Sri Lanka Cricket: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಯುವ ಆಟಗಾರ ಅರೆಸ್ಟ್​

2018ರಲ್ಲಿ ಶ್ರೀಲಂಕಾ ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದ 25 ವರ್ಷದ ಯುವ ವೇಗಿ ಶೆಹಾನ್ ಸದ್ಯ ಹೆರಾಯಿನ್ ಸಮೇತ ಸಿಕ್ಕಿಬಿದ್ದಿದ್ದಾರೆ.

ಶೆಹಾನ್ ಮಧುಶಂಕ

ಶೆಹಾನ್ ಮಧುಶಂಕ

 • Share this:
  ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಯುವ ವೇಗದ ಬೌಲರ್‌ ಶೆಹಾನ್ ಮಧುಶಂಕ ಮಾದಕ ದ್ರವ್ಯ ಹೆರಾಯಿನ್‌ನೊಂದಿಗೆ ಸಿಕ್ಕಿ ಬೀಳುವ ಮೂಲಕ ಪೊಲೀಸರ ಅತಿಥಿಯಾಗಿದ್ದಾರೆ.

  ಶ್ರೀಲಂಕಾದ ಪನ್ನಾಲ ಪಟ್ಟಣದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದಾಗಲೇ ಮತ್ತೂಬ್ಬ ವ್ಯಕ್ತಿಯೊಂದಿಗೆ ಖಾಸಗಿ ವಾಹನದಲ್ಲಿ ಹೋಗಿದ್ದ ಮಧುಶಂಕ ಅವರನ್ನು ಪೊಲೀಸರು ತಡೆದಾಗ ಇದು ಬೆಳಕಿಗೆ ಬಂದಿದೆ. ಅವರ ಬಳಿ ಸುಮಾರು 2.5 ಗ್ರಾಮ್‌ಗಳಷ್ಟು ಹೆರಾಯಿನ್‌ ಇತ್ತು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

  ಐಪಿಎಲ್ ಪ್ರದರ್ಶನದ ಮೇಲೆ ನಾನು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುತ್ತೇನೆ

  2018ರಲ್ಲಿ ಶ್ರೀಲಂಕಾ ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದ 25 ವರ್ಷದ ಯುವ ವೇಗಿ ಶೆಹಾನ್ ಸದ್ಯ ಹೆರಾಯಿನ್ ಸಮೇತ ಸಿಕ್ಕಿಬಿದ್ದಿದ್ದಾರೆ. ಸದ್ಯ ಇವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, 2 ವಾರ ಪೊಲೀಸ್ ವಶಕ್ಕೆ ವಹಿಸಲಾಗಿದೆ.

  ಶೆಹಾನ್ 2018 ರಲ್ಲಿ ಲಂಕಾ ಪರ 2 ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಶ್ರೀಲಂಕಾದಲ್ಲಿ ಮಾರ್ಚ್‌ 20ರಿಂದ ಕರ್ಫ್ಯೂ ಜಾರಿಯಲ್ಲಿದ್ದು ಮಂಗಳವಾರ ನಿಯಮ ಸಡಿಲಗೊಳಿಸಲು ಅಲ್ಲಿನ ಸರಕಾರ ಆಲೋಚಿಸಿದೆ. ಇದಕ್ಕೂ ಮುನ್ನ ನಿಯಮ ಉಲ್ಲಂಘಿಸಿದ ಆಧಾರದ ಮೇರೆಗೆ 65 ಸಾವಿರ ಮಂದಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

  ಮೈದಾನಕ್ಕಿಳಿದು ಅಭ್ಯಾಸ ನಡೆಸಿದ ಟೀಂ ಇಂಡಿಯಾ ಆಟಗಾರನ ಮೇಲೆ ಬಿಸಿಸಿಐ ಗರಂ

  First published: