಅನ್ನು ದಾಖಲೆ ಎಂಬಂತೆ 16 ಕೋಟಿ ಕೊಟ್ಟು ಖರೀದಿ ಮಾಡಿತ್ತು.

ಈ ಸಂದರ್ಭ 2016ರ ಐಪಿಎಲ್ಗೂ ಮುನ್ನ ನಡೆದ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯುವಿ ಅನ್ನು ದಾಖಲೆ ಎಂಬಂತೆ 16 ಕೋಟಿ ಕೊಟ್ಟು ಖರೀದಿ ಮಾಡಿತ್ತು.

  • News18
  • Last Updated :
  • Share this:
ಬೆಂಗಳೂರು (ಜೂ. 27): ಜೂನ್ 10 2019 ಭಾರತದ ಕ್ರೀಡಾಭಿಮಾನಿಗಳಿಗೆ ಎಂದೂ ಮರೆಯಲಾಗದ ದಿನ! 2011ರ ವಿಶ್ವಕಪ್​ ಹೀರೋ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡಿದ ದಿನವದು. 'ನಾನು ಅಂತರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಬಿಸಿಸಿಐಗೆ ಸಂಬಧಿಸಿದ ಯಾವುದೇ ಕ್ರಿಕೆಟ್ ಪಂದ್ಯವನ್ನು ಇನ್ನುಮುಂದೆ ಆಡುವುದಿಲ್ಲ' ಎಂದು ಖಡಕ್ ಆಗಿ ಹೇಳಿದ್ದರು.

ಯುವಿ ಈ ಮಾತನ್ನು ಹೇಳಲು ಪ್ರಮುಖ ಕಾರಣವಿದೆ. ನಿವೃತ್ತಿ ಘೋಷಿಸುವ ಮೊದಲು ಯುವರಾಜ್ ಬಿಸಿಸಿಐ ಬಳಿ ಈ ವಿಚಾರ ಪ್ರಸ್ತಾಪಿಸಿದಾಗ ಯೋ-ಯೋ ಪರೀಕ್ಷೆಯಲ್ಲಿ ಪಾಸ್​ ಆಗದಿದ್ದರೂ ವಿದಾಯದ ಪಂದ್ಯ ಆಡಿಸುವುದಾಗಿ ಹೇಳಿತ್ತು. ಆದರೆ, ಇದಕ್ಕೆ ಒಪ್ಪದ ಯುವಿ ನಿಯಮದಂತೆ ಯೋ ಯೋ ಪರೀಕ್ಷೆ ಪಾಸ್ ಮಾಡುತ್ತೇನೆ, ಬಳಿಕ ಅವಕಾಶ ನೀಡಿ ಎಂದಿದ್ದರು. ಆದರೆ, ನಂತರದಲ್ಲಿ ಪರೀಕ್ಷೆ ಪಾಸ್ ಆದರೂ ಬಿಸಿಸಿಐ ಯುವರಾಜ್​ಗೆ ನಿವೃತ್ತಿಯ ಪಂದ್ಯವನ್ನೂ ಆಡಲು ಅವಕಾಶ ನೀಡಲಿಲ್ಲ. ಈ ಬಗ್ಗೆ ಯುವರಾಜ್ ಬೇಸರವನ್ನೂ ವ್ಯಕ್ತ ಪಡಿಸಿದ್ದರು.

Yuvraj-Singh
ಯುವರಾಜ್ ಸಿಂಗ್


India vs West Indies: ವಿವಾದಾತ್ಮಕ ತೀರ್ಪು: ರೋಹಿತ್ ಔಟ್-ನಾಟೌಟ್, ವಿಡಿಯೋ ನೋಡಿ ನೀವೇ ನಿರ್ಧರಿಸಿ

ಇಷ್ಟೇ ಅಲ್ಲದೆ 2019​​ ನನ್ನ ಕೊನೆಯ ಐಪಿಎಲ್ ಟೂರ್ನಿ ಎಂದು ನಾನು ಕಳೆದ ವರ್ಷವೇ ಅಂದುಕೊಂಡಿದ್ದೆ ಎಂದು ಯುವಿ ಹೇಳಿದ್ದರು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಯುವಿ ಹರಾಜಾಗುವುದೆ ಅನುಮಾನ ಎಂಬ ಮಟ್ಟಕ್ಕೆ ತಲುಪಿತ್ತು. ಕೊನೆಯಲ್ಲಿ ಮುಂಬೈ ಇಂಡಿಯನ್ಸ್​ 1 ಕೋಟಿ ರೂ. ಕೊಟ್ಟು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ, ರೋಹಿತ್ ಟೀಂ ಯುವರಾಜ್​​ರನ್ನು ಹರಾಜಿನಲ್ಲಿ ಪಡೆದುಕೊಂಡಿದ್ದು ಬಿಟ್ಟರೆ, ಬೆಂಚ್ ಕಾಯಿಸಿದ್ದೇ ಹೆಚ್ಚು.

ಈ ಬಾರಿಯ ಐಪಿಎಲ್​ನಲ್ಲಿ ಯುವಿ ಆಡಿದ್ದು ಕೇವಲ 4 ಪಂದ್ಯಗಳನ್ನಷ್ಟೆ. ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದರು. ಒಟ್ಟು 4 ಪಂದ್ಯಗಳಲ್ಲಿ 98 ರನ್ ಕಲೆಹಾಕಿರು. ಆ ಬಳಿಕ ಯುವರಾಜ್​ಗೆ ತಂಡದಲ್ಲಿ ಸ್ಥಾನ ಸಿಗಲೇ ಇಲ್ಲ. ಯುವರಾಜ್​ಗೆ ಇದು ಕೊನೆಯ ಐಪಿಎಲ್ ಎಂಬುದು ಟೂರ್ನಿ ಆರಂಭವಾಗುವ ಹೊತ್ತಲ್ಲೇ ಸುದ್ದಿಯಾಗಿತ್ತು. ಇಷ್ಟಾದರು ಮುಂಬೈ ಇಂಡಿಯನ್ಸ್​ ಯುವರಾಜ್​ಗೆ ಕೊನೆಯ ಪಂದ್ಯವನ್ನಾಡುವ ಅವಕಾಶವನ್ನೂ ನೀಡಲಿಲ್ಲ.

ಇದಿಷ್ಟೆ ಅಲ್ಲದೆ ‘ಭಾರತ ಈಗ ವಿಶ್ವಕಪ್ ಆಡುತ್ತಿದೆ. ಈ ಸಂದರ್ಭದಲ್ಲಿ ನಾನು ಯಾವುದೇ ವಿವಾದವನ್ನು ಸೃಷ್ಟಿಸಲು ಬಯಸುವುದಿಲ್ಲ. ನನಗೆ ಸಮಯ ಸಮಯ ಬರುತ್ತದೆ, ಆಗ ಎಲ್ಲವನ್ನು ಮಾತನಾಡುತ್ತೇನೆ, ಎಲ್ಲವನ್ನೂ ಹೇಳುತ್ತೇನೆ’ ಎಂಬ ಮಾತನ್ನು ನುಡಿದು ಇನ್ನೂ ಅನೇಕ ವಿಚಾರವನ್ನು ಗೌಪ್ಯವಾಗಿಟ್ಟಿದ್ದಾರೆ.

First published: