HOME » NEWS » Sports » CRICKET WTC FINAL DAY 4 HIGHLIGHTS PLAY ABANDONED DUE TO RAIN ZP

WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್: 4ನೇ ದಿನದಾಟ ಮಳೆಗೆ ಆಹುತಿ..!

5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇದೀಗ 5 ದಿನದಲ್ಲಿ 2 ದಿನಗಳು ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಮೀಸಲು ದಿನದಲ್ಲಿ ಪಂದ್ಯವನ್ನು ಹೇಗೆ ಪೂರ್ಣಗೊಳಿಸಲಾಗುತ್ತದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

news18-kannada
Updated:June 21, 2021, 8:19 PM IST
WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್: 4ನೇ ದಿನದಾಟ ಮಳೆಗೆ ಆಹುತಿ..!
WTC Final
  • Share this:
ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟಕ್ಕೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಸೋಮವಾರದ ದಿನದಾಟವನ್ನು ಸ್ಥಗಿತಗೊಳಿಸಲಾಗಿದೆ. ಜೂ.18 ರಂದು ಆರಂಭವಾಗಬೇಕಿದ್ದ ಪಂದ್ಯವು ಮಳೆಯ ಕಾರಣ ಜೂ. 19 ರಂದು ಶುರುವಾಗಿತ್ತು. ಆ ಬಳಿಕ ಎರಡು ದಿನದಾಟಗಳನ್ನು ಮುಗಿಸಲಾಗಿತ್ತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾವನ್ನು 217 ರನ್​ಗಳಿಗೆ ಆಲೌಟ್ ಮಾಡಿತ್ತು. ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿ 2 ವಿಕೆಟ್ ನಷ್ಟಕ್ಕೆ ನ್ಯೂಜಿಲೆಂಡ್ 101 ರನ್ ಕಲೆಹಾಕಿತ್ತು.

ಇದೀಗ ಮತ್ತೆ ನಾಲ್ಕನೇ ದಿನದಾಟವು ಸಂಪೂರ್ಣ ಮಳೆಗೆ ಆಹುತಿಯಾಗಿದೆ. ಭಾನುವಾರ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಹಾಗೆಯೇ ಸೋಮವಾರ ಕೂಡ ನಿರಂತರ ಮಳೆಯಾಗಿದೆ. ಹೀಗಾಗಿ ಔಟ್​ಫೀಲ್ಡ್ ಸಂಪೂರ್ಣ ನೀರಿನಿಂದ ಕೂಡಿದ್ದು, ಮಳೆ ನೀರನ್ನು ತೆರವುಗೊಳಿಸಿ ಇಂದು ಪಂದ್ಯವನ್ನು ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ ದಿನದಾಟವನ್ನು ರದ್ದುಗೊಳಿಸುವ ನಿರ್ಧಾರ ಮಾಡಲಾಯಿತು.

ಇದಾಗ್ಯೂ ಈ ಪಂದ್ಯದ ಬಾಕಿ ಇರುವ ಓವರ್​ಗಳನ್ನು ಮೀಸಲು ದಿನದಲ್ಲಿ ಆಡಿಸಲಾಗುವುದು ಎಂದು ಈಗಾಗಲೇ ಐಸಿಸಿ ಸ್ಪಷ್ಟಪಡಿಸಿದೆ. ಆದರೆ ಈಗಾಗಲೇ ಮೊದಲ ದಿನದಾಟ ಮಳೆಗೆ ಆಹುತಿಯಾಗಿದ್ದು, ನಾಲ್ಕನೇ ದಿನ ಕೂಡ ಮಳೆಯಿಂದ ರದ್ದಾಗಿದೆ. ಇದರಿಂದ ಮೀಸಲು ದಿನದಲ್ಲಿ ಸಂಪೂರ್ಣ ಪಂದ್ಯವನ್ನು ಪೂರ್ಣಗೊಳಿಸಲಾಗುವುದಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯಗೊಳ್ಳುವ ಆತಂಕ ಎದುರಾಗಿದೆ.

ಫೈನಲ್​ ಪಂದ್ಯವು ಮಳೆಗೆ ಆಹುತಿಯಾದರೆ ಮುಂದೇನು?

ಒಂದು ವೇಳೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೆ , ಡ್ರಾ ಅಥವಾ ಟೈನಲ್ಲಿ ಕೊನೆಗೊಂಡರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಿದ್ದಾರೆ ಎಂದು ಪ್ರಶ್ನೆ ಎಲ್ಲರಲ್ಲಿದೆ. ಈ ಎಲ್ಲಾ ಪರಿಸ್ಥಿತಿಯನ್ನು ಮನಗಂಡಿರುವ ಐಸಿಸಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಫೈನಲ್ ಪಂದ್ಯವು ಡ್ರಾ ಅಥವಾ ಟೈ ಆದರೆ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿ ಟ್ರೋಫಿ ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.

ಅಷ್ಟೇ ಅಲ್ಲದೆ ಡ್ರಾ ಫಲಿತಾಂಶವನ್ನು ತಪ್ಪಿಸಲು ಮೀಸಲು ದಿನವನ್ನು ಕೂಡ ನೀಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣದಿಂದ ಪಂದ್ಯವು ಸ್ಥಗಿತಗೊಂಡಿದ್ದರೆ ಆ ಸಮಯವನ್ನು ಹೊಂದಿಸಲು ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಅದರಂತೆ ಮಳೆಯಿಂದ ರದ್ದಾದ ಪಂದ್ಯದ ಸಮಯವನ್ನು ಹೊಂದಿಸಲು ಹೆಚ್ಚುವರಿ ದಿನದಲ್ಲಿ (6ನೇ ದಿನ) ಪಂದ್ಯವನ್ನು ಆಡಲಾಗುತ್ತದೆ. ಇದರ ಹೊರತಾಗಿ 5 ದಿನ ಸಂಪೂರ್ಣ ಆಡಿ ಫಲಿತಾಂಶ ಬರದಿದ್ದರೆ, 6ನೇ ದಿನಕ್ಕೆ ಪಂದ್ಯವನ್ನು ಮುಂದೂಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
Youtube Video
ಹೀಗಾಗಿ 5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇದೀಗ 5 ದಿನದಲ್ಲಿ 2 ದಿನಗಳು ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಮೀಸಲು ದಿನದಲ್ಲಿ ಪಂದ್ಯವನ್ನು ಹೇಗೆ ಪೂರ್ಣಗೊಳಿಸಲಾಗುತ್ತದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಹೀಗಾಗಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಡ್ರಾನಲ್ಲಿ ಅಂತ್ಯ ಕಾಣುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಕ್ರಿಕೆಟ್ ವಿಶ್ಲೇಷಕರು.
Published by: zahir
First published: June 21, 2021, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories