Video: ತನ್ನನ್ನು ಔಟ್ ಮಾಡಿದ ವೇಗಿಯನ್ನು ವ್ಯಂಗ್ಯವಾಡಿ ಸಂಭ್ರಮಿಸಿದ ಮೊಹಮ್ಮದ್ ಶಮಿ: ವಿಡಿಯೋ ವೈರಲ್

ಅದ್ಭುತ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ ಕೇವಲ 16 ರನ್​ಗಳಿಗೆ ವಿಂಡೀಸ್​ನ 4 ವಿಕೆಟ್​ ಉರುಳಿಸಿ ಮಿಂಚಿದರು.

zahir | news18
Updated:June 28, 2019, 5:15 PM IST
Video: ತನ್ನನ್ನು ಔಟ್ ಮಾಡಿದ ವೇಗಿಯನ್ನು ವ್ಯಂಗ್ಯವಾಡಿ ಸಂಭ್ರಮಿಸಿದ ಮೊಹಮ್ಮದ್ ಶಮಿ: ವಿಡಿಯೋ ವೈರಲ್
Shami vs Cottrell
  • News18
  • Last Updated: June 28, 2019, 5:15 PM IST
  • Share this:
ಮ್ಯಾಂಚೆಸ್ಟರ್​: ಕ್ರಿಕೆಟ್ ಮೈದಾನದಲ್ಲಿ ಕಾಲೆಳೆಯುವ ಆಟ ಆಗಾಗ್ಗೆ ನಡೆಯುತ್ತಿರುತ್ತದೆ. ಈ ಬಾರಿಯ ವಿಶ್ವಕಪ್​ನಲ್ಲೂ ಅದು ಮುಂದುವರೆದಿದೆ. ಗುರುವಾರ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್​ ಶಮಿಯನ್ನು ಔಟ್​ ಮಾಡಿ ಕೆರಿಬಿಯನ್​ ಬೌಲರ್ ಶೆಲ್ಡನ್ ಕಟ್ರೆಲ್ ಸಂಭ್ರಮಿಸಿದ್ದರು.

ಕೊನೆಯ ಹಂತದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಶಮಿ ಕಟ್ರೆಲ್ ಅವರ ವೇಗದ ಎಸೆತಕ್ಕೆ ಕೀಪರ್ ಶಾಯ್ ಹೋಪ್​ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಇದೇ ವೇಳೆ ತಮ್ಮ ಟ್ರೇಡ್​ ಮಾರ್ಕ್​ ಸ್ಟೈಲ್​ನಲ್ಲಿ ಸೆಲ್ಯೂಟ್ ಹೊಡೆಯುವ ಮೂಲಕ ವಿಂಡೀಸ್ ವೇಗಿ ಸಂಭ್ರಮಕ್ಕೆ ಕಿಚ್ಚು ಹಚ್ಚಿದ್ದರು.

ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ಕಟ್ರೆಲ್​ರನ್ನು ಚಾಹಲ್​ ತಮ್ಮ ಸ್ಪಿನ್ ಬಲೆಯಲ್ಲಿ ಬೀಳಿಸುವ ಮೂಲಕ ಪೆವಿಲಿಯನ್​ಗಟ್ಟಿದ್ದರು. ಇದೇ ಖುಷಿಯನ್ನು ಮೊಹಮ್ಮದ್ ಶಮಿ ಕಟ್ರೆಲ್​ ಶೈಲಿಯಲ್ಲೇ ಸೆಲ್ಯೂಟ್ ಹೊಡೆದು ವ್ಯಂಗ್ಯವಾಡಿ ಸಂಭ್ರಮಿಸಿದರು.



Loading...

ಅತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಶಮಿಯ ಟ್ರೋಲ್ ನೋಡಿ ನಕ್ಕರು. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ ಕೇವಲ 16 ರನ್​ಗಳಿಗೆ ವಿಂಡೀಸ್​ನ 4 ವಿಕೆಟ್​ ಉರುಳಿಸಿ ಮಿಂಚಿದರು. ಇದೀಗ ಭಾರತದ ವೇಗಿಯ ಟ್ರೋಲ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ಶಮಿ ಪರವಿದ್ದರೆ, ಮತ್ತೆ ಕೆವಲರು ಕಟ್ರೆಲ್ ಆರ್ಮಿ ಸೆಲ್ಯೂಟ್​ ಅನ್ನು ತಮಾಷೆ ಮಾಡಿರುವುದು ಸರಿಯಲ್ಲ ಅಂದಿದ್ದಾರೆ.

ಇದನ್ನೂ ಓದಿ: World Cup 2019: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಯನ್ನು 'ಲಫಂಗಾ' ಎಂದು ಜರಿದ ಪತ್ನಿ ಹಸೀನ್..!
First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...