• Home
  • »
  • News
  • »
  • sports
  • »
  • WTC Final: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್ ಇಂಡಿಯಾ..!

WTC Final: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್ ಇಂಡಿಯಾ..!

ಟೀಮ್ ಇಂಡಿಯಾ

ಟೀಮ್ ಇಂಡಿಯಾ

ಮಿಲ್ಖಾ ಸಿಂಗ್ ಅವರು ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 4 ಚಿನ್ನದ ಪದಕಗಳನ್ನು ಗೆದ್ದುಕೊಟ್ಟು ದೇಶದ ಹಿರಿಮೆಯನ್ನು ಹೆಚ್ಚಿಸಿದ್ದರು. ಅಲ್ಲದೆ 1960ರಲ್ಲಿ ರೋಮ್ ಒಲಿಂಪಿಕ್ಸ್​ನಲ್ಲಿ 400 ಮೀಟರ್ಸ್ ಓಟದಲ್ಲಿ 4ನೇ ಸ್ಥಾನಗಳಿಸಿದ್ದರು.

  • Share this:

    ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಶುರುವಾಗಿದೆ. ಇಂಗ್ಲೆಂಡ್​ನ ಸೌಥಂಪ್ಟನ್​ನಲ್ಲಿ ನಡೆಯುತ್ತಿರುವ ಈ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಭಾರತದ ಖ್ಯಾತ ಅಥ್ಲೀಟ್ ಮಿಲ್ಖಾ ಸಿಂಗ್ ಅವರಿಗೆ ಗೌರವ ಸೂಚಿಸಿ, ಟೀಮ್ ಇಂಡಿಯಾ ಆಟಗಾರರು ಎಡಗೈ ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದಾರೆ.


    91 ವರ್ಷ ವಯಸ್ಸಾಗಿದ್ದ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಚಂಡೀಗಢದ ಆಸ್ಪತ್ರೆಯಲ್ಲಿ ಕೋವಿಡ್‌-19ನಿಂದಾಗಿ ಶುಕ್ರವಾರ ಕೊನೆಯುಸಿರೆಳೆದಿದ್ದರು. ಇವರ ಈ ನಿಧನಕ್ಕೆ ಸಂತಾಪ ಸೂಚಿಸಿ ಟೀಮ್ ಇಂಡಿಯಾ ಭಾರತೀಯ ಮಹಿಳಾ ಮತ್ತು ಪುರುಷರ ತಂಡ ಕೂಡ ಕಪ್ಪು ಪಟ್ಟಿ ಧರಿಸಿ ಇಂದು ಪಂದ್ಯವನ್ನಾಡಿದರು.


    ಮಿಲ್ಖಾ ಸಿಂಗ್ ಅವರು ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 4 ಚಿನ್ನದ ಪದಕಗಳನ್ನು ಗೆದ್ದುಕೊಟ್ಟು ದೇಶದ ಹಿರಿಮೆಯನ್ನು ಹೆಚ್ಚಿಸಿದ್ದರು. ಅಲ್ಲದೆ 1960ರಲ್ಲಿ ರೋಮ್ ಒಲಿಂಪಿಕ್ಸ್​ನಲ್ಲಿ 400 ಮೀಟರ್ಸ್ ಓಟದಲ್ಲಿ 4ನೇ ಸ್ಥಾನಗಳಿಸಿದ್ದರು. 1956 ಮತ್ತು 1964ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1958ರ ಕಾಮೆನ್ವೆಲ್ತ್ ಗೇಮ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು.


    ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಅಪಾರ ಕನಸು ಕಂಡಿದ್ದ ಮಿಲ್ಖಾ ಸಿಂಗ್, 1960ರಲ್ಲಿ ರೋಮ್ ಒಲಿಂಪಿಕ್ಸ್ ಭಾಗವಹಿಸಿ ಫೈನಲ್ ತಲುಪಿದ್ದರು. ಆದರೆ ಕೊನೆಯ ವೇಳೆಗೆ ಪದಕ ಕೈ ತಪ್ಪಿ ಹೋಯಿತು. ಅದರೊಂದಿಗೆ ಮಿಲ್ಖಾ ಸಿಂಗ್ ಅವರ ಕೊನೆಯ ಆಸೆ ಕೂಡ ಕೊನೆಗೊಂಡಿತು ಎನ್ನಬಹುದು.


    ಅಂದಹಾಗೆ ಮಿಲ್ಖಾ ಸಿಂಗ್ ಜೀವನಾಧಾರಿತ ಸಿನಿಮಾ ಕೂಡ ಬಂದಿದ್ದು, ಅವರ ಜೀವನ ಹೇಗಿತ್ತು ಹಾಗೆಯೇ ಅವರ ಸಾಧನೆಗಳೇನು ಎಂಬುದನ್ನು ತಿಳಿಯಲು ಭಾಗ್ ಮಿಲ್ಖಾ ಭಾಗ್ ಹಿಂದಿ ಸಿನಿಮಾ ನೋಡಬಹುದು.

    Published by:zahir
    First published: