ಮತ್ತೆ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿ ಕೋರಿದ ಯುವರಾಜ್ ಸಿಂಗ್

Yuvraj Singh: ಈಗಾಗಲೇ ಐಪಿಎಲ್​ನಲ್ಲಿ ಆಡುವುದಿಲ್ಲ ಎಂದು ತಿಳಿಸಿರುವ ಯುವರಾಜ್, ನಿವೃತ್ತಿ ಬಳಿಕ ಕೆಲ ವರ್ಷಗಳ ಕಾಲ ಕ್ರಿಕೆಟ್​ನ ಖುಷಿಯನ್ನು ಅನುಭವಿಸಲು ಇಚ್ಛಿಸುತ್ತೇನೆ ಎಂದಿದ್ದರು.

Vinay Bhat | news18
Updated:June 19, 2019, 9:02 PM IST
ಮತ್ತೆ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿ ಕೋರಿದ ಯುವರಾಜ್ ಸಿಂಗ್
ಯುವರಾಜ್ ಸಿಂಗ್
Vinay Bhat | news18
Updated: June 19, 2019, 9:02 PM IST
ಬೆಂಗಳೂರು (ಜೂ. 19): ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಅವರು ಸದ್ಯ ಮತ್ತೆ ಮೈದಾನದಲ್ಲಿ ಕಾದಾಟ ನಡೆಸಲು ಬಿಸಿಸಿಐ ಮೊರೆ ಹೋಗಿದ್ದಾರೆ.

ಐಪಿಎಲ್ ಸೇರಿ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಹಿಂದೆ ಸರಿದಿರುವ ಯುವಿ ವಿದೇಶಿ ಟಿ-20 ಲೀಗ್​ನಲ್ಲಿ ಆಡಲು ಅನುಮತಿಕೋರಿ ಬಿಸಿಸಿಗೆ ಪತ್ರ ಬರೆದಿದ್ದಾರೆ.

ಇದೇ ಜೂನ್ 10 ರಂದು ಯುವಿ ನಿವೃತ್ತಿ ಘೊಷಿಸಿದ್ದರು. ಅಲ್ಲದೇ ಇದೇವೇಳೆ ನಾನು ಮುಂದೆ ವಿದೇಶಿ ಟಿ-20 ಟೂರ್ನಿಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಇದರಂತೆ ಸದ್ಯ ಯುವರಾಜ್ ಬಿಸಿಸಿಐನಿಂದ ಅನುಮತಿ ಕೋರಿದ್ದಾರೆ.

Yuvraj Formally Writes to BCCI Seeking Nod For Participation in Overseas T20 Leagues
ಯುವರಾಜ್ ಸಿಂಗ್


Shikhar Dhawan: ಶಿಖರ್ ಧವನ್ ವಿಶ್ವಕಪ್​ನಿಂದ ಹೊರಕ್ಕೆ; ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ!

ಈಗಾಗಲೇ ಐಪಿಎಲ್​ನಲ್ಲಿ ಆಡುವುದಿಲ್ಲ ಎಂದು ತಿಳಿಸಿರುವ ಯುವರಾಜ್, ನಿವೃತ್ತಿ ಬಳಿಕ ಕೆಲ ವರ್ಷಗಳ ಕಾಲ ಕ್ರಿಕೆಟ್​ನ ಖುಷಿಯನ್ನು ಅನುಭವಿಸಲು ಇಚ್ಛಿಸುತ್ತೇನೆ. ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕುರಿತು ಆಲೋಚಿಸಿ ಒತ್ತಡಕ್ಕೆ ಒಳಗಾಗಿದ್ದೇನೆ. ನನಗೀಗ ನೆಮ್ಮದಿ ಸಿಕ್ಕಿದೆ. ಹೀಗಾಗಿ ವಿದೇಶಿ ಟಿ-20 ಲೀಗ್ ಗಳಲ್ಲಿ ಭಾಗವಹಿಸುತ್ತೇನೆ ಎಂದಿದ್ದರು.
Loading...

ಈ ಹಿಂದೆ ವಿರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ನಿವೃತ್ತಿ ಪಡೆದು ಯುಎಇಯಲ್ಲಿ ನಡೆದ ಟಿ-10 ಲೀಗ್‍ನಲ್ಲಿ ಭಾಗವಹಿಸಲು ಬಿಸಿಸಿಐಯಿಂದ ಅವಕಾಶ ಪಡೆದಿದ್ದರು.

First published:June 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...