• Home
 • »
 • News
 • »
 • sports
 • »
 • WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ

WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ

WTC Final

WTC Final

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

 • Share this:

  ಸೌತಂಪ್ಟನ್​ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಮ್ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ. ಎರಡನೇ ಇನಿಂಗ್ಸ್​ನಲ್ಲಿ ಕೇವಲ 170 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ನ್ಯೂಜಿಲೆಂಡ್​ಗೆ ಗೆಲ್ಲುವ ಅವಕಾಶ ಮಾಡಿಕೊಟ್ಟಿದೆ. 32 ರನ್​ಗಳ ಹಿನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ 5ನೇ ದಿನದಾಟದಲ್ಲಿ ರೋಹಿತ್ ಶರ್ಮಾ (30) ಮತ್ತು ಶುಭ್​ಮನ್ ಗಿಲ್ (8) ವಿಕೆಟ್ ಕಳೆದುಕೊಂಡು 64 ರನ್​ಗಳಿಸಿತ್ತು. ಅದರಂತೆ ಮೀಸಲು ದಿನದಾಟವನ್ನು ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕಿವೀಸ್ ಬೌಲರುಗಳು ಯಶಸ್ವಿಯಾಗಿದ್ದರು.


  ತಂಡದ ಮೊತ್ತಕ್ಕೆ 7 ರನ್​ ಸೇರ್ಪಡೆಯಾಗುವಷ್ಟರಲ್ಲಿ ಜೇಮಿಸನ್ ವಿರಾಟ್ ಕೊಹ್ಲಿ (13)ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (15) ಕೂಡ ಜೇಮಿಸನ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಜಿಂಕ್ಯ ರಹಾನೆ (15) ಬೌಲ್ಟ್ ಎಸೆತದಲ್ಲಿ ಔಟಾದರೆ, ರವೀಂದ್ರ ಜಡೇಜಾ (16) ರನ್ನು ಔಟ್ ಮಾಡುವಲ್ಲಿ ವಾಗ್ನರ್ ಯಶಸ್ವಿಯಾದರು.


  ಇನ್ನು ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತಿದ್ದ ರಿಷಭ್ ಪಂತ್ 41 ರನ್ ಬಾರಿಸಿ ಬೌಲ್ಟ್​ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾಗಿ ಕ್ಯಾಚ್ ನೀಡಿದರು. ಅದೇ ಓವರ್​ನಲ್ಲಿ ಅಶ್ವಿನ್ ವಿಕೆಟ್ ಪಡೆಯುವ ಮೂಲಕ ಬೌಲ್ಟ್ ಮತ್ತೊಂದು ಯಶಸ್ಸು ತಂದುಕೊಟ್ಟರು. ಇನ್ನು ಮೊಹಮ್ಮದ್ ಶಮಿ ಒಂದಷ್ಟು ಪ್ರತಿರೋಧ ತೋರಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಬುಮ್ರಾ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್​ ತಂಡ ಭಾರತವನ್ನು 2ನೇ ಇನಿಂಗ್ಸ್​ನ್ನು 170 ರನ್​ಗಳಿಗೆ ನಿಯಂತ್ರಿಸಿದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 4 ವಿಕೆಟ್ ಪಡೆದು ಮಿಂಚಿದರು.


  ಮೊದಲ ಇನಿಂಗ್ಸ್​ನ 32 ರನ್​ಗಳ ಮುನ್ನಡೆಯೊಂದಿಗೆ ಇದೀಗ ನ್ಯೂಜಿಲೆಂಡ್ ಗೆಲ್ಲಲು 139 ರನ್​ಗಳ ಗುರಿ ಪಡೆದಿದೆ. ದಿನದಾಟದ 40 ಕ್ಕೂ ಅಧಿಕ ಓವರ್​ಗಳು ಇನ್ನೂ ಬಾಕಿ ಉಳಿದಿದ್ದು, ಬಿರುಸಿನ ಬ್ಯಾಟಿಂಗ್ ಮೂಲಕ ಗೆಲ್ಲುವ ಅವಕಾಶ ನ್ಯೂಜಿಲೆಂಡ್ ಮುಂದಿದೆ. ಒಂದು ವೇಳೆ ನ್ಯೂಜಿಲೆಂಡ್ ತಂಡದ ಒಂದಿಬ್ಬರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರೂ ಭಾರತವನ್ನು ಮಣಿಸಬಹುದು.


  ಇದಾಗ್ಯೂ ರಕ್ಷಣಾತ್ಮಕ ಆಟದೊಂದಿಗೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶ ಕೂಡ ನ್ಯೂಜಿಲೆಂಡ್ ಮುಂದಿರುವುದರಿಂದ, ಬಿರುಸಿನ ಬ್ಯಾಟಿಂಗ್ ಮೂಲಕ ಪಂದ್ಯ ಗೆಲ್ಲುವ ಪ್ರಯತ್ನ ಮಾಡಲಿದೆ. ಇತ್ತ ಭಾರತ ಗೆಲ್ಲಬೇಕಾದರೆ ನ್ಯೂಜಿಲೆಂಡ್ ತಂಡವನ್ನು ಆಲೌಟ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ಒಟ್ಟಿನಲ್ಲಿ ಅಂತಿಮ 25 ಓವರ್​ಗಳಲ್ಲಿ ಪಂದ್ಯ ಫಲಿತಾಂಶ ನಿರ್ಧಾರವಾಗಲಿದ್ದು, ನ್ಯೂಜಿಲೆಂಡ್ ಗೆಲ್ಲಲಿದೆಯಾ? ಅಥವಾ ಡ್ರಾ ಆಗಲಿದೆಯಾ ಕಾದು ನೋಡಬೇಕಿದೆ.


  ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಡ್ರಾನಲ್ಲಿ ಅಂತ್ಯವಾದರೆ ಯಾರು ಚಾಂಪಿಯನ್..?


  ಮೀಸಲು ದಿನದಾಟದಲ್ಲಿ ಯಾವುದೇ ಫಲಿತಾಂಶ ಬರದಿದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ. ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಭಾರತ-ನ್ಯೂಜಿಲೆಂಡ್ ಚೊಚ್ಚಲ ಟೆಸ್ಟ್ ಕಿರೀಟವನ್ನು ಜೊತೆಯಾಗಿ ಹಂಚಿಕೊಳ್ಳಲಿದೆಯಾ ಕಾದು ನೋಡಬೇಕಿದೆ.


  ಉಭಯ ತಂಡಗಳು ಹೀಗಿವೆ:-ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್


  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

  Published by:zahir
  First published: