• Home
 • »
 • News
 • »
 • sports
 • »
 • WTC Final India vs New Zealand: ನ್ಯೂಜಿಲೆಂಡ್ ಆಟಗಾರರಿಗೆ ನಿಂದನೆ: ಇಬ್ಬರು ಹೊರಕ್ಕೆ..!

WTC Final India vs New Zealand: ನ್ಯೂಜಿಲೆಂಡ್ ಆಟಗಾರರಿಗೆ ನಿಂದನೆ: ಇಬ್ಬರು ಹೊರಕ್ಕೆ..!

new zealand

new zealand

ಮೀಸಲು ದಿನದಾಟದಲ್ಲಿ ಯಾವುದೇ ಫಲಿತಾಂಶ ಬರದಿದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ. ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.

 • Share this:

  ಇಂಗ್ಲೆಂಡ್​ನ ಸೌತಂಪ್ಟನ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ವೇಳೆ ನ್ಯೂಜಿಲೆಂಡ್ ಆಟಗಾರರನ್ನು ನಿಂದಿಸಿದ ಇಬ್ಬರು ಪ್ರೇಕ್ಷಕರನ್ನು ಮೈದಾನದಿಂದ ಹೊರಗೆ ಕಳುಹಿಸಿರುವ ಘಟನೆ ನಡೆದಿದೆ. ಈ ಘಟನೆಯು ಐದನೇ ದಿನ ನಡೆದಿದ್ದು, ಬೌಂಡರಿ ಲೈನ್​ನಲ್ಲಿದ್ದ ಫೀಲ್ಡರ್​ನ್ನು ಇಬ್ಬರು ಪ್ರೇಕ್ಷಕರು ನಿಂದಿಸಿದ್ದರು.


  ನಿಂದಿಸಿದವರು ಭಾರತ ತಂಡದ ಅಭಿಮಾನಿಗಳು ಎನ್ನಲಾಗಿದ್ದು, ವಿರಾಟ್ ಕೊಹ್ಲಿಯನ್ನು ಹೊಗಳುವ ಭರದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ನ್ಯೂಜಿಲೆಂಡ್ ಆಟಗಾರರನ್ನು ಗುರಿಯಾಗಿಸಿಕೊಂಡಿದ್ದರು. ಈ ಕುರಿತಂತೆ ಕಿವೀಸ್ ಆಟಗಾರರು ಅಂಪೈರ್​ಗಳಿಗೆ ಮಾಹಿತಿ ನೀಡಿದರು. ಅಂಪೈರ್ ಸೂಚನೆಯಂತೆ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿದರು.


  ಈ ಬಗ್ಗೆ ಅಂಪೈರ್​ಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ವರದಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಸಿ ಕ್ರಿಕೆಟ್ ವೇಳೆ ಅನುಚಿತ ವರ್ತನೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ. ನಮ್ಮ ಭದ್ರತಾ ತಂಡವು ಅಪರಾಧಿಗಳನ್ನು ಗುರುತಿಸಲು ಸಾಧ್ಯವಾಗಿದ್ದು, ಅವರನ್ನು ಸ್ಟೇಡಿಯಂನಿಂದ ಹೊರಹಾಕಲಾಗಿದೆ. ಈ ಮೂಲಕ ಎಂದಿಗೂ ನಿಂದನೀಯ ನಡವಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಸಾರಿದೆ ಎಂದು ತಿಳಿಸಿದೆ.


  ಈ ಕುರಿತಂತೆ ಮಾತನಾಡಿರುವ ನ್ಯೂಜಿಲೆಂಡ್ ಆಟಗಾರರ ಟಿಮ್ ಸೌಥಿ, ಇದೇ ಮೊದಲ ಬಾರಿಗೆ ನಾನು ಇಂತಹ ನಡುವಳಿಕೆ ಬಗ್ಗೆ ಕೇಳುತ್ತಿದ್ದೇನೆ. ನಾವು ಮೈದಾನದಲ್ಲಿ ಉತ್ತಮ ಮನೋಭಾವದಿಂದ ಆಡುತ್ತಿರುತ್ತೇವೆ. ಮೈದಾನದ ಹೊರಗೆ ಏನಾಗುತ್ತಿದೆ ಎಂಬುದೇ ತಿಳಿಸಿದರು.


  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 217 ರನ್​ ಕಲೆಹಾಕಿದರೆ, ನ್ಯೂಜಿಲೆಂಡ್ 249 ರನ್​ ಬಾರಿಸಿ 32 ರನ್​ಗಳ ಮುನ್ನಡೆ ಪಡೆದಿದೆ. ಪ್ರಸ್ತುತ ಮಾಹಿತಿ ಪ್ರಕಾರ ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 130 ರನ್​ಗಳಿಸಿದೆ. ಇನ್ನು 43 ಓವರ್​ಗಳ ಆಟ ಮಾತ್ರ ಉಳಿದಿದ್ದು, ಹೀಗಾಗಿ ಈ ಪಂದ್ಯವು ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳಲಿದೆ.


  ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಡ್ರಾನಲ್ಲಿ ಅಂತ್ಯವಾದರೆ ಯಾರು ಚಾಂಪಿಯನ್..?


  ಮೀಸಲು ದಿನದಾಟದಲ್ಲಿ ಯಾವುದೇ ಫಲಿತಾಂಶ ಬರದಿದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ. ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಭಾರತ-ನ್ಯೂಜಿಲೆಂಡ್ ಚೊಚ್ಚಲ ಟೆಸ್ಟ್ ಕಿರೀಟವನ್ನು ಜೊತೆಯಾಗಿ ಹಂಚಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

  Published by:zahir
  First published: