T20 Rankings: ಇಂಗ್ಲೆಂಡ್, ಮಲನ್, ಶಮ್ಸಿ, ಶಾಕಿಬ್ ನಂ.1; ಭಾರತದ ಟಿ20 ಟಾಪರ್ಸ್ ಯಾರು? ಇಲ್ಲಿದೆ ಪಟ್ಟಿ

Indians position in T20 Rankings- ವಿಶ್ವ ಟಿ20 ಶ್ರೇಯಾಂಕ ಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್ ನಂಬರ್ ಒನ್ ತಂಡವಾಗಿ ಮುಂದುವರಿದಿದೆ. ಆರ್​ಸಿಬಿಯ ಮಾಜಿ ಮತ್ತು ಹಾಲಿ ಬೌಲರ್​ಗಳಿಬ್ಬರು ಅಗ್ರಸ್ಥಾನ ಪಡೆದಿದ್ಧಾರೆ. ಶಾಕಿಬ್ ನಂ. 1 ಆಲ್​ರೌಂಡರ್ ಎನಿಸಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ಬೆಂಗಳೂರು: ಟಿ20 ವಿಶ್ವಕಪ್ ಟೂರ್ನಿ ನಡೆಯುತ್ತಿರುವಂತೆಯೇ ವಿಶ್ವ ಟಿ20 ರ್‍ಯಾಂಕಿಂಗ್ಸ್ ಪಟ್ಟಿ ಅಪ್​ಡೇಟ್ ಆಗಿದೆ. ಇಂಗ್ಲೆಂಡ್ ತಂಡ ತನ್ನ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ. ಭಾರತ ಕೂಡ ಎರಡನೇ ಸ್ಥಾನ ಭದ್ರ ಮಾಡಿಕೊಂಡಿದೆ. ಹಾಲಿ ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ 10ನೇ ಸ್ಥಾನದಲ್ಲಿದೆ. ಭಾರತವನ್ನು ಸೋಲಿಸಿ ಬೀಗಿದ್ದ ಪಾಕಿಸ್ತಾನ್ ಮೂರನೇ ಸ್ಥಾನದಲ್ಲಿದೆ. ಇನ್ನು, ಬ್ಯಾಟಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಒಂದು ಸ್ಥಾನ ಕೆಳಕ್ಕಿಳಿದು ಐದನೇ ಸ್ಥಾನ ಪಡೆದಿದ್ದಾರೆ. ಕೆಎಲ್ ರಾಹುಲ್ 2 ಸ್ಥಾನ ಇಳಿದು ಎಂಟರಲ್ಲಿದ್ಧಾರೆ. ಇಂಗ್ಲೆಂಡ್​ನ ಡೇವಿಡ್ ಮಲನ್ ವಿಶ್ವದ ನಂಬರ್ ಒನ್ ಟಿ20 ಬ್ಯಾಟುಗಾರ ಎನಿಸಿದ್ದಾರೆ.

    ಬೌಲಿಂಗ್: ಐಪಿಎಲ್ 2021ನಲ್ಲಿ ಆರ್​ಸಿಬಿ ತಂಡದಲ್ಲಿದ್ದರೂ ಕೇವಲ ಎರಡು ಪಂದ್ಯ ಆಡುವ ಅವಕಾಶ ಪಡೆದಿದ್ದ ಶ್ರೀಲಂಕಾದ ವನಿಂದು ಹಸರಂಗ ವಿಶ್ವ ಟಿ20 ಬೌಲಿಂಗ್ ರ್‍ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಮಾಜಿ ಆರ್​​ಸಿಬಿ ಆಟಗಾರ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಈ ವರ್ಷ ಆಡಿದ್ದ ಸೌತ್ ಆಫ್ರಿಕಾದ ತಬ್ರೇಜ್ ಶಮ್ಸಿ ನಂಬರ್ ಒನ್ ಟಿ20 ಬೌಲರ್ ಆಗಿದ್ಧಾರೆ. ಬೌಲಿಂಗ್ ಟಾಪ್-10 ಪಟ್ಟಿಯಲ್ಲಿ ಭಾರತದ ಒಬ್ಬರೂ ಬೌಲರ್ ಇಲ್ಲ. ಭುವನೇಶ್ವರ್ ಕುಮಾರ್ 15 ಮಾತ್ರ ಟಾಪ್-20 ಪಟ್ಟಿಯಲ್ಲಿದ್ಧಾರೆ.

    ಇನ್ನು, ಆಲ್​ರೌಂಡರ್ಸ್ ಪಟ್ಟಿಯಲ್ಲಿ ಭಾರತದ ಒಬ್ಬರೂ ಆಟಗಾರರಿಲ್ಲ ಎಂಬುದು ಇಲ್ಲಿ ಗಮನಾರ್ಹ. ಟೀಮ್ ಪಟ್ಟಿಯಲ್ಲಿ ಒಟ್ಟು ವಿಶ್ವದ 87 ತಂಡಗಳಿವೆ. ಸದ್ಯ ವಿಶ್ವಕಪ್​ಗೆ ಎಂಟ್ರಿ ಕೊಟ್ಟಿರುವ ತಂಡಗಳ ಪೈಕಿ ಅತೀ ಕೆಳಗಿನ ರ್ಯಾಂಕಿಗ್ ಹೊಂದಿರುವುದು ಪಪುವಾ ನ್ಯೂಗಿನಿಯಾ. ಇದು 19ನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿರುವುದು ಗಿಬ್ರಾಲ್ಟರ್ ತಂಡ.

    ಟಿ20 ಟೀಮ್ ರ್‍ಯಾಂಕಿಂಗ್:

    1) ಇಂಗ್ಲೆಂಡ್

    2) ಭಾರತ

    3) ಪಾಕಿಸ್ತಾನ್

    4) ನ್ಯೂಜಿಲೆಂಡ್

    5) ಸೌತ್ ಆಫ್ರಿಕಾ

    6) ಆಸ್ಟ್ರೇಲಿಯಾ

    7) ಅಫ್ಘಾನಿಸ್ತಾನ್

    8) ಬಾಂಗ್ಲಾದೇಶ್

    9) ಶ್ರೀಲಂಕಾ

    10) ವೆಸ್ಟ್ ಇಂಡೀಸ್

    11) ಜಿಂಬಾಬ್ವೆ

    12) ಸ್ಕಾಟ್ಲೆಂಡ್

    13) ಐರ್ಲೆಂಡ್

    14) ನೇಪಾಳ

    15) ಯುಎಇ

    16) ನಮೀಬಿಯಾ

    17) ಓಮನ್

    18) ನೆದರ್​ಲೆಂಡ್ಸ್

    19) ಪಪುವಾ ನ್ಯೂಗಿನಿಯಾ

    20) ಸಿಂಗಾಪುರ್

    87) ಗಿಬ್ರಾಲ್ಟರ್

    ಇದನ್ನೂ ಓದಿ: 2004 Incident- ಭಾರತ-ಪಾಕ್ ಕ್ರಿಕೆಟ್ ಸರಣಿ: ಜಾಮಾ ಮಸೀದಿ ಘಟನೆ ಸ್ಮರಿಸಿದ ಇರ್ಫಾನ್ ಪಠಾಣ್ ತಂದೆ

    ಟಾಪ್ ಟಿ20 ಬ್ಯಾಟರ್ಸ್:

    1) ಡೇವಿಡ್ ಮಲನ್, ಇಂಗ್ಲೆಂಡ್

    2) ಬಾಬರ್ ಅಜಮ್, ಪಾಕಿಸ್ತಾನ್

    3) ಏಡನ್ ಮರ್ಕ್ರಮ್, ಸೌತ್ ಆಫ್ರಿಕಾ

    4) ಮೊಹಮ್ಮದ್ ರಿಜ್ವಾನ್, ಪಾಕಿಸ್ತಾನ್

    5) ವಿರಾಟ್ ಕೊಹ್ಲಿ, ಭಾರತ

    6) ಆರೋನ್ ಫಿಂಚ್, ಆಸ್ಟ್ರೇಲಿಯಾ

    7) ಡೆವೋನ್ ಕಾನ್ವೇ, ನ್ಯೂಜಿಲೆಂಡ್

    8) ಕೆಎಲ್ ರಾಹುಲ್, ಭಾರತ

    9) ಎವಿನ್ ಲೆವಿಸ್, ವೆಸ್ಟ್ ಇಂಡೀಸ್

    10) ಹಜ್ರತುಲ್ಲಾ, ಅಫ್ಘಾನಿಸ್ತಾನ್

    ಇದನ್ನೂ ಓದಿ: Jaffer, Venky- ‘ಹಿಂದೂಗಳ ಮಧ್ಯೆ ನಮಾಜ್’ ಹೇಳಿಕೆ ಕೊಟ್ಟ ವಕಾರ್​ಗೆ ಝಾಡಿಸಿದ ವಾಸಿಂ, ವೆಂಕಿ ಮತ್ತಿತರರು

    ಟಾಪ್ ಟಿ20 ಬೌಲರ್ಸ್

    1) ತಬ್ರೇಜ್ ಶಮ್ಸಿ, ಸೌತ್ ಆಫ್ರಿಕಾ

    2) ವನಿಂದು ಹಸರಂಗ, ಶ್ರೀಲಂಕಾ

    3) ರಷೀದ್ ಖಾನ್, ಅಫ್ಘಾನಿಸ್ತಾನ್

    4) ಅದಿಲ್ ರಷೀದ್, ಇಂಗ್ಲೆಂಡ್

    5) ಮುಜೀಬ್ ಉರ್ ರಹಮಾನ್, ಅಫ್ಘಾನಿಸ್ತಾನ್

    6) ಅಡಂ ಜಂಪಾ, ಆಸ್ಟ್ರೇಲಿಯಾ

    7) ಆಸ್ಟಾನ್ ಅಗರ್, ಆಸ್ಟ್ರೇಲಿಯಾ

    8) ಶಾಕಿಬ್ ಅಲ್ ಹಸನ್, ಬಾಂಗ್ಲಾದೇಶ್

    9) ಮಹೆದಿ ಹಸನ್, ಬಾಂಗ್ಲಾದೇಶ್

    10) ಮುಸ್ತಾಫಿಜುರ್ ರಹಮಾನ್, ಬಾಂಗ್ಲಾದೇಶ್

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    ಟಾಪ್ ಟಿ20 ಆಲ್​ರೌಂಡರ್ಸ್:

    1) ಶಾಕಿಬ್ ಅಲ್ ಹಸನ್, ಬಾಂಗ್ಲಾದೇಶ್

    2) ಮೊಹಮ್ಮದ್ ನಬಿ, ಅಫ್ಘಾನಿಸ್ತಾನ್

    3) ಜೋನಾಥನ್ ಸ್ಮಿಟ್, ನಮೀಬಿಯಾ

    4) ಗ್ಲೆನ್ ಮ್ಯಾಕ್ಸ್​ವೆಲ್, ಆಸ್ಟ್ರೇಲಿಯಾ

    5) ಜೀಶನ್ ಮಕ್​ಸೂದ್, ಓಮನ್

    6) ರಿಚರ್ಡ್ ಬೆರಿಂಗ್ಟನ್, ಸ್ಕಾಟ್ಲೆಂಡ್

    7) ಖವರ್ ಅಲಿ, ಓಮನ್

    8) ವನಿದಂದು ಹಸರಂಗ, ಶ್ರೀಲಂಕಾ

    9) ರೋಹನ್ ಮುಸ್ತಾಫ, ಯುಎಇ

    10) ಮಿಶೆಲ್ ಮಾರ್ಷ್, ಆಸ್ಟ್ರೇಲಿಯಾ

    ಇದನ್ನೂ ಓದಿ: T20 World Cup- BLMಗೆ ಮಂಡಿಯೂರಲು ಒಪ್ಪದೆ ತಂಡದಿಂದಲೇ ಹೊರನಡೆದ ಡೀಕಾಕ್; ಏನಿದು ಬಿಎಲ್ಎಂ?

    ಭಾರತದ ಟಾಪ್ ಟಿ20 ಬ್ಯಾಟರ್ಸ್ ಮತ್ತವರ ವಿಶ್ವ ರ್‍ಯಾಂಕಿಂಗ್:

    1) ವಿರಾಟ್ ಕೊಹ್ಲಿ 5

    2) ಕೆಎಲ್ ರಾಹುಲ್ 8

    3) ರೋಹಿತ್ ಶರ್ಮಾ 24

    4) ಶಿಖರ್ ಧವನ್ 30

    5) ಶ್ರೇಯಸ್ ಅಯ್ಯರ್ 36

    6) ಸೂರ್ಯಕುಮಾರ್ ಯಾದವ್ 57

    7) ರಿಷಭ್ ಪಂತ್ 63

    ಇದನ್ನೂ ಓದಿ: SMAT T20- ನ. 4ರಿಂದ ಮುಷ್ತಾಕ್ ಅಲಿ ಟಿ20; ಕರ್ನಾಟಕ ತಂಡ, ನಾಯಕ, ಹಿಂದಿನ ಸಾಧನೆ ಇತ್ಯಾದಿ ವಿವರ

    ಭಾರತ ಟಾಪ್ ಟಿ20 ಬೌಲರ್ಸ್ ಮತ್ತವರ ವಿಶ್ವ ರ್‍ಯಾಂಕಿಂಗ್

    1) ಭುವನೇಶ್ವರ್ ಕುಮಾರ್ 15

    2) ವಾಷಿಂಗ್ಟನ್ ಸುಂದರ್ 22

    3) ಯುಜವೇಂದ್ರ ಚಹಲ್ 29

    4) ಜಸ್​ಪ್ರೀತ್ ಬುಮ್ರಾ 34

    5) ಶಾರ್ದೂಲ್ ಠಾಕೂರ್ 38

    6) ದೀಪಕ್ ಚಾಹರ್ 41

    7) ಕುಲದೀಪ್ ಯಾದವ್ 90

    8) ಕೃಣಾಲ್ ಪಾಂಡ್ 100
    Published by:Vijayasarthy SN
    First published: