ಭಾರತ-ಪಾಕಿಸ್ತಾನ ನಡುವೆ ಮತ್ತೆ ಕ್ರಿಕೆಟ್?; ಗಂಗೂಲಿ ಹೇಳಿದ್ದೇನು ಗೊತ್ತಾ..?

ಪಾಕಿಸ್ತಾನ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವ ತನಕ ಭಾರತ-ಪಾಕ್ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಈ ಹಿಂದೆ ಭಾರತ ಸರ್ಕಾರ ಹೇಳಿತ್ತು.

Vinay Bhat | news18-kannada
Updated:October 17, 2019, 12:58 PM IST
ಭಾರತ-ಪಾಕಿಸ್ತಾನ ನಡುವೆ ಮತ್ತೆ ಕ್ರಿಕೆಟ್?; ಗಂಗೂಲಿ ಹೇಳಿದ್ದೇನು ಗೊತ್ತಾ..?
ಸೌರವ್ ಗಂಗೂಲಿ ಮತ್ತು ನರೇಂದ್ರ ಮೋದಿ
  • Share this:
ಬೆಂಗಳೂರು (ಅ. 17): ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅಕ್ಟೋಬರ್ 23 ರಂದು ಬಿಸಿಸಿಐಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ನಡುವೆ ಭಾರತೀಯ ಕ್ರಿಕೆಟ್​ನಲ್ಲಿ ಗಂಗೂಲಿ ಮಹತ್ವದ ಬದಲಾವಣೆ ತರುವ ಯೋಜನೆ ಹಾಕಿಕೊಂಡಂತಿದೆ.

ಈಗಾಗಲೇ ಹೊನಲು-ಬೆಳಕು ಟೆಸ್ಟ್​ ಕ್ರಿಕೆಟ್​, ಧೋನಿ ಕ್ರಿಕೆಟ್ ವಿಚಾರ, ಭಾರತ ಮಹತ್ವದ ಟೂರ್ನಮೆಂಟ್ ಗೆಲ್ಲುವ ಬಗ್ಗೆ ಸೇರಿದಂತೆ ಸಾಕಷ್ಟು ವಿಷಯಗಳ ಕುರಿತು ಬಿಸಿಸಿಐ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವೆ ಮತ್ತೆ ಕ್ರಿಕೆಟ್ ಆರಂಭವಾಗುತ್ತಾ ಎಂಬ ಪ್ರಶ್ನೆಗೂ ಗಂಗೂಲಿ ಉತ್ತರಿಸಿದ್ದಾರೆ.

‘You have to ask Modi ji and Pakistan PM’: Sourav Ganguly on India-Pakistan cricketing ties
ಸೌರವ್ ಗಂಗೂಲಿ


49ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಅನಿಲ್ ಕುಂಬ್ಳೆ; ಜಂಬೋ ಫೋಟೋಗ್ರಫಿಯ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ!

ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ, ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಬಗೆಗಿನ ಪ್ರಶ್ನೆಗೆ ಹೇಳಿಕೆ ನೀಡಿದ ಗಂಗೂಲಿ, "ಈ ಪ್ರಶ್ನೆಯನ್ನು ನೀವು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಇಮ್ರಾನ್ ಖಾನ್ ಬಳಿ ಕೇಳಬೇಕು. ಅವರು ಒಪ್ಪಿಗೆ ಸೂಚಿಸಿದರೆ ಮಾತ್ರ ನಾವು ಕ್ರಿಕೆಟ್ ವಿಚಾರದಲ್ಲಿ ಮುಂದುವರೆಯಲು ಸಾಧ್ಯ. ಇದು ಸರ್ಕಾರಕ್ಕೆ ಬಿಟ್ಟ ವಿಚಾರ" ಎಂದು ಹೇಳಿದ್ದಾರೆ.

ಪಾಕಿಸ್ತಾನ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವ ತನಕ ಭಾರತ-ಪಾಕ್ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಈ ಹಿಂದೆ ಭಾರತ ಸರ್ಕಾರ ಹೇಳಿತ್ತು.

ಹೀಗಾಗಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ದ್ವಿಪಕ್ಷೀಯ ಕ್ರಿಕೆಟ್ ಬಾಂಧವ್ಯ ಕಡಿದು ಹೋಗಿ 15 ವರ್ಷಗಳೇ ಕಳೆದು ಹೋಗಿವೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಾಯೋಜಿತ ಕ್ರಿಕೆಟ್ ಟೂರ್ನಿಗಳಲ್ಲಷ್ಟೇ ಭಾರತ ತಂಡ ಪಾಕ್ ವಿರುದ್ಧ ಕ್ರಿಕೆಟ್ ಆಡುತ್ತಿದೆ.ಆರ್​ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ; ಹರಾಜಿಗೂ ಮುನ್ನ ಮೂರು ಸ್ಟಾರ್ ಆಟಗಾರರು ಹೊರಕ್ಕೆ?

ಭಾರತ ತಂಡ 2004 ರಲ್ಲಿ ಸೌರವ್ ಗಂಗೂಲಿ ನಾಯಕನಾಗಿರುವಾಗ ಪಾಕ್ ಪ್ರವಾಸ ಕೈಗೊಂಡಿದ್ದು ಕೊನೆ. ಅದಾದ ಬಳಿಕ ಟೀಂ ಇಂಡಿಯಾ ಪಾಕ್​ಗೆ ಕಾಲಿಟ್ಟಿಲ್ಲ. ಪಾಕಿಸ್ತಾನ ಕೊನೆಯದಾಗಿ 2005-06 ಸಾಲಿನಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು.

First published: October 17, 2019, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading