• Home
 • »
 • News
 • »
 • sports
 • »
 • WTC Final: IPL ನಾಯಕರುಗಳಿಗೆ ತಮ್ಮದೇ ಆಟಗಾರರಿಂದ ಸವಾಲು..!

WTC Final: IPL ನಾಯಕರುಗಳಿಗೆ ತಮ್ಮದೇ ಆಟಗಾರರಿಂದ ಸವಾಲು..!

WTC Final

WTC Final

ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

 • Share this:

  ಬಹು ನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವು ಇದೀಗ ವಿರಾಟ್ ಕೊಹ್ಲಿ-ಕೈಲ್ ಜೇಮಿಸನ್ ಹಾಗೂ ರೋಹಿತ್‌ ಶರ್ಮ-ಟ್ರೆಂಟ್‌ ಬೌಲ್ಟ್ ನಡುವಿನ ಹಣಾಹಣಿಯಾಗಿ ಮಾರ್ಪಟ್ಟಿದೆ. ಏಕೆಂದರೆ ಐಪಿಎಲ್​ನಲ್ಲಿ ಜೇಮಿಸನ್ ಆರ್​ಸಿಬಿ ತಂಡದಲ್ಲಿ​ ಕೊಹ್ಲಿ ನಾಯಕತ್ವದಲ್ಲಿ ಆಡಿದರೆ, ಬೋಲ್ಟ್ ರೋಹಿತ್ ಶರ್ಮಾ ಮುನ್ನಡೆಸುವ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ. ಹೀಗಾಗಿ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿಗಳು ಐಪಿಎಲ್​ನ ತಮ್ಮ ನಾಯಕರ ವಿರುದ್ಧವೇ ರಣತಂತ್ರ ರೂಪಿಸಲಿದ್ದಾರೆ.


  ಈ ಇಬ್ಬರು ಬೌಲರುಗಳು ಐಪಿಎಲ್​ನಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಭಾರತದ ಈ ಇಬ್ಬರನ್ನು ಸ್ಟಾರ್ ಬ್ಯಾಟ್ಸ್​ಮನ್​ಗಳನ್ನು ಫೈನಲ್​ನಲ್ಲಿ ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ ಕಿವೀಸ್ ವೇಗಿಗಳು. ಅದರಲ್ಲೂ ಮುಖ್ಯವಾಗಿ ಬೋಲ್ಟ್ ಐಪಿಎಲ್ ಅಭ್ಯಾಸದ ವೇಳೆ ರೋಹಿತ್ ಶರ್ಮಾರನ್ನು ಕಾಡಿದ್ದು, ಇದೇ ರೀತಿಯಲ್ಲಿ ಟೆಸ್ಟ್ ಫೈನಲ್​ನಲ್ಲಿ ನಿಮ್ಮನ್ನು ಕಾಡುತ್ತೇನೆ ಎಂಬ ಸೂಚನೆಯನ್ನೂ ಕೂಡ ನೀಡಿದ್ದರು.


  ಹಾಗೆಯೇ ಕೊಹ್ಲಿ ಕೈಲ್ ಜೇಮಿಸನ್ ಅವರೊಂದಿಗೆ ಡ್ಯೂಕ್ ಬಾಲ್​ನಲ್ಲಿ ಚೆಂಡೆಸೆಯುವಂತೆ ಕೇಳಿಕೊಂಡಿದ್ದರು. ಆದರೆ ಡ್ಯೂಕ್ ಬಾಲ್​ನಲ್ಲಿ ಫೈನಲ್​ ಪಂದ್ಯವಾಡುವ ಕಾರಣ ಜೇಮಿಸನ್ ಅಭ್ಯಾಸದ ವೇಳೆ ಆ ಬಾಲ್​ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ನ್ಯೂಜಿಲೆಂಡ್​ನ ಈ ಇಬ್ಬರು ವೇಗಿಗಳು ಐಪಿಎಲ್​ ವೇಳೆಯೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದರು. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಬೋಲ್ಟ್, ಜೇಮಿಸನ್ ಜೋಡಿ ದೊಡ್ಡ ಸವಾಲು ಒಡ್ಡಬಹುದು.


  ಒಟ್ಟಿನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ನಾಯಕನನ್ನು ಆರ್​ಸಿಬಿ ಬೌಲರ್ ಔಟ್ ಮಾಡಲಿದ್ದಾರಾ ಹಾಗೆಯೇ ಮುಂಬೈ ನಾಯಕನನ್ನು ಬೋಲ್ಟ್ ಔಟ್ ಮಾಡ್ತಾರಾ ಕಾದು ನೋಡಬೇಕಿದೆ.


  ಉಭಯ ತಂಡಗಳು ಹೀಗಿವೆ:-
  ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್


  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

  Published by:zahir
  First published: