• Home
  • »
  • News
  • »
  • sports
  • »
  • WTC Final: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ 4ನೇ ದಿನ ಮಳೆಯಾಟ ಸಾಧ್ಯತೆ..!

WTC Final: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ 4ನೇ ದಿನ ಮಳೆಯಾಟ ಸಾಧ್ಯತೆ..!

WTC Final

WTC Final

5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇನ್ನು ಫೈನಲ್ ಪಂದ್ಯದ ವೇಳೆ ಮೂರನೇ ಅಂಪೈರ್ ಆನ್-ಫೀಲ್ಡ್ ಅಂಪೈರ್ ಕರೆಯನ್ನು ಪರಿಶೀಲಿಸಬಹುದು ಮತ್ತು ಅವರೊಂದಿಗೆ ಮಾತನಾಡುವ ಮೂಲಕ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಐಸಿಸಿ ತಿಳಿಸಿದೆ.

ಮುಂದೆ ಓದಿ ...
  • Share this:

    ಇಂಗ್ಲೆಂಡ್​ನ ಸೌತಂಪ್ಟನ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಮತ್ತೆ ಮಳೆಯ ಆತಂಕ ಎದುರಾಗಿದೆ. ಜೂ.18 ರಂದು ಆರಂಭವಾಗಬೇಕಿದ್ದ ಪಂದ್ಯವು ಮಳೆಯ ಕಾರಣ ಜೂ. 19 ರಂದು ಶುರುವಾಗಿತ್ತು. ಆ ಬಳಿಕ ಎರಡು ದಿನದಾಟಗಳನ್ನು ಮುಗಿಸಲಾಗಿತ್ತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾವನ್ನು 217 ರನ್​ಗಳಿಗೆ ಆಲೌಟ್ ಮಾಡಿತ್ತು. ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿ 2 ವಿಕೆಟ್ ನಷ್ಟಕ್ಕೆ ನ್ಯೂಜಿಲೆಂಡ್ 101 ರನ್ ಕಲೆಹಾಕಿತ್ತು.


    ಇದೀಗ ಮತ್ತೆ ನಾಲ್ಕನೇ ದಿನದಾಟವು ಸಂಪೂರ್ಣ ಮಳೆಗೆ ಆಹುತಿಯಾಗುವ ಭೀತಿ ಎದುರುರಾಗಿದೆ. ಸೌತಂಪ್ಟನ್ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ
    ಸೋಮವಾರ ಕೂಡ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಭಾನುವಾರ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಹೀಗಾಗಿ ಔಟ್​ಫೀಲ್ಡ್ ಸಂಪೂರ್ಣ ನೀರಿನಿಂದ ಕೂಡಿದೆ. ಮಳೆ ನೀರನ್ನು ತೆರವುಗೊಳಿಸಿ ಇಂದು ಪಂದ್ಯವನ್ನು ಆರಂಭಿಸಿದರೂ, ಮತ್ತೆ ಮಳೆಯಾಗುವ ಸಾಧ್ಯತೆ ಹೆಚ್ಚು.


    ಏಕೆಂದರೆ ಮೈದಾನದ ಸುತ್ತ ಮುತ್ತಲಿನ ಭಾಗದಲ್ಲಿ ಕಾರ್ಮೋಡ ಆವರಿಸಿದ್ದು, ಒಂದು ವೇಳೆ ಮಳೆಯಾಗದಿದ್ದರೂ ಮಂದ ಬೆಳಕಿನ ಕಾರಣ ಇಡೀ ದಿನ ಪಂದ್ಯವನ್ನು ನಡೆಸುವುದು ಕಷ್ಟಸಾಧ್ಯ ಎನ್ನಲಾಗಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಮಳೆಯು ನಿರ್ಣಾಯಕ ಪಾತ್ರವಹಿಸಲಿದೆ.


    ಇದಾಗ್ಯೂ ಈ ಪಂದ್ಯದ ಬಾಕಿ ಇರುವ ಓವರ್​ಗಳನ್ನು ಮೀಸಲು ದಿನದಲ್ಲಿ ಆಡಿಸಲಾಗುವುದು ಎಂದು ಈಗಾಗಲೇ ಐಸಿಸಿ ಸ್ಪಷ್ಟಪಡಿಸಿದೆ. ಆದರೆ ಈಗಾಗಲೇ ಮೊದಲ ದಿನದಾಟ ಮಳೆಗೆ ಆಹುತಿಯಾಗಿದ್ದು, ನಾಲ್ಕನೇ ದಿನ ಕೂಡ ಮಳೆಯಿಂದ ರದ್ದಾರೆ ಮೀಸಲು ದಿನದಲ್ಲಿ ಸಂಪೂರ್ಣ ಪಂದ್ಯವನ್ನು ಪೂರ್ಣಗೊಳಿಸಲಾಗುವುದಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಆತಂಕ ಎದುರಾಗಿದೆ.



    ಫೈನಲ್​ ಪಂದ್ಯವು ಮಳೆಗೆ ಆಹುತಿಯಾದರೆ ಮುಂದೇನು?


    ಒಂದು ವೇಳೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೆ , ಡ್ರಾ ಅಥವಾ ಟೈನಲ್ಲಿ ಕೊನೆಗೊಂಡರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಿದ್ದಾರೆ ಎಂದು ಪ್ರಶ್ನೆ ಎಲ್ಲರಲ್ಲಿದೆ. ಈ ಎಲ್ಲಾ ಪರಿಸ್ಥಿತಿಯನ್ನು ಮನಗಂಡಿರುವ ಐಸಿಸಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಫೈನಲ್ ಪಂದ್ಯವು ಡ್ರಾ ಅಥವಾ ಟೈ ಆದರೆ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿ ಟ್ರೋಫಿ ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.


    ಅಷ್ಟೇ ಅಲ್ಲದೆ ಡ್ರಾ ಫಲಿತಾಂಶವನ್ನು ತಪ್ಪಿಸಲು ಮೀಸಲು ದಿನವನ್ನು ಕೂಡ ನೀಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣದಿಂದ ಪಂದ್ಯವು ಸ್ಥಗಿತಗೊಂಡಿದ್ದರೆ ಆ ಸಮಯವನ್ನು ಹೊಂದಿಸಲು ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಅದರಂತೆ ಮಳೆಯಿಂದ ರದ್ದಾದ ಪಂದ್ಯದ ಸಮಯವನ್ನು ಹೊಂದಿಸಲು ಹೆಚ್ಚುವರಿ ದಿನದಲ್ಲಿ (6ನೇ ದಿನ) ಪಂದ್ಯವನ್ನು ಆಡಲಾಗುತ್ತದೆ. ಇದರ ಹೊರತಾಗಿ 5 ದಿನ ಸಂಪೂರ್ಣ ಆಡಿ ಫಲಿತಾಂಶ ಬರದಿದ್ದರೆ, 6ನೇ ದಿನಕ್ಕೆ ಪಂದ್ಯವನ್ನು ಮುಂದೂಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.


    ಹೀಗಾಗಿ 5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇನ್ನು ಫೈನಲ್ ಪಂದ್ಯದ ವೇಳೆ ಮೂರನೇ ಅಂಪೈರ್ ಆನ್-ಫೀಲ್ಡ್ ಅಂಪೈರ್ ಕರೆಯನ್ನು ಪರಿಶೀಲಿಸಬಹುದು ಮತ್ತು ಅವರೊಂದಿಗೆ ಮಾತನಾಡುವ ಮೂಲಕ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಐಸಿಸಿ ತಿಳಿಸಿದೆ.


    ಹಾಗೆಯೇ ಫೈನಲ್ ಪಂದ್ಯವನ್ನು ಗ್ರೇಡ್ 1 ಡ್ಯೂಕ್ ಕ್ರಿಕೆಟ್ ಬಾಲ್​ನಲ್ಲಿ ಆಡಲಾಗುತ್ತದೆ. ಇದು ಭಾರತದ ಪಾಲಿಗೆ ಸವಾಲಾಗಿರಲಿದೆ. ಏಕೆಂದರೆ ಭಾರತದಲ್ಲಿ ಎಸ್​ಜಿ ಬಾಲ್​ನಲ್ಲಿ ಕ್ರಿಕೆಟ್ ಆಡಲಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಡ್ಯೂಕ್ ಬಾಲ್​ನಲ್ಲಿ  ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಒಟ್ಟಿನಲ್ಲಿ ಇಂಗ್ಲೆಂಡ್ ಮೈದಾನದಲ್ಲಿ ನ್ಯೂಜಿಲೆಂಡ್​ನ್ನು ಬಗ್ಗು ಬಡಿದು ವಿರಾಟ್ ಕೊಹ್ಲಿ ಚೊಚ್ಚಲ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದು, ಈ ಮೂಲಕ ಕೊಹ್ಲಿ ಮೊದಲ ಬಾರಿ ಐಸಿಸಿ ಟ್ರೋಫಿಗೆ ಮುತ್ತಿಡಲಿದ್ದಾರಾ ಕಾದು ನೋಡಬೇಕಿದೆ.

    Published by:zahir
    First published: