ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ-20 ಲೀಗ್ ದಿನದಿಂದ ದಿನಕ್ಕೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಮೊದಲ ಪಂದ್ಯದಲ್ಲಿ ವ್ಯಾಂಕೋವರ್ ನೈಟ್ಸ್ ವಿರುದ್ಧ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ನಾಟೌಟ್ ಆಗಿದ್ದರೂ, ಔಟ್ ಎಂದು ಭಾವಿಸಿ ಮೈದಾನ ತೊರೆದು ಸುದ್ದಿಯಾಗಿದ್ದರು.
ಮತ್ತೊಂದು ಪಂದ್ಯದಲ್ಲಿ ಅಬ್ಬರಿಸಿದ್ದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 54 ಎಸೆತಗಳಲ್ಲಿ 122 ರನ್ಗಳನ್ನು ಚಚ್ಚುವ ಮೂಲಕ ಗ್ಲೋಬಲ್ ಟಿ-20 ಲೀಗ್ನಲ್ಲೂ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದರು. ಇನ್ನು ಆ್ಯಂಡ್ರೆ ರಸೆಲ್ ಮಿಂಚಿನಾಟ, ಡುಪ್ಲೆಸಿಸ್ ಅದ್ಭುತ ಫೀಲ್ಡಿಂಗ್ ಹೀಗೆ ಒಂದಲ್ಲಾ ಒಂದು ಕಾರಣದಿಂದ ಹೊಸ ಲೀಗ್ ಹೊಸ ಸಂಚಲನ ಸೃಷ್ಟಿಸುತ್ತಿದೆ.
ಆರು ತಂಡಗಳ ಈ ಲೀಗ್ನಲ್ಲಿ ಆಟಗಾರರು ಮೈದಾನದಲ್ಲಿ ಕಾದಾಟವಾದರೆ, ಹೊರಗೆ ಮೋಜು ಮಸ್ತಿಯ ಅಬ್ಬರ. ಇದಕ್ಕೆ ಸಾಕ್ಷಿ ಎಂಬಂತೆ ರಸೆಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆರಿಬಿಯನ್ ಆಟಗಾರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವರಾಜ್ ಸಿಂಗ್, ಕ್ರಿಸ್ ಗೇಲ್ ಪಕ್ಕಾ ಪಂಜಾಬಿ ಸ್ಟೈಲ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ