HOME » NEWS » Sports » CRICKET YUVRAJ SINGH FACES POLICE PROBE OVER COMMENTS ON YUZVENDRA CHAHAL VB

Yuvraj Singh: ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ವಿರುದ್ಧ ಎಫ್​ಐಆರ್ ದಾಖಲು

ಹಿಸಾರ್‌ನಲ್ಲಿ ದಾಖಲಾಗಿರುವ ದೂರಿನಲ್ಲಿ ಯುವರಾಜ್ ಅವರು ಚಹಲ್ ವಿರುದ್ಧ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

news18-kannada
Updated:June 5, 2020, 10:57 AM IST
Yuvraj Singh: ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ವಿರುದ್ಧ ಎಫ್​ಐಆರ್ ದಾಖಲು
ಯುವರಾಜ್ ಸಿಂಗ್ ಹಾಗೂ ಯಜುವೇಂದ್ರ ಚಹಾಲ್.
  • Share this:
ಟೀಮ್ ಇಂಡಿಯಾದ ಮಾಜಿ ಆಟಗಾರ, 2011 ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ತಮಾಷೆ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿದ್ದಾರೆ. ಯುವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೇಸು ಎದುರಿಸುವಂತಾಗಿದೆ. ಭಾರತದ ಸ್ಟಾರ್‌ ಸ್ಪಿನ್ನರ್​ಗಳಾದ ಯಜುವೇಂದ್ರ ಚಹಾಲ್‌ ಮತ್ತು ಕುಲ್ದೀಪ್‌ ಯಾದವ್‌ ವಿರುದ್ಧ ಬಳಕೆ ಮಾಡಿರುವ ಪದದಿಂದಾಗಿ ಮಾಜಿ ಆಲ್‌ರೌಂಡರ್‌ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಟೀಂ ಇಂಡಿಯಾ ಉಪ ನಾಯಕ ರೋಹಿತ್‌ ಶರ್ಮಾ ಜೊತೆಗೆ ಇನ್‌ಸ್ಟಾಗ್ರಾಂ ಲೈವ್‌ ಚಾಟ್‌ನಲ್ಲಿ ಭಾಗವಹಿಸಿದ್ದ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಚಹಾಲ್‌ ಮತ್ತು ಕುಲ್ದೀಪ್‌ ಬಗ್ಗೆ ಜಾತಿ ಸೂಚಕ ಪದ ಬಳಸಿದ್ದಾರೆಂದು ಆರೋಪಿಸಲಾಗಿದೆ.

ಅಂದು ಸಚಿನ್ ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದ ಕ್ರಿಕೆಟಿಗ ಇಂದು ಸ್ಕೂಲ್ ಟೀಚರ್..!

ಹರ್ಯಾಣದ ಹಿಸಾರ್​ನಲ್ಲಿನ ವಕೀಲ ರಜತ್ ಕಲ್ಸನ್ ಅವರು, ಯುವರಾಜ್ ಸಿಂಗ್  ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಚಹಾಲ್ ಮಾಡೋ ಟಿಕ್-ಟಾಕ್ ವೀಡಿಯೊ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾತನಾಡ್ತಾ, ಈ ಯುಜಿ ಹಾಗೂ ಕುಲ್ದೀಪ್​ಗೆ ಬೇರೆ ಕೆಲಸ ಇಲ್ಲ ಎಂದು ಯುವರಾಜ್​ ​ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ಯುಜಿ ಟಿಕ್​-ಟಾಕ್​ನಲ್ಲಿ ವಿಡಿಯೋ ಹಾಕಿದ್ದು ನೋಡಿದಿಯಾ, ನಾನು ಈ ಹಿಂದೆ ಯುಜಿಗೆ ಇದನ್ನೇ ಕೇಳಿದ್ದೆ, ತಂದೆಯನ್ನು ಕುಣಿಸುತ್ತಿದ್ದಿಯಲ್ಲಾ ನಿಂಗೇನು ಹುಚ್ಚು ಹಿಡೀತಾ ಅಂತ ರೋಹಿತ್​ ಶರ್ಮಾ ಮಾತನಾಡಿದ್ದರು.

ಇದು ಹೃದಯ ವಿದ್ರಾವಕ ಘಟನೆ; ಗರ್ಭಿಣಿ ಆನೆಯ ಸಾವಿಗೆ ಆಕ್ರೋಶ ಹೊರಹಾಕಿದ ಟೀಂ ಇಂಡಿಯಾ ಆಟಗಾರರು

ಹಿಸಾರ್‌ನಲ್ಲಿ ದಾಖಲಾಗಿರುವ ದೂರಿನಲ್ಲಿ ಯುವರಾಜ್ ಅವರು ಚಹಲ್ ವಿರುದ್ಧ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಏತನ್ಮಧ್ಯೆ, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನೂ ದೂರಿನಲ್ಲಿ ಗುರಿಯಾಗಿಸಲಾಗಿದೆ. ಯುವರಾಜ್ ಅವರ ಟೀಕೆಗಳಿಂದ ದಲಿತ ಸಮುದಾಯದ ಭಾವನೆಗಳು ಘಾಸಿಗೊಂಡಿವೆ ಮತ್ತು ಆದ್ದರಿಂದ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ ಎಂದು ಕಲ್ಸನ್ ಹೇಳಿದರು.
First published: June 5, 2020, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories