• Home
 • »
 • News
 • »
 • sports
 • »
 • WTC Final 2021: ಬಯೋಬಬಲ್​ನಿಂದ ಹೊರಬಂದ ಟೀಮ್ ಇಂಡಿಯಾದ 9 ಆಟಗಾರರು..!

WTC Final 2021: ಬಯೋಬಬಲ್​ನಿಂದ ಹೊರಬಂದ ಟೀಮ್ ಇಂಡಿಯಾದ 9 ಆಟಗಾರರು..!

Team India

Team India

ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್​ ಅಶ್ವಿನ್

 • Share this:

  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಹಾಗೂ ಇಂಗ್ಲೆಂಡ್​ ವಿರುದ್ದದ ಸರಣಿಗಾಗಿ ಟೀಮ್ ಇಂಡಿಯಾ 24 ಸದಸ್ಯರ ತಂಡ ಇಂಗ್ಲೆಂಡ್​ಗೆ ತೆರಳಿತ್ತು. ಅದರಲ್ಲಿಈಗ 15 ಸದಸ್ಯರ ಬಳಗವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಪಾಲ್ಗೊಂಡಿದ್ದಾರೆ. ಇದಾಗ್ಯೂ ಉಳಿದ 5 ಮಂದಿ ಆಟಗಾರರು ಹಾಗೂ 4 ನೆಟ್ ಬೌಲರುಗಳು ಕೂಡ ಬಯೋಬಬಲ್​ನಲ್ಲಿ ಉಳಿದುಕೊಂಡಿದ್ದರು. ಆದರೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಆಡುವ ಆಟಗಾರರ ಹೊರತಾಗಿ ಉಳಿದ 9 ಮಂದಿಯನ್ನು ಜೈವಿಕ ಸುರಕ್ಷಾ ವಲಯದಿಂದ ಬಿಡುಗಡೆಗೊಳಿಸಲಾಗಿದೆ.


  ಇಂಗ್ಲೆಂಡ್​ನಲ್ಲಿ ಸುದೀರ್ಘ ಸರಣಿ ಹಿನ್ನೆಲೆಯಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ಆಡದಿರುವ ಆಟಗಾರರನ್ನು ಬಯೋಬಬಲ್​ನಿಂದ ಹೊರಗಿಡುವ ನಿರ್ಧಾರ ಮಾಡಲಾಗಿದೆ. ಆಟಗಾರರು ದೀರ್ಘ ಜೈವಿಕ ವಲಯದಲ್ಲಿ ಇದ್ದರೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿದ್ದು, ಹೀಗಾಗಿ ಪ್ರಸ್ತುತ ತಂಡದಲ್ಲಿರುವ ಆಟಗಾರರನ್ನು ಹೊರಗಿಡುವ ನಿರ್ಧಾರ ಮಾಡಲಾಗಿದೆ.


  ಅದರಂತೆ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯದ ಕೆಎಲ್ ರಾಹುಲ್, ಮಾಯಾಂಕ್‌ ಅಗರ್ವಾಲ್‌, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಅಕ್ಷರ್‌ ಪಟೇಲ್‌ ಇದೀಗ ಜೈವಿಕ ಸುರಕ್ಷಾ ವಲಯದಿಂದ ಹೊರ ಬಂದಿದ್ದಾರೆ. ಇವರೊಂದಿಗೆ ನೆಟ್ ಬೌಲರುಗಳಾಗಿ ತಂಡದಲ್ಲಿರುವ ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಅರ್ಝಾನ್ ನಾಗ್ವಸ್ವಲ್ಲಾ ಕೂಡ ಬಯೋಬಬಲ್​ನಿಂದ ಮುಕ್ತಿ ಪಡೆದಿದ್ದಾರೆ.


  ಟೀಮ್ ಇಂಡಿಯಾ ಆಟಗಾರರು ಮೇ 19 ರಿಂದ ಬಯೋಬಬಲ್​ನಲ್ಲಿ ಕಾಲ ಕಳೆಯುತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಬಳಿಕ ಇಂಗ್ಲೆಂಡ್ ವಿರುದ್ದದ ಸರಣಿಗೆ ಒಂದು ತಿಂಗಳುಗಳ ಅಂತರವಿದೆ. ಅತ್ತ ಇಂಗ್ಲೆಂಡ್​ನಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣದಲ್ಲಿರುವ ಕಾರಣ ಆಟಗಾರರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಹೀಗಾಗಿ ಬಯೋಬಬಲ್ ನಿಯಮವನ್ನು ಸಡಿಲಿಕೆ ಮಾಡಿ, ಹೆಚ್ಚುವರಿ ಆಟಗಾರರನ್ನು ಜೈವಿಕ ಸುರಕ್ಷಾ ವಲಯದಿಂದ ಹೊರಗಿಡಲಾಗಿದೆ.


  ಟೀಮ್ ಇಂಡಿಯಾ ಹೀಗಿದೆ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್​ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕುರ್, ಉಮೇಶ್ ಯಾದವ್ ,ಕೆಎಲ್ ರಾಹುಲ್, ವೃದ್ಧಿಮಾನ್ ಸಾಹ


  ಹೆಚ್ಚುವರಿ ಆಟಗಾರರು: ಅಭಿಮನ್ಯು ಈಶ್ವರನ್, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಹಾಗೂ ಅರ್ಝಾನ್ ನಾಗ್ವಸ್ವಲ್ಲಾ.

  Published by:zahir
  First published: