INDU19 vs SAU19: ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಜೈಸ್ವಾಲ್; ಸರಣಿ ಭಾರತದ ಪಾಲು

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್

8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಭಾರತೀಯ ಕಿರಿಯರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿ ವಶಪಡಿಸಿಕೊಂಡಿದೆ. ಅಮೋಘ ಆಟ ಪ್ರದರ್ಶಿಸಿದ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

  • Share this:

ಈಸ್ಟ್​ ಲಂಡನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಅಂಡರ್-19 ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೆ ಏಕದಿನ ಸರಣಿ ವಶಪಡಿಸಿಕೊಂಡಿದೆ.

ನಿನ್ನೆ ಇಲ್ಲಿನ ಬಫೆಲೊ ಪಾರ್ಕ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ಆಲ್ರೌಂಡರ್ ಪ್ರದರ್ಶನದಿಂದ ಭಾರತ ಅಂಡರ್-19 ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ದ. ಆಫ್ರಿಕಾ ಅಂಡರ್-19 ತಂಡ 29.5 ಓವರ್​​ನಲ್ಲಿ ಕೇವಲ 119 ರನ್​ಗೆ ಆಲೌಟ್ ಆಯಿತು. ತಂಡದ ಪರ ಜೊನಥನ್ ಬಿರ್ಡ್​ 25 ಹಾಗೂ ಆ್ಯಂಡ್ರೊ ಲೌ 24 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ 20ರ ಗಡಿ ದಾಟಲಿಲ್ಲ.

Ranji Trophy: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ- ಹಿ. ಪ್ರದೇಶ ರಣಜಿ ಪಂದ್ಯ

ಜೈಸ್ವಾಲ್ ಕೇವಲ 3.5 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಆಕಾಶ್ ಸಿಂಗ್, ಅಥರ್ವ ಹಾಗೂ ರವಿ ಬಿಶೋನಿ ತಲಾ 2 ವಿಕೆಟ್ ಪಡೆದರು.

 ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 16.2 ಓವರ್​ನಲ್ಲೇ 2 ವಿಕೆಟ್ ನಷ್ಟಕ್ಕೆ 120 ರನ್ ಬಾರಿಸಿ ಅಮೋಘ ಜಯ ಸಾಧಿಸಿತು. ಹುಟ್ಟು ಹಬ್ಬದ ದಿನ ಬ್ಯಾಟಿಂಗ್​ನಲ್ಲೂ ಮಿಂಚಿದ ಜೈಸ್ವಾಲ್ ಕೇವಲ 56 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 89 ರನ್ ಚಚ್ಚಿದರು.

Mary Kom: ಜರೀನ್ ವಿರುದ್ಧ ಗೆದ್ದು ಒಲಿಂಪಿಕ್ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದ ಮೇರಿ ಕೋಮ್!

8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಭಾರತೀಯ ಕಿರಿಯರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿ ವಶಪಡಿಸಿಕೊಂಡಿದೆ. ಅಮೋಘ ಆಟ ಪ್ರದರ್ಶಿಸಿದ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

Published by:Vinay Bhat
First published: