Jhulan Record- ಝೂಲನ್ ಗೋಸ್ವಾಮಿ 600 ವಿಕೆಟ್ ಸಾಧನೆ; ವಿಶ್ವದ ಅತಿವೇಗದ ಬೌಲರ್​ಳ ದಾಖಲೆ ಒಂದೇ ಎರಡೇ

Chakdah Express World Record: ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಝೂಲನ್ ಗೋಸ್ವಾಮಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 600 ವಿಕೆಟ್​ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ.

ಝೂಲನ್ ಗೋಸ್ವಾಮಿ

ಝೂಲನ್ ಗೋಸ್ವಾಮಿ

 • Cricketnext
 • Last Updated :
 • Share this:
  ನವದೆಹಲಿ: ಮೊನ್ನೆ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ಸೋತಿತು. ಆ ಬಾಲ್ ನೋ ಬಾಲ್ ಆಗಿ ಪಂದ್ಯ ಕೈಯ್ಯಾರೆ ಬಿಟ್ಟುಕೊಟ್ಟಿತು. ಫುಟ್ಬಾಲ್​ನಲ್ಲಿ ಸೆಲ್ಫ್ ಗೋಲ್ ರೀತಿ ಕ್ರಿಕೆಟ್​ನಲ್ಲಿ ಆಗಿತ್ತು ಭಾರತದ ಸ್ಥಿತಿ. ಆ ಬಾಲ್ ಎಸೆದವರು ಝೂಲನ್ ಗೋಸ್ವಾಮಿ (Jhulan Goswami). ಇವರು ವಿಶ್ವದ ಹಾಲಿ ಅತ್ಯಂತ ವೇಗದ ಮಹಿಳಾ ಬೌಲರ್ ಆಗಿದ್ದಾರೆ (World's fastest women bowler). ಭಾರತದ ಅತ್ಯಂತ ಯಶಸ್ವಿ ಹಾಗೂ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬೌಲರ್​ಗಳ ಪೈಕಿ ಒಬ್ಬರಾಗಿದ್ದಾರೆ. ಈಗ ಮೂರನೇ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಮೂರು ವಿಕೆಟ್ ಕಬಳಿಸಿ ಝೂಲನ್ ಸೇಡು ತೀರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ್ಧಾರೆ. ದೇಶೀಯ ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿ ಕ್ರಿಕೆಟ್ ಅನ್ನೂ ಒಳಗೊಂಡು ಅವರು ಇದೂವರೆಗೂ ಗಳಿಸಿದ ವಿಕೆಟ್​ಗಳ ಸಂಖ್ಯೆ 600 ಗಡಿ ದಾಟಿದೆ. ಇದು ಬಹುಶಃ ವಿಶ್ವದಾಖಲೆಯೇ ಆಗಿದ್ದಿರಬಹುದು.

  38 ವರ್ಷದ ಝೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಇವತ್ತಿನ ಪಂದ್ಯವೂ ಸೇರಿ ಒಟ್ಟು 192 ಪಂದ್ಯಗಳಿಂದ 240 ವಿಕೆಟ್ ಸಂಪಾದಿಸಿದ್ದಾರೆ. ಇಡೀ ವಿಶ್ವದಲ್ಲಿ 200ಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಏಕೈಕ ಮಹಿಳಾ ಬೌಲರ್ ಝೂಲನ್ ಅವರಾಗಿದ್ದಾರೆ. ಬೇರಾವ ಬೌಲರ್ ಕೂಡ 200 ವಿಕೆಟ್ ಸಮೀಪ ಬಂದಿಲ್ಲ.

  ಇದನ್ನೂ ಓದಿ: Ind vs Aus- ಭಾರತಕ್ಕೆ ಐತಿಹಾಸಿಕ ಜಯ; ಆಸ್ಟ್ರೇಲಿಯಾ ಮಹಿಳೆಯರ ವಿಶ್ವದಾಖಲೆ ಓಟ ಅಂತ್ಯ

  ಝೂಲನ್ ಗೋಸ್ವಾಮಿ ವಿಕೆಟ್ ಸಾಧನೆ:

  ಕ್ರಿಕೆಟ್ ಮಾದರಿ ಪಂದ್ಯ ವಿಕೆಟ್ ಸರಾಸರಿ
  ಏಕದಿನ ಕ್ರಿಕೆಟ್ 192 240 21.59
  ಟೆಸ್ಟ್ ಕ್ರಿಕೆಟ್ 11 41 17.63
  ಟಿ20 ಕ್ರಿಕೆಟ್ 68 56 21.94
  ದೇಶೀಯ ಕ್ರಿಕೆಟ್ - 264 -  ಝೂಲನ್ ಗೋಸ್ವಾಮಿ ಅವರು ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್​ನಿಂದ ನಿವೃತ್ತರಾಗಿದ್ಧಾರೆ. ಮೂರು ವರ್ಷಗಳ ಹಿಂದೆ ರಿಟೈರ್ ಆಗುವ ಮುನ್ನ ಅವರು 68 ಟಿ20 ಪಂದ್ಯಗಳಿಂದ 56 ವಿಕೆಟ್ ಪಡೆದಿದ್ದಾರೆ. 11 ಟೆಸ್ಟ್ ಪಂದ್ಯಗಳನ್ನ ಆಡಿರುವ ಅವರು 41 ವಿಕೆಟ್ ಪಡೆದಿದ್ದಾರೆ. ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅವರು ಬರೋಬ್ಬರಿ 264 ವಿಕೆಟ್ ಸಂಪಾದಿಸಿದ್ದಾರೆ. ಒಟ್ಟು 601 ವಿಕೆಟ್​ಗಳು ಅವರ ವೃತ್ತಿಪರ ಕ್ರಿಕೆಟ್​ನಲ್ಲಿ ಬಿದ್ದಿವೆ. ಕೆಲ ದಿನಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ ಪಂದ್ಯವೂ ಇದ್ದು, ಅದರಲ್ಲಿ ಅವರು ಆಡುತ್ತಿದ್ಧಾರೆ.

  ಚಾಕ್​ದಹ ಎಕ್ಸ್​ಪ್ರೆಸ್ (Chakdah Express) ಎಂದು ಖ್ಯಾತರಾಗಿರುವ ಝೂಲನ್ ಗೋಸ್ವಾಮಿ ಅವರು ಪಶ್ಚಿಮ ಬಂಗಾಳದ ಚಾಕ್​ದಹದವರು. ಹೆಚ್ಚೂಕಡಿಮೆ ಆರು ಅಡಿಯಷ್ಟು ಎತ್ತರ ಕಾಯದ ಅವರು ವೇಗದ ಬೌಲಿಂಗ್​ಗೆ ಹೇಳಿಮಾಡಿಸಿದ ಶಾರೀರ ಹೊಂದಿದ್ದಾರೆ. ಬಾಲಕಿಯಾಗಿ ಫುಟ್ಬಾಲ್ ಫ್ಯಾನ್ ಆಗಿದ್ದ ಝೂಲನ್ ಗೋಸ್ವಾಮಿ 1992ರ ವಿಶ್ವಕಪ್ ಕ್ರಿಕೆಟ್ ವೀಕ್ಷಿಸಿದ ಬಳಿಕ ಕ್ರಿಕೆಟ್ ಆಟದಲ್ಲಿ ಆಸಕ್ತಿ ತೋರಿದರು. ಚಾಕ್​ದಹದಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ದೂರದ ಕೋಲ್ಕತಾಗೆ ಹೋಗಿ ಇವರು ಕ್ರಿಕೆಟ್ ಆಡುತ್ತಾ ಬೆಳೆದವರು.

  ಇದನ್ನೂ ಓದಿ: ಟಿ-20 ವಿಶ್ವಕಪ್​ಗೂ ಮುನ್ನವೇ ಪಾಕ್ ಎದುರಿನ ಭಾರತ ಐತಿಹಾಸಿಕ ಗೆಲುವು ನೆನಪಿಸಿದ #Baapbaaphotahai ಟ್ರೆಂಡ್!

  ಇವರ ಬೌಲಿಂಗ್ ವೇಗ ಎಷ್ಟು?

  ಮಹಿಳಾ ಕ್ರಿಕೆಟ್​ನಲ್ಲಿ ವೇಗದ ಬೌಲಿಂಗ್ ಪುರುಷರ ಕ್ರಿಕೆಟ್​ನಷ್ಟಿರುವುದಿಲ್ಲ. ಪುರುಷರ ಕ್ರಿಕೆಟ್​ನಲ್ಲಿ ಗಂಟೆಗೆ 150 ಕಿಮೀವರೆಗೂ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಝೂಲನ್ ಗೋಸ್ವಾಮಿ ಅವರು ಗಂಟೆಗೆ 150-120 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಸದ್ಯ ಇಷ್ಟು ವೇಗದಲ್ಲಿ ಬೌಲಿಂಗ್ ಮಾಡುವ ಆಟಗಾರ್ತಿಯರು ಝೂಲನ್ ಬಿಟ್ಟರೆ ವಿಶ್ವದಲ್ಲಿ ಬೇರೆ ಯಾರೂ ಇಲ್ಲ.

  ಅರ್ಜುನ ಪ್ರಶಸ್ತಿ, ಪದ್ಮ ಶ್ರೀ ಮೊದಲಾದ ಪ್ರಶಸ್ತಿಗಳನ್ನ ಗಳಿಸಿರುವ ಝೂಲನ್ ಗೋಸ್ವಾಮಿ ಅವರು ಈಗಿನ ಮಹಿಳಾ ಕ್ರಿಕೆಟ್ ತಂಡದ ಕೋಚಿಂಗ್ ಟೀಮ್​ನಲ್ಲೂ ಇದ್ದಾರೆ, ಆಟಗಾರ್ತಿಯೂ ಆಗಿದ್ದಾರೆ. ಇದು ವಿಶೇಷವಾದುದು. ಝೂಲನ್ ಗೋಸ್ವಾಮಿ ಅವರ ಕ್ರಿಕೆಟ್ ಜೀವನದ ಕುರಿತು ಹಿಂದಿ ಭಾಷೆಯಲ್ಲಿ “ಚಾಕ್​ದಹ ಎಕ್ಸ್​ಪ್ರೆಸ್” ಎಂಬ ಸಿನಿಮಾ ನಿರ್ಮಾಣ (Chakdah Express Movie) ಆಗುತ್ತಿದೆ. ಸುಶಾಂತ್ ದಾಸ್ ಅವರು ಈ ಚಿತ್ರದ ನಿರ್ದೇಶನ ಮಾಡಲಿದ್ಧಾರೆ.
  Published by:Vijayasarthy SN
  First published: