HOME » NEWS » Sports » CRICKET YOGRAJ SINGH REACTS AFTER BCCI DENIES YUVRAJ SINGH PERMISSION TO PLAY DOMESTIC CRICKET ZP

Yuvraj Singh: ಯುವರಾಜ್ ಸಿಂಗ್​ಗೆ ನೋ ಚಾನ್ಸ್: ಈ ಬಗ್ಗೆ ತಂದೆ ಯೋಗರಾಜ್ ಸಿಂಗ್ ಹೇಳಿದ್ದೇನು?

ಈ ಹಿಂದೆ ಕೂಡ ಐಪಿಎಲ್ ಆರಂಭಕ್ಕೂ ಮುನ್ನ ಯುವರಾಜ್ ಸಿಂಗ್ (Yuvraj Singh) ಯುವ ಆಟಗಾರರೊಂದಿಗೆ ಸಮಯ ಕಳೆದಿದ್ದರು. ಅವನನ್ನು ಯುವ ಆಟಗಾರರೊಂದಿಗೆ ಆಡಲು ಕೇಳಲಾಗಿತ್ತು. ಆದರೆ ನನಗೆ ತುಂಬಾ ವಯಸ್ಸಾಗಿದೆ ಎಂದು ಯುವಿ ತಿಳಿಸಿದ್ದ.

news18-kannada
Updated:January 1, 2021, 5:23 PM IST
Yuvraj Singh: ಯುವರಾಜ್ ಸಿಂಗ್​ಗೆ ನೋ ಚಾನ್ಸ್: ಈ ಬಗ್ಗೆ ತಂದೆ ಯೋಗರಾಜ್ ಸಿಂಗ್ ಹೇಳಿದ್ದೇನು?
Yograj Singh, Yuvraj Singh
  • Share this:
2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಟೀಮ್ ಇಂಡಿಯಾ ಆಲ್​ರೌಂಡರ್ ಯುವರಾಜ್ ಸಿಂಗ್ (Yuvraj Singh) ಇತ್ತೀಚೆಗಷ್ಟೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಂಬ್ಯಾಕ್ ಮಾಡಲು ಬಿಸಿಸಿಐಗೆ ಮನವಿ ಮಾಡಿದ್ದರು. ಆದರೆ, ಯುವಿ ಮನವಿಯನ್ನ ಬಿಸಿಸಿಐ (BCCI) ತಿರಸ್ಕರಿಸಿತ್ತು. ನಿವೃತ್ತಿ ಬಳಿಕ ವಿದೇಶಿ ಲೀಗ್​ನಲ್ಲಿ ಯುವರಾಜ್ ಸಿಂಗ್ ಕಾಣಿಸಿಕೊಂಡಿರುವುದೇ ಅವಕಾಶ ನೀಡದಿರಲು ಮುಖ್ಯ ಕಾರಣ ಎನ್ನಲಾಗಿದೆ.

ಏಕೆಂದರೆ ಬಿಸಿಸಿಐ ನಿಯಮದ ಪ್ರಕಾರ, ಭಾರತದ ಪರ ಅಥವಾ ಐಪಿಎಲ್​ನಲ್ಲಿ ಭಾಗವಹಿಸುವ ಯಾವುದೇ ಭಾರತೀಯ ಆಟಗಾರ ಬೇರೆ ಕ್ರಿಕೆಟ್ ಲೀಗ್​ನಲ್ಲಿ ಪಾಲ್ಗೊಳ್ಳುವಂತಿಲ್ಲ. ಒಂದು ವೇಳೆ ಭಾಗವಹಿಸಿದರೆ ಅವರನ್ನು ಭಾರತೀಯ ಕ್ರಿಕೆಟ್​ನಿಂದ ನಿಷೇಧಿಸಲಾಗುತ್ತದೆ. ಇದೇ ಕಾರಣದಿಂದ ಯುವಿಗೆ ಪಂಜಾಬ್ ಪರ ಮತ್ತೆ ಕಣಕ್ಕಿಳಿಯಲು ಅವಕಾಶ ನೀಡಿಲ್ಲ.

ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟ್ರೂರ್ನಿಗಾಗಿ ಪ್ರಕಟಿಸಿದ ಸಂಭವನೀಯ 30 ಆಟಗಾರರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅವರ ಹೆಸರು ಕಾಣಿಸಿಕೊಂಡಿತ್ತು. ಹೀಗಾಗಿ ಯುವಿ ದೇಶೀಯ ಕ್ರಿಕೆಟ್ ಮೂಲಕ ಐಪಿಎಲ್​ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ ಸಿಕ್ಸರ್ ಸಿಂಗ್​ ಪುನಾರಗಮನಕ್ಕೆ ಬಿಸಿಸಿಐ ಅವಕಾಶ ಕಲ್ಪಿಸಿಲ್ಲ. ಇದರೊಂದಿಗೆ ಯುವಿ ಕಂಬ್ಯಾಕ್​ಗೆ ಕೂಡ ತೆರೆ ಬಿದ್ದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್ (Yuvraj Singh) ಅವರ ತಂದೆ ಯೋಗರಾಜ್ ಸಿಂಗ್ ಬಿಸಿಸಿಐ (BCCI) ನಿರ್ಧಾರದ ಬಗ್ಗೆ ನಿಖರವಾದ ಕಾರಣ ನನಗೆ ತಿಳಿದಿಲ್ಲ. ಈ ಬಗ್ಗೆ ಯುವಿಯೊಂದಿಗೆ ಮಾತನಾಡುತ್ತೇನೆ. ಆದರೆ ನಿವೃತ್ತ ಆಟಗಾರರು ಯುವ ಆಟಗಾರರೊಂದಿಗೆ ಆಟವಾಡಲು ಸಾಕಷ್ಟು ಸಮಯವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ. ಯುವರಾಜ್‌ಗೆ ಆಡಲು ಅವಕಾಶ ನೀಡಿದರೆ ಯುವ ಆಟಗಾರರಿಗೆ ಹೆಚ್ಚಿನ ಲಾಭವಾಗಲಿದೆ ಎಂಬುದು ನನ್ನ ಅನಿಸಿಕೆ ಎಂದು ಯೋಗರಾಜ್ ಸಿಂಗ್ ಹೇಳಿದರು.

ಈ ಹಿಂದೆ ಕೂಡ ಐಪಿಎಲ್ ಆರಂಭಕ್ಕೂ ಮುನ್ನ ಯುವರಾಜ್ ಸಿಂಗ್ (Yuvraj Singh) ಯುವ ಆಟಗಾರರೊಂದಿಗೆ ಸಮಯ ಕಳೆದಿದ್ದರು. ಅವನನ್ನು ಯುವ ಆಟಗಾರರೊಂದಿಗೆ ಆಡಲು ಕೇಳಲಾಗಿತ್ತು. ಆದರೆ ನನಗೆ ತುಂಬಾ ವಯಸ್ಸಾಗಿದೆ ಎಂದು ಯುವಿ ತಿಳಿಸಿದ್ದ. ಆದರೆ ನಾನು ಒತ್ತಾಯಿಸಿದ ಮೇಲೆ ಆಡಿದರು. ಅವನು ನಾಲ್ಕೈದು ಇನಿಂಗ್ಸ್​ ಆಡಿ, ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಇದನ್ನು ನೋಡಿ ಯುವ ಆಟಗಾರರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು. ಏಕೆಂದರೆ ಇಂದಿಗೂ ಇಷ್ಟ ಚೆನ್ನಾಗಿ ಆಡುತ್ತಾರೆ ಎಂದು ಆಶ್ಚರ್ಯಚಕಿತರಾಗಿದ್ದರು. ಹೀಗಾಗಿ ಅನುಭವಿ ಆಟಗಾರರಿಗೆ ಆಡಲು ಅವಕಾಶ ನೀಡದರೆ ಅದು ಯುವ ಆಟಗಾರರಿಗೆ ಲಾಭವಾಗಲಿದೆ ಎಂದು ಯೋಗರಾಜ್ ಸಿಂಗ್ ತಿಳಿಸಿದರು.
Published by: zahir
First published: January 1, 2021, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories