Wtc final: IPL ವೇಳೆ ಜೇಮಿಸನ್ ಹೆಣೆದ ಬಲೆಗೆ ಬಿದ್ದ ಕೊಹ್ಲಿ..!

ಐಪಿಎಲ್​ ಅಭ್ಯಾಸದ ವೇಳೆ ಆರ್​ಸಿಬಿ ಆಟಗಾರರಾದ ಡೇನಿಯಲ್ ಕ್ರಿಶ್ಚಿಯನ್, ಕೊಹ್ಲಿ, ಜೇಮಿಸನ್‌ ಜೊತೆಯಾಗಿ ಕೂತಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ'ಜೇಮಿ ನೀವು ಡ್ಯೂಕ್‌ ಬಾಲ್‌ಗಳಲ್ಲಿ ಹೆಚ್ಚು ಬೌಲಿಂಗ್‌ ಮಾಡಿದ್ದೀರಾ? ಎಂದು ಕೇಳಿದ್ದರು.

kohli vs jamieson

kohli vs jamieson

 • Share this:
  ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2021 ರ ಮೊದಲಾರ್ಧದ ಅಭ್ಯಾಸದ ವೇಳೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಸಹ ಆಟಗಾರ ಕೈಲ್‌ ಜೇಮಿಸನ್‌ಗೆ ಡ್ಯೂಕ್‌ ಬಾಲ್‌ನಲ್ಲಿ ಬೌಲಿಂಗ್ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಅಂದು ಜೇಮಿಸನ್ ಡ್ಯೂಕ್ ಬಾಲ್​ನಲ್ಲಿ ಬೌಲಿಂಗ್​ ಮಾಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದರು. ಅದು ಯಾಕೆ ಎಂಬುದನ್ನು ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ವೇಳೆ ಕೈಲ್ ಜೇಮಿಸನ್ ನಿರೂಪಿಸಿದ್ದಾರೆ.

  ಹೌದು, ಐಪಿಎಲ್​ ಅಭ್ಯಾಸದ ವೇಳೆ ಆರ್​ಸಿಬಿ ಆಟಗಾರರಾದ ಡೇನಿಯಲ್ ಕ್ರಿಶ್ಚಿಯನ್, ಕೊಹ್ಲಿ, ಜೇಮಿಸನ್‌ ಜೊತೆಯಾಗಿ ಕೂತಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ'ಜೇಮಿ ನೀವು ಡ್ಯೂಕ್‌ ಬಾಲ್‌ಗಳಲ್ಲಿ ಹೆಚ್ಚು ಬೌಲಿಂಗ್‌ ಮಾಡಿದ್ದೀರಾ? ಎಂದು ಕೇಳಿದ್ದರು. ಇದಕ್ಕೆ ಉತ್ತಮರಿಸಿದ ಜೇಮಿಸನ್, ಕೆಲ ಡ್ಯೂಕ್‌ ಬಾಲ್‌ಗಳು ನನ್ನ ಬಳಿ ಇವೆ. ಐಪಿಎಲ್‌ ಮುಗಿದು ಇಂಗ್ಲೆಂಡ್‌ಗೆ ತೆರಳುವ ಮುನ್ನ ಈ ಚೆಂಡುಗಳಲ್ಲಿ ಅಭ್ಯಾಸ ನಡೆಸುತ್ತೇನೆ ಎಂದಿದ್ದರು. ಇದೇ ವೇಳೆ ನಿನ್ನ ಬಳಿ ಡ್ಯೂಕ್ ಬಾಲ್​ಗಳಿದ್ದರೆ ನೆಟ್ ಅಭ್ಯಾಸದ ವೇಳೆ ನೀನು ನನಗೆ ಬೌಲಿಂಗ್ ಮಾಡು, ನಿನ್ನ ಚೆಂಡುಗಳನ್ನು ನನಗೆ ಎದುರಿಸುವುದು ಸಂತಸದ ವಿಷಯ ಎಂದಿದ್ದರು. ಈ ವೇಳೆ ಜೇಮಿಸನ್, ನಿಮಗಂತು ನಾ ಈಗಲೇ ಬೌಲಿಂಗ್ ಮಾಡಲ್ಲ ಎಂದು ನಿರಾಕರಿಸಿದ್ದರು.

  ಇದಕ್ಕೆ ಮುಖ್ಯ ಕಾರಣ ಅದಾಗಲೇ ಕೈಲ್ ಜೇಮಿಸನ್ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ತಯಾರಿಯಲ್ಲಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಡ್ಯೂಕ್ ಬಾಲ್​ನಲ್ಲಿ ಆಡುವುದರಿಂದ ಜೇಮಿಸನ್ ಆ ಚೆಂಡಿನಲ್ಲಿ ಕೊಹ್ಲಿಗೆ ಬೌಲ್ ಮಾಡಿರಲಿಲ್ಲ. ಅಲ್ಲದೆ ನಾನು ಡ್ಯೂಕ್ ಬಾಲ್​ನಲ್ಲಿ ಬೌಲಿಂಗ್​ ಮಾಡಿದರೆ ಕೊಹ್ಲಿಗೆ ತನ್ನ ಬೌಲಿಂಗ್ ಪ್ಲ್ಯಾನ್ ಅರಿವಾಗುತ್ತೆ ಎಂದು ಅರಿತುಕೊಂಡಿದ್ದರು. ಹೀಗಾಗಿಯೇ ಜೇಮಿಸನ್ ಐಪಿಎಲ್ ವೇಳೆ ಡ್ಯೂಕ್ ಬಾಲ್​ನಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಿರಲಿಲ್ಲ. ಇದೀಗ ಯೋಜನೆಯಂತೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಜೇಮಿಸನ್ ಕೊಹ್ಲಿಯ ವಿಕೆಟ್ ಪಡೆದಿದ್ದಾರೆ.  131 ಎಸೆತಗಳನ್ನು ಯಶಸ್ವಿಯಾಗಿ ಎದುರಿಸಿದ್ದ ವಿರಾಟ್ ಕೊಹ್ಲಿ (44) ಯನ್ನು ಎಲ್​ಬಿ ಬಲೆಗೆ ಬೀಳಿಸುವಲ್ಲಿ ಕೈಲ್ ಜೇಮಿಸನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಐಪಿಎಲ್​ ವೇಳೆಯೇ ರೂಪಿಸಿದ ಯೋಜನೆಯಂತೆ ಕೊಹ್ಲಿ ವಿಕೆಟ್ ಪಡೆದು ಜೇಮಿಸನ್ ನ್ಯೂಜಿಲೆಂಡ್ ತಂಡಕ್ಕೆ ಮಹತ್ವದ ಯಶಸ್ಸು ತಂದುಕೊಟ್ಟಿದ್ದಾರೆ. ಒಟ್ಟಿನಲ್ಲಿ ಎಲ್ಲರ ನಿರೀಕ್ಷೆಯಂತೆ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಜೇಮಿಸನ್ ಯಶಸ್ವಿಯಾಗಿದ್ದಾರೆ.
  Published by:zahir
  First published: