Shoaib Akhtar: ನೀವು ಹೆಸರಿಸಿದ್ದು IPL ಟೀಮ್: ICC ವಿರುದ್ಧ ಅಖ್ತರ್ ಕಿಡಿ..!

ಐಸಿಸಿ ದಶಕದ ಟಿ20 ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ-ವಿಕೆಟ್ ಕೀಪರ್), ರೋಹಿತ್ ಶರ್ಮಾ, ಕ್ರಿಸ್ ಗೇಲ್, ಆರೋನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಕೀರನ್ ಪೊಲಾರ್ಡ್, ರಶೀದ್ ಖಾನ್, ಜಸ್​ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ.

Shoaib Akhtar

Shoaib Akhtar

 • Share this:
  ಇಂಟರ್​ನ್ಯಾಷನ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾನುವಾರ ದಶಕದ ಕ್ರಿಕೆಟ್ ಪ್ರಶಸ್ತಿಗಳನ್ನು ಘೋಷಿಸಿದೆ. ಅಲ್ಲದೆ ದಶಕದ ಅತ್ಯುತ್ತಮ ಇಲೆವೆನ್​ಗಳನ್ನು ಪ್ರಕಟಿಸಿದೆ. ದಶಕದ ಏಕದಿನ ಹಾಗೂ ಟಿ20 ಕ್ರಿಕೆಟ್​ಗೆ ಮಹೇಂದ್ರ ಸಿಂಗ್ ಧೋನಿ ನಾಯಕರಾದರೆ, ದಶಕದ ಟೆಸ್ಟ್ ತಂಡದ ನಾಯಕನ ಸ್ಥಾನ ವಿರಾಟ್ ಕೊಹ್ಲಿ ಪಾಲಾಗಿದೆ. ಆದರೆ ಈ ಮೂರು ತಂಡಗಳಲ್ಲಿ ಪಾಕಿಸ್ತಾನದ ಯಾವುದೇ ಆಟಗಾರರು ಸ್ಥಾನ ಪಡೆದಿಲ್ಲ. ಹೀಗಾಗಿಯೇ ಇದೀಗ ರಾವಲ್ಪಿಂಡಿ ಎಕ್ಸ್​ಪ್ರೆಸ್ ಖ್ಯಾತಿ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಐಸಿಸಿ ವಿರುದ್ಧ ಕಿಡಿಕಾರಿದ್ದಾರೆ.

  ಐಸಿಸಿಯು ದಶಕದ ತಂಡವನ್ನು ಘೋಷಿಸುವಾಗ ಪಾಕ್ ಆಟಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಯಾವುದೇ ತಂಡದಲ್ಲೂ ಪಾಕ್ ಕ್ರಿಕೆಟಿಗರಿಗೆ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಟಿ20 ಕ್ರಿಕೆಟ್​ನಲ್ಲಿ ವರ್ಷಗಳ ಕಾಲ ಅಗ್ರಸ್ಥಾನ ಅಲಂಕರಿಸಿದ್ದ ಬಾಬರ್ ಅಜಂ ಅವರನ್ನು ಕಡೆಗಣಿಸಿರುವುದಕ್ಕೆ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದರು.

  ಐಸಿಸಿ ಪಾಕಿಸ್ತಾನದ ಒಬ್ಬನೇ ಒಬ್ಬ ಆಟಗಾರನನ್ನು ಆಯ್ಕೆ ಮಾಡಿಲ್ಲ. ನಮಗೆ ನಿಮ್ಮ ದಶಕ ಟಿ20 ತಂಡ ಎಂಬ ಬಿರುದು ಬೇಕಿಲ್ಲ. ಏಕೆಂದರೆ ನೀವು ಘೋಷಿಸಿರುವುದು ಐಪಿಎಲ್ ತಂಡವನ್ನು, ಇದು ವಿಶ್ವ ಕ್ರಿಕೆಟ್ ತಂಡವಲ್ಲ ಎಂದು ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಂಪೂರ್ಣ ವಾಣಿಜ್ಯಮಯವಾಗಿದೆ ಎಂದು ದೂರಿದ ಅಖ್ತರ್, ಬರೀ ದುಡ್ಡು, ಟಿವಿ ಹಕ್ಕು ಹಾಗೂ ಪ್ರಾಯೋಜಕತ್ವದ ಬಗ್ಗೆ ಮಾತ್ರ ಯೋಚಿಸುತ್ತಿದೆ ಎಂದರು.

  ಐಸಿಸಿ ಏಕದಿನ ಕ್ರಿಕೆಟ್​ನಲ್ಲಿ ಹೊಸ ಚೆಂಡು, ಮೂರು ಪವರ್‌ಪ್ಲೇಗಳನ್ನು ಪರಿಚಯಿಸಿತು. ಈಗ ಡೆನ್ನಿಸ್ ಲಿಲ್ಲಿ (ಆಸ್ಟ್ರೆಲಿಯಾ ಮಾಜಿ ಕ್ರಿಕೆಟಿಗ), ಜೆಫ್ ಥಾಮ್ಸನ್ (ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ), ವೆಸ್ಟ್ ಇಂಡೀಸ್‌ನ 5 ಪ್ರಮುಖ ಆಟಗಾರರು, ವಾಸಿಂ ಅಕ್ರಮ್ (ಪಾಕಿಸ್ತಾನ), ವಾಕರ್ ಯೂನಿಸ್ (ಪಾಕಿಸ್ತಾನ) ಇವರೆಲ್ಲಾ ಈಗ ಎಲ್ಲಿದ್ದಾರೆ?. ಇವರೆಲ್ಲರೂ ಐಸಿಸಿಯಿಂದ ದೂರ ಹೋಗಿದ್ದಾರೆ. ಇದಕ್ಕೆ ಕಾರಣ ಐಸಿಸಿ ವಾಣೀಜ್ಯೀಕರಣಗೊಳ್ಳುತ್ತಿರುವುದು ಎಂದು ಅಖ್ತರ್ ಆರೋಪಿಸಿದರು.

  ಐಸಿಸಿ ದಶಕದ ಟಿ20 ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ-ವಿಕೆಟ್ ಕೀಪರ್), ರೋಹಿತ್ ಶರ್ಮಾ, ಕ್ರಿಸ್ ಗೇಲ್, ಆರೋನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಕೀರನ್ ಪೊಲಾರ್ಡ್, ರಶೀದ್ ಖಾನ್, ಜಸ್​ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ.
  Published by:zahir
  First published: