ಮಾರಕ ಕೊರೋನಾ ವೈರಸ್ ಕಾರಣದಿಂದ ಲಾಕ್ಡೌನ್ ಆದ ದಿನದಿಂದಲೂ ಆಸ್ಟ್ರೇಲಿಯಾದ ಹೊಡೆಬಡಿಯ ದಾಂಡಿಗ ಡೇವಿಡ್ ವಾರ್ನರ್, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ತಮಾಷೆಯ ವಿಡಿಯೋ ಫ್ಲ್ಯಾಟ್ಫಾರ್ಮ್ ಆಗಿರುವ ಟಿಕ್ಟಾಕ್ನಲ್ಲಿ ವಿಡಿಯೋ ಮಾಡುವುದರಲ್ಲಿ ತಲ್ಲೀನವಾಗಿದ್ದಾರೆ.
ವಾರ್ನರ್ ಅವರ ಈ ಪ್ರಯತ್ನಕ್ಕೆ ಪತ್ನಿ ಹಾಗೂ ಹಾಗೂ ಇಬ್ಬರು ಮಕ್ಕಳು ಸಾಥ್ ನೀಡಿದ್ದಾರೆ. ಅಲ್ಲದೆ ಈಗಾಗಲೇ ಹಲವಾರು ವಿಡಿಯೋಗಳನ್ನು ರಚಿಸಿದ್ದಾರೆ. ಅದು ವೈರಲ್ ಕೂಡ ಆಗಿದೆ. ಆದರೆ ವಾರ್ನರ್ ನಿರ್ಮಿಸುವ ವಿಡಿಯೋದಲ್ಲಿ ವಿಶೇಷತೆಯೊಂದಿದೆ. ಪ್ರತಿ ಬಾರಿಯೂ ಬಾಲಿವುಡ್ ಹಾಗೂ ಟಾಲಿವುಡ್ಗೆ ಸಂಬಂಧಪಟ್ಟ ಹಾಡುಗಳಲ್ಲೇ ಆಯ್ಕೆ ಮಾಡುತ್ತಾರೆ.
England vs West Indies: ತಂಡಕ್ಕೆ ಆಸರೆಯಾದ ಡೊಮಿನಿಕ್-ಸ್ಟೋಕ್ಸ್; ಉತ್ತಮ ಮೊತ್ತದತ್ತ ಇಂಗ್ಲೆಂಡ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ. ಈ ಮೂಲಕ ಭಾರತ ಹಾಗೂ ಹೈದರಾಬಾದ್ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದಾರೆ.
ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಅಕ್ಷಯ್ ಕುಮಾರ್ ನಟನೆಯ ಹೌಸ್ಫುಲ್ 4 ಚಿತ್ರದ ಅತ್ಯಂತ ಫೇಮಸ್ 'ಬಾಲ ಸೈತಾನ್ ಕ ಸಾಲಾ' ಹಾಡಿಗೆ ತಮ್ಮ ಇಬ್ಬರು ಮಕ್ಕಳು ಹೆಜ್ಜೆ ಹಾಕಿರೋದನ್ನ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಬ್ಬರೂ ಹಾಡಿಗೆ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಹಾಕಿ ಖುಷಿ ಪಟ್ಟಿದ್ದಾರೆ.
ಈ ಹಿಂದೆ ಕೂಡ ವಾರ್ನರ್ ಇದೇ ಹಾಡಿಗೆ ಹೆಜ್ಜೆಹಾಕಿದ್ದರು. ಆ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು. ಅಲ್ಲದೆ ಈ ವಿಡಿಯೋ ನೋಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನಗು ತಡೆಯಲಾರದೆ, ನಗೆಗಡಲಲ್ಲಿ ತೇಲಾಡುವ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದರು.
Vidya Srimurali: ಫೋಟೋಗಳಿಗೆ ಕೊಡುವ ಶೀರ್ಷಿಕೆಗೆ ಪೇಟೆಂಟ್ ಪಡಿತಾರಂತೆ ಶ್ರೀಮುರಳಿ ಮಡದಿ ವಿದ್ಯಾ..!
ಇದಕ್ಕೆ ಪ್ರತಿಕ್ರಿಯಿಸಿದ್ದ ವಾರ್ನರ್, ವಿರಾಟ್ ಕೊಹ್ಲಿ ಅವರಲ್ಲಿ ಟಿಕ್ಟಾಕ್ ಖಾತೆ ತೆರೆದು ಡ್ಯುಯೆಟ್ ಬರುವಂತೆ ಮನವಿ ಮಾಡಿದ್ದರು. ಇದಕ್ಕಾಗಿ ಪತ್ನಿ ಅನುಷ್ಕಾ ಶರ್ಮಾ ಸಹಾಯ ಪಡೆಯುವಂತೆ ಒತ್ತಾಯಿಸಿದ್ದರು.
ಡೇವಿಡ್ ವಾರ್ನರ್ ಈಗಾಗಲೇ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ. ವಾರ್ನರ್ ಈ ಪ್ರಯತ್ನಕ್ಕೆ ಪತ್ನಿ ಹಾಗೂ ಹಾಗೂ ಇಬ್ಬರು ಮಕ್ಕಳು ಸಾಥ್ ನೀಡಿದ್ದಾರೆ. ವಾರ್ನರ್ ಅಲ್ಲು ಅರ್ಜುನ್, ಜೂನಿಯರ್ ಎನ್ ಟಿಆರ್, ಪ್ರಭುದೇವ ಅವರ ಹಾಡುಗಳಿಗೆ ಈಗಾಗಲೇ ಟಿಕ್ ಟಾಕ್ ಮಾಡಿದ್ದಾರೆ. ಈ ವಿಡಿಯೋಗಳನ್ನು ನೋಡಿ ನೆಟ್ಟಿಗರು ಖುಷಿ ಪಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ