• Home
 • »
 • News
 • »
 • sports
 • »
 • WTC Final: 3 ವರ್ಷದ ಬಳಿಕ ಟೀಮ್ ಇಂಡಿಯಾದ ಅತ್ಯಂತ ಕಳಪೆ ಬ್ಯಾಟಿಂಗ್..!

WTC Final: 3 ವರ್ಷದ ಬಳಿಕ ಟೀಮ್ ಇಂಡಿಯಾದ ಅತ್ಯಂತ ಕಳಪೆ ಬ್ಯಾಟಿಂಗ್..!

Team India

Team India

ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

 • Share this:

  ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ಅಂತಿಮ ಘಟ್ಟಕ್ಕೆ ತಲುಪಿದೆ. ಭಾರತ 139 ರನ್​ಗಳ ಸಾಧಾರಣ ಗುರಿಯನ್ನು ನೀಡಿದ್ದು, 3ನೇ ಸೆಷನ್​ನಲ್ಲಿ ಈ ಗುರಿಯನ್ನು ಮುಟ್ಟಬೇಕಾದ ಸವಾಲು ನ್ಯೂಜಿಲೆಂಡ್ ಮುಂದಿದೆ. ಮೊದಲ ಇನಿಂಗ್ಸ್​ನಲ್ಲಿ 217 ರನ್​ಗಳಿಸಿ ಕಳಪೆ ಪ್ರದರ್ಶನ ನೀಡಿದ್ದ ಭಾರತದ ಬ್ಯಾಟ್ಸ್​ಮನ್​ಗಳು ದ್ವಿತೀಯ ಇನಿಂಗ್ಸ್​ನಲ್ಲೂ ಕ್ರೀಸ್​ ಕಚ್ಚಿ ನಿಲ್ಲಲು ವಿಫಲರಾದರು. ಪರಿಣಾಮ ಎರಡನೇ ಇನಿಂಗ್ಸ್​ನಲ್ಲಿ ಕೇವಲ 170 ರನ್​ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಮೂಡಿಸಿತು.


  ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ನಿರ್ಣಾಯಕ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಇಲ್ಲಿ ಮತ್ತೊಂದು ವಿಶೇಷ ಎಂದರೆ ಚಾಂಪಿಯನ್​ ಪಟ್ಟಕ್ಕಾಗಿ ನಡೆದ ಈ ಪಂದ್ಯದ ಎರಡೂ ಇನಿಂಗ್ಸ್​ಗಳಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್​ಮನ್ ಅರ್ಧಶತಕ ಬಾರಿಸಿಲ್ಲ ಎಂಬುದು. ಹೌದು, ಮೊದಲ ಇನಿಂಗ್ಸ್​ನಲ್ಲಿ ಅಜಿಂಕ್ಯ ರಹಾನೆ 117 ಎಸೆತಗಳಲ್ಲಿ 49 ರನ್ ಬಾರಿಸಿದ್ದು ಟೀಮ್ ಇಂಡಿಯಾ ಪಾಲಿನ ಗರಿಷ್ಠ ವೈಯುಕ್ತಿಕ ಮೊತ್ತವಾಗಿತ್ತು. ಹಾಗೆಯೇ ವಿರಾಟ್ ಕೊಹ್ಲಿ 132 ಎಸೆತಗಳಲ್ಲಿ 44 ರನ್ ಬಾರಿಸಿರುವುದು 2ನೇ ಗರಿಷ್ಠ ವೈಯುಕ್ತಿಕ ಮೊತ್ತ. ಇದರ ಹೊರತಾಗಿ ಟೀಮ್ ಇಂಡಿಯಾದ ಉಳಿದ ಬ್ಯಾಟ್ಸ್​ಮನ್​ಗಳು 40 ರ ಗಡಿದಾಟಿರಲಿಲ್ಲ.


  ಇನ್ನು 2ನೇ ಇನಿಂಗ್ಸ್​ನಲ್ಲಿ ಭಾರತದ ಪರ ಕೊಂಚ ಪ್ರತಿರೋಧ ತೋರಿದ್ದು ರಿಷಭ್ ಪಂತ್. 88 ಎಸೆತಗಳಲ್ಲಿ ಪಂತ್ 41 ರನ್ ಬಾರಿಸಿದ್ದರಿಂದ ಟೀಮ್ ಇಂಡಿಯಾ ಮೊತ್ತ 150 ರ ಗಡಿದಾಟುವಂತಾಯಿತು. ಇದರ ಹೊರತಾಗಿ 2ನೇ ಗರಿಷ್ಠ ಮೊತ್ತ ರೋಹಿತ್ ಶರ್ಮಾ ಬಾರಿಸಿದ 30 ರನ್ ಮಾತ್ರ. ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ಗಳು 20 ಕ್ಕಿಂತ ಅಧಿಕ ಮೊತ್ತ ಬಾರಿಸಲಾಗಲಿಲ್ಲ ಎಂಬುದೇ ಅಚ್ಚರಿ. 2018 ರ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್​ನಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್​ಮನ್​ ಅರ್ಧಶತಕ ಬಾರಿಸದೇ ಕಳಪೆ ಪ್ರದರ್ಶನ ತೋರಿದ್ದಾರೆ. ಇದಕ್ಕೂ ಮುನ್ನ 2018 ರಲ್ಲಿ ಇಂಗ್ಲೆಂಡ್​ ವಿರುದ್ದ ಲಾರ್ಡ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಯಾವುದೇ ಬ್ಯಾಟ್ಸ್​ಮನ್​ಗಳು ಅರ್ಧಶತಕ ಬಾರಿಸದೇ ಎದುರಾಳಿಗೆ ಶರಣಾಗಿತ್ತು.


  ಟೀಮ್ ಇಂಡಿಯಾ ಸ್ಕೋರ್ ಕಾರ್ಡ್ ಹೀಗಿದೆ:
  ಮೊದಲ ಇನಿಂಗ್ಸ್​​:- 217/10
  ರೋಹಿತ್ ಶರ್ಮಾ- 34
  ಶುಭ್​ಮನ್ ಗಿಲ್- 28
  ಚೇತೇಶ್ವರ ಪೂಜಾರ- 8
  ವಿರಾಟ್ ಕೊಹ್ಲಿ- 44
  ಅಜಿಂಕ್ಯ ರಹಾನೆ- 49
  ರಿಷಭ್ ಪಂತ್- 4
  ರವೀಂದ್ರ ಜಡೇಜಾ- 15
  ಆರ್​. ಅಶ್ವಿನ್- 22
  ಇಶಾಂತ್ ಶರ್ಮಾ- 4
  ಜಸ್​ಪ್ರೀತ್ ಬುಮ್ರಾ- 0
  ಮೊಹಮ್ಮದ್ ಶಮಿ- 4


  ದ್ವಿತೀಯ ಇನಿಂಗ್ಸ್​ :- 170/10
  ರೋಹಿತ್ ಶರ್ಮಾ- 30
  ಶುಭ್​ಮನ್ ಗಿಲ್- 8
  ಚೇತೇಶ್ವರ ಪೂಜಾರ- 15
  ವಿರಾಟ್ ಕೊಹ್ಲಿ- 13
  ಅಜಿಂಕ್ಯ ರಹಾನೆ- 15
  ರಿಷಭ್ ಪಂತ್- 41
  ರವೀಂದ್ರ ಜಡೇಜಾ- 16
  ಆರ್​. ಅಶ್ವಿನ್- 7
  ಇಶಾಂತ್ ಶರ್ಮಾ- 1
  ಜಸ್​ಪ್ರೀತ್ ಬುಮ್ರಾ- 0
  ಮೊಹಮ್ಮದ್ ಶಮಿ- 13


  ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಡ್ರಾನಲ್ಲಿ ಅಂತ್ಯವಾದರೆ ಯಾರು ಚಾಂಪಿಯನ್..?


  ಮೀಸಲು ದಿನದಾಟದಲ್ಲಿ ಯಾವುದೇ ಫಲಿತಾಂಶ ಬರದಿದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ. ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಭಾರತ-ನ್ಯೂಜಿಲೆಂಡ್ ಚೊಚ್ಚಲ ಟೆಸ್ಟ್ ಕಿರೀಟವನ್ನು ಜೊತೆಯಾಗಿ ಹಂಚಿಕೊಳ್ಳಲಿದೆಯಾ ಕಾದು ನೋಡಬೇಕಿದೆ.


  ಉಭಯ ತಂಡಗಳು ಹೀಗಿವೆ:-ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್


  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

  Published by:zahir
  First published: