news18-kannada Updated:December 16, 2020, 6:33 PM IST
Shane Warne
ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಗುರುವಾರ ಚಾಲನೆ ಸಿಗಲಿದೆ. ಅಡಿಲೇಡ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವು ಹೊನಲು-ಬೆಳಕಿನಲ್ಲಿ ಆಡಲಿರುವುದು ವಿಶೇಷ. ಆದರೆ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರೊಬ್ಬರು ಇಲ್ಲದಿರುವ ಬಗ್ಗೆ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಶೇನ್ ವಾರ್ನ್, ಆತ ಟೀಮ್ ಇಂಡಿಯಾದಲ್ಲಿ ಇರಬೇಕಿತ್ತು. ನಾನು ಆತನ ಆಟವನ್ನು ನೋಡಲು ಇಷ್ಟಪಡುತ್ತೇನೆ. ಆದರೆ ಆತ ಟೆಸ್ಟ್ ತಂಡದಲ್ಲಿ ಇಲ್ಲ ಎಂಬುದೇ ಬೇಸರ. ಶೇನ್ ವಾರ್ನ್ ಹೀಗೆ ಹೇಳಿದ್ದು ಮತ್ಯಾರಿಗೂ ಅಲ್ಲ, ಪವರ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಬಗ್ಗೆ ಎಂಬುದು ವಿಶೇಷ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ವೇಳೆ ಅಬ್ಬರಿಸಿದ್ದ ಪಾಂಡ್ಯಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಅವರು ಭಾರತಕ್ಕೆ ಮರಳಿದ್ದಾರೆ.
ಇದೀಗ ಭಾರತ ತಂಡದಲ್ಲಿ ಪಾಂಡ್ಯ ಇಲ್ಲದಿರುವ ಬಗ್ಗೆ ಶೇನ್ ವಾರ್ನ್ ಮಾತನಾಡಿದ್ದಾರೆ. ಆತ ಫೇವರೀಟ್ ಆಟಗಾರರಲ್ಲಿ ಒಬ್ಬರು. ಪ್ರಸ್ತುತ ವಿಶ್ವ ಕ್ರಿಕೆಟಿಗರ ಪೈಕಿ ಪಾಂಡ್ಯ ಕೂಡ ಓರ್ವ. ನಾನು ಆತನನ್ನು ಟೆಸ್ಟ್ ತಂಡದಲ್ಲಿ ನೋಡುವುದನ್ನು ನಾನು ಬಯಸುತ್ತೇನೆ. ಇದನ್ನು ವಾರದ ಹಿಂದೆಯೇ ಹೇಳಿದ್ದೆ ಎಂದು ವಾರ್ನ್ ತಿಳಿಸಿದರು.
ನನ್ನ ಪ್ರಸ್ತುತ ವಿಶ್ವದ ಮೂವರು ಫೇವರೀಟ್ ಕ್ರಿಕೆಟರ್ಗಳಲ್ಲಿ ಆತನೂ ಓರ್ವ ಎಂದು ಈ ಹಿಂದೆ ತಿಳಿಸಿದ್ದೆ. ಈ ಬಗ್ಗೆ ಹಲವರು ಇದು ದೊಡ್ಡ ಮಾತು ಎಂದಿದ್ದರು. ನಾನು ಈಗಲೂ ಅದನ್ನೇ ಹೇಳುವೆ ಅದ್ಭುತ ಆಟಗಾರ ಎಂದು ವಾರ್ನ್ ಪಾಂಡ್ಯರನ್ನು ಪ್ರಶಂಸಿದ್ದಾರೆ. ಪಾಂಡ್ಯ ತಂಡದಲ್ಲಿದ್ದರೆ ಅದು ಕೊಹ್ಲಿಗೆ ಸಹಕಾರಿಯಾಗುತ್ತಿತ್ತು. ಉತ್ತಮ ಫಾರ್ಮ್ನಲ್ಲಿರುವ ಕಾರಣ ಕೊಹ್ಲಿ ಅಲಭ್ಯತೆಯಲ್ಲಿ ತಂಡಕ್ಕೆ ಅವರಿಂದ ದೊಡ್ಡ ಕೊಡುಗೆಯನ್ನು ನಿರೀಕ್ಷಿಸಬಹುದಿತ್ತು ಎಂದು ವಾರ್ನ್ ಹೇಳಿದರು.
ನಾ ನೋಡಿರುವಂತೆ ಹಾರ್ದಿಕ್ ಪಾಂಡ್ಯ ರಾಕ್ಸ್ಟಾರ್. ರಾಕ್ಸ್ಟಾರ್ಗಳ ಹಲವು ಲಕ್ಷಣಗಳು ಆತನಲ್ಲಿವೆ. ಹಾಗೆಯೇ ಒಳ್ಳೆಯ ತಾಳ್ಮೆಯನ್ನು ಹೊಂದಿದ್ದಾರೆ. ಅವನೊಂದಿಗೆ ಮಾತನಾಡುತ್ತಿದ್ದರೆ ವೆಸ್ಟ್ ಇಂಡೀಸ್ನಿಂದ ಬಂದಿದ್ದಾನೆ ಎಂದೆನಿಸಿ ಬಿಡುತ್ತದೆ. ಆತನೊಂದಿಗೆ ಇದ್ದರೆ ಅವನು ಅಂಟಿಗುವಾದ ಬೀಚ್ನಿಂದ ಬಂದವರಂತೆ ಭಾಸವಾಗುತ್ತೆ ಎಂದು ಶೇನ್ ವಾರ್ನ್ ಪಾಂಡ್ಯರ ಆಫ್ ಫೀಲ್ಡ್ ವ್ಯಕ್ತಿತ್ವವನ್ನು ಸ್ಮರಿಸಿದರು.
Published by:
zahir
First published:
December 16, 2020, 6:33 PM IST