ದೀಪಕ್​ಗೆ ಚಿನ್ನ ಗೆಲ್ಲುವ ಕನಸು ನುಚ್ಚುನೂರು; ಮಣಿಗಂಟು ಗಾಯದಿಂದ ಫೈನಲ್​ನಿಂದ ನಿವೃತ್ತಿ

ಮಣಿಗಂಟು ಗಾಯಗೊಂಡಿರುವ ಕಾರಣ ದೀಪಕ್ ಚಿನ್ನ ಗೆಲ್ಲುವ ಅಮೂಲ್ಯ ಅವಕಾಶವನ್ನು ಕಳೆದುಕೊಂಡಿದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

Vinay Bhat | news18-kannada
Updated:September 22, 2019, 5:07 PM IST
ದೀಪಕ್​ಗೆ ಚಿನ್ನ ಗೆಲ್ಲುವ ಕನಸು ನುಚ್ಚುನೂರು; ಮಣಿಗಂಟು ಗಾಯದಿಂದ ಫೈನಲ್​ನಿಂದ ನಿವೃತ್ತಿ
ದೀಪಕ್ ಪೂನಿಯಾ
  • Share this:
ಬೆಂಗಳೂರು (ಸೆ. 22): ಜ್ಯೂನಿಯರ್ ವಿಶ್ವ ಚಾಂಪಿಯನ್ ಖ್ಯಾತಿಯ ದೀಪಕ್ ಪೂನಿಯಾ ಅವರು ಸೀನಿಯರ್ ಕುಸ್ತಿ ವಿಶ್ವ ಚಾಂಪಿಯನ್ ಶಿಪ್ ಫೈನಲ್ ನಿಂದ ಹೊರಗುಳಿದು ನಿರಾಸೆ ಅನುಭವಿಸಿದ್ದಾರೆ.

ಮಣಿಗಂಟು ಗಾಯಗೊಂಡಿರುವ ಕಾರಣ ದೀಪಕ್ ಚಿನ್ನ ಗೆಲ್ಲುವ ಅಮೂಲ್ಯ ಅವಕಾಶವನ್ನು ಕಳೆದುಕೊಂಡಿದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಸೆಮಿಫೈನಲ್​ನಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟೀಫನ್ ರೀಚ್‌ಮತ್ ಅವರನ್ನು 8-2 ಅಂತರದಿಂದ ಮಣಿಸಿ ದೀಪಕ್ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಜೊತೆಗೆ 2020 ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​​ ಸ್ಪರ್ಧೆಗೆ ಅರ್ಹತೆ ಪಡೆದಿದ್ದರು.

ಸದ್ಯಕ್ಕೆ ಮೈದಾನಕ್ಕಿಳಿಯಲ್ಲ MSD; ಧೋನಿ ಕ್ರಿಕೆಟ್ ಆಡುವುದು ಯಾವಾಗ?; ಇಲ್ಲಿದೆ ಖಚಿತ ಮಾಹಿತಿ!

ಆದರೆ, ಮೊಣಕಾಲಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಅವರು ಫೈನಲ್​ ಪಂದ್ಯವನ್ನು ಬಿಟ್ಟುಕೊಟ್ಟು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಫೈನಲ್​ನಲ್ಲಿ ಅವರು ಇರಾನ್​ನ ಹಸನ್​ ಯಾಜ್ದಾನಿ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಬೇಕಿತ್ತು.

ಈ ಬಗ್ಗೆ ಮಾತನಾಡಿರುವ ದೀಪಕ್​ ಪೂನಿಯಾ, 'ಫೈನಲ್​ ಪಂದ್ಯದಿಂದ ನಿವೃತ್ತಿ ಹೊಂದಬೇಕಾಗಿ ಬಂದಿದ್ದರಿಂದ ಸಹಜವಾಗಿಯೆ ನಿರಾಸೆಯಾಗಿದೆ. ಆದರೆ, ಟೂರ್ನಿಯಲ್ಲಿ ನೀಡಿದ ಪ್ರದರ್ಶನದ ಬಗ್ಗೆ ನನಗೆ ತೃಪ್ತಿ ಇದೆ. ಒಲಿಂಪಿಕ್ಸ್​ನಲ್ಲಿ ಪದಕ ಸಾಧನೆ ಮಾಡುವ ನಿಟ್ಟಿನಲ್ಲಿ ನನ್ನೆಲ್ಲ ಶ್ರಮ ಹಾಕಿ ತಯಾರಿ ನಡೆಸುತ್ತೇನೆ' ಎಂದು ಹೇಳಿದರು.

First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading