ವಿರಾಟ್‌ ಕೊಹ್ಲಿಗೆ ಸಲಹೆ ನೀಡಿದ ಮಾಜಿ ಆಟಗಾರ ಡಬ್ಲ್ಯು.ವಿ ರಾಮನ್; ಏನದು?

Virat Kohli: ಭಾರತದ ಮಾಜಿ ಆಟಗಾರ ಮತ್ತು ಈಗ ವೀಕ್ಷಕ ವಿವರಣೆಗಾರರಾದ ಡಬ್ಲ್ಯು.ವಿ.ರಾಮನ್ (W.V Raman) ಕೊಹ್ಲಿಗೆ ಸಲಹೆಯೊಂದನ್ನು ನೀಡಿದ್ದಾರೆ. ಕೊಹ್ಲಿ ತಮ್ಮ ತಂಡವನ್ನು ಒಬ್ಬ ನಾಯಕನ ದೃಷಿಕೋನದಿಂದ ಮುನ್ನಡೆಸುವುದನ್ನು ಸ್ವಲ್ಪ ಪಕ್ಕಕ್ಕೆ ಇರಿಸಿ, ಇತರೆ ಆಟಗಾರರನ್ನು ಹುರಿದುಂಬಿಸಬೇಕು ಎಂದು ರಾಮನ್ ಹೇಳಿದ್ದಾರೆ.

virat kohli

virat kohli

  • Share this:

ಪ್ರಸ್ತುತ ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ (Test match) ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಆಟದ ಲಯವನ್ನು ಕಂಡುಕೊಳ್ಳುವಲ್ಲಿ ಪರದಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದು ಅವರ ಮತ್ತು ಇಡೀ ತಂಡದ ಪ್ರದರ್ಶನದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗಲಾರದು. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮವಾಗಿ ಆಡಿ ಹೆಚ್ಚು ರನ್ ಗಳಿಸಿದಂತಹ ವಿರಾಟ್ ಈ ಸರಣಿಯಲ್ಲಿ ಯಾಕೋ ರನ್ ಗಳಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಅವರು ಗಳಿಸಿದಂತಹ ರನ್‌ಗಳಿಂದ ನಾವು ಅರಿತುಕೊಳ್ಳಬಹುದಾಗಿದೆ. ವಿರಾಟ್ ಪ್ರಸ್ತುತ ಸರಣಿಯಲ್ಲಿ ಐದು ಇನ್ನಿಂಗ್ಸ್‌ಗಳನ್ನು ಆಡಿ ಕೇವಲ 124 ರನ್‌ಗಳನ್ನು ಗಳಿಸಿದ್ದು, ಇದರಲ್ಲಿ ಒಂದು ಅರ್ಧಶತಕವಿದೆ.ಈಗಾಗಲೇ ವಿರಾಟ್ ಆಡಿದಂತಹ 50ಕ್ಕೂ ಹೆಚ್ಚು ಇನ್ನಿಂಗ್ಸ್‌ನಲ್ಲಿ ಒಂದು ಶತಕ ಬಾರದಿರುವುದು ಇವರು ರನ್ ಗಳಿಸಲು ಪರದಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.


ಭಾರತದ ಮಾಜಿ ಆಟಗಾರ ಮತ್ತು ಈಗ ವೀಕ್ಷಕ ವಿವರಣೆಗಾರರಾದ ಡಬ್ಲ್ಯು.ವಿ.ರಾಮನ್ (W.V Raman) ಕೊಹ್ಲಿಗೆ ಸಲಹೆಯೊಂದನ್ನು ನೀಡಿದ್ದಾರೆ. ಕೊಹ್ಲಿ ತಮ್ಮ ತಂಡವನ್ನು ಒಬ್ಬ ನಾಯಕನ ದೃಷಿಕೋನದಿಂದ ಮುನ್ನಡೆಸುವುದನ್ನು ಸ್ವಲ್ಪ ಪಕ್ಕಕ್ಕೆ ಇರಿಸಿ, ಇತರೆ ಆಟಗಾರರನ್ನು ಹುರಿದುಂಬಿಸಬೇಕು ಎಂದು ರಾಮನ್ ಹೇಳಿದ್ದಾರೆ.


"ವಿರಾಟ್ ಮೇಲೆ ನಾಯಕತ್ವದ ಮತ್ತು ಒಬ್ಬ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುವ ಒತ್ತಡವಿದೆ, ಹಾಗಾಗಿ ಅವರ ಆಟದ ಮತ್ತು ನಾಯಕತ್ವದ ಮೇಲೆ ನಾವು ಸಾಕಷ್ಟು ಗಮನ ಹರಿಸುತ್ತೇವೆ. ಇದನ್ನು ಅವರ ತಪ್ಪು ಎಂದೂ ಹೇಳಲು ಆಗುವುದಿಲ್ಲ. ಅವರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಅವರಿಂದ ಬಹಳಷ್ಟು ನಿರೀಕ್ಷಿಸುತ್ತೇವೆ. ಸಚಿನ್ ತೆಂಡೂಲ್ಕರ್ (sachin Tendulkar) ಆಡುತ್ತಿದ್ದಾಗಲೂ ಇದೇ ತರಹದ ನಿರೀಕ್ಷೆಗಳಿದ್ದವು" ಎಂದು ಟಿವಿ ಮಾಧ್ಯಮ ಏರ್ಪಡಿಸಿದ ಸಂವಾದದಲ್ಲಿ ರಾಮನ್ ಹೇಳಿದ್ದಾರೆ.


"ನಾನು ವಿರಾಟ್ ತರಬೇತುದಾರನಾಗಿದ್ದರೆ "ವಿರಾಟ್, ನೀವು ತಂಡವನ್ನು ನಾಯಕತ್ವದ ದೃಷ್ಟಿಕೋನದಿಂದ ಮುನ್ನಡೆಸುವುದನ್ನು ಬಿಟ್ಟು ಇತರೆ ಆಟಗಾರರು ಹೇಗೆ ಆಡುತ್ತಾರೆಯೋ ಹಾಗೆ ಆಡಲು ಹುರಿದುಂಬಿಸಿ” ಎಂದು ಹೇಳುತ್ತಿದ್ದೆ.


“ನೀವು ಯಾವುದೇ ಸಮಯದಲ್ಲಿಯೂ ನಿಮ್ಮ ಅತ್ಯುತ್ತಮ ಆಟದ ಲಯಕ್ಕೆ ಮರಳುವಿರಿ ಎಂದು ನನಗೆ ನಂಬಿಕೆ ಇದೆ, ಅವರು ಆಡಿದ ಹಿಂದಿನ ಇನ್ನಿಂಗ್ಸ್‌ನಲ್ಲಿ ತಮ್ಮ ಹಳೆಯ ಆಟಕ್ಕೆ ಮರಳುತ್ತಿರುವ ಸೂಚನೆ ನೀಡಿದ್ದಾರೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನನಗೆ ನಂಬಿಕೆಯಿದೆ” ಎಂದು ರಾಮನ್ ಹೇಳಿದ್ದಾರೆ.


ಇಲ್ಲಿ ರಾಮನ್ ವಿರಾಟ್ ಬಗ್ಗೆ ಅಲ್ಲದೆ 5 ಇನ್ನಿಂಗ್ಸ್‌ನಲ್ಲಿ ಕೇವಲ 95 ರನ್ ಗಳಿಸಿದ ಅಜಿಂಕ್ಯ ರಹಾನೆ ಬಗ್ಗೆಯೂ ಮಾತನಾಡಿ “ರಹಾನೆ ಒಬ್ಬ ಅನುಭವಿ ಆಟಗಾರ. ತುಂಬಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು, ವಿದೇಶದಲ್ಲಿ ಹೆಚ್ಚು ರನ್ ಸಹ ಗಳಿಸಿದ್ದಾರೆ. ಆದ್ದರಿಂದ ಅವರು ಯಶಸ್ವಿಯಾಗಲು ಒಂದು ವಿಧಾನವನ್ನು ಕಂಡುಕೊಳ್ಳಬೇಕಿದೆ ಅಷ್ಟೇ" ಎಂದು ಹೇಳಿದ್ದಾರೆ.


Published by:Sharath Sharma Kalagaru
First published: