IND vs NZ: ವಿರಾಟ್​ ಕೊಹ್ಲಿ ಪಡೆಗೆ ಕಡೆಗೂ ಮುಳುವಾಗಿದ್ದು ಈ ಒಂದು ಅಂಶ!

ಭಾರತ ಲೀಗ್​ ಹಂತದಲ್ಲಿ ಆಡಿದ 8 ಪಂದ್ಯಗಳ ಪೈಕಿ ಐದರಲ್ಲಿ ಮೊದಲು ಬ್ಯಾಟಿಂಗ್​ ಆಯ್ದುಕೊಂಡಿತ್ತು. ಈ ವೇಳೆ ಅಷ್ಟೂ ಪಂದ್ಯವನ್ನು ಭಾರತ ಗೆದ್ದಿತ್ತು. ಆದರೆ, ನ್ಯೂಜಿಲೆಂಡ್​ ವಿರುದ್ಧ ಭಾರತ ಚೇಸ್​ ಮಾಡಿ ಸೋತಿದೆ.

Rajesh Duggumane | news18
Updated:July 11, 2019, 9:22 AM IST
IND vs NZ: ವಿರಾಟ್​ ಕೊಹ್ಲಿ ಪಡೆಗೆ ಕಡೆಗೂ ಮುಳುವಾಗಿದ್ದು ಈ ಒಂದು ಅಂಶ!
ವಿರಾಟ್​ ಕೊಹ್ಲಿ
  • News18
  • Last Updated: July 11, 2019, 9:22 AM IST
  • Share this:
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 18 ರನ್​ಗಳ ಅಂತರದಿಂದ ಸೋತಿದೆ. ಈ ಮೂಲಕ 2019ರ ವಿಶ್ವಕಪ್​ನಿಂದ ಹೊರಬಿದ್ದಿದೆ. ಸೋಲಿಗೆ ನಾನಾ ಕಾರಣಗಳನ್ನು ನೀಡಲಾಗುತ್ತಿದೆ. ಆದರೆ, ತಜ್ಞರು ಸೋಲಿಗೆ ಪ್ರಮುಖ ಕಾರಣವೊಂದನ್ನು ನೀಡಿದ್ದಾರೆ.

ಭಾರತ ಲೀಗ್​ ಹಂತದಲ್ಲಿ ಆಡಿದ 9 ಪಂದ್ಯಗಳ ಪೈಕಿ 7 ಗೆದ್ದಿತ್ತು. 7 ಪಂದ್ಯಗಳನ್ನು ಗೆದ್ದ ಹೊರತಾಗಿಯೂ ವಿರಾಟ್​ ಕೊಹ್ಲಿ ಪಡೆ ಹಲವು ಸವಾಲುಗಳನ್ನು ಎದುರಿಸಿತ್ತು. ಆಂರಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದಲೇ ಔಟ್​ ಆಗಿದ್ದರೆ, ಆಲ್​ರೌಂಡರ್​ ವಿಜಯಶ್​ ಶಂಕರ್​ಗೂ ಗಾಯದ ಸಮಸ್ಯೆ ಕಾಡಿತ್ತು. ಇದಲ್ಲದೆ, ಭಾರತಕ್ಕೆ ಮತ್ತೊಂದು ವಿಚಾರದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಕ್ರಿಕೆಟ್​ ಪಂಡಿತರು ಬಣ್ಣಿಸಿದ್ದರು.

ಭಾರತ ಲೀಗ್​ ಹಂತದಲ್ಲಿ ಆಡಿದ 8 ಪಂದ್ಯಗಳ ಪೈಕಿ ಐದರಲ್ಲಿ ಮೊದಲು ಬ್ಯಾಟಿಂಗ್​ ಆಯ್ದುಕೊಂಡಿತ್ತು. ಈ ವೇಳೆ ಅಷ್ಟೂ ಪಂದ್ಯವನ್ನು ಭಾರತ ಗೆದ್ದಿತ್ತು. ಇನ್ನು, ಉಳಿದ ಮೂರು ಪಂದ್ಯಗಳಲ್ಲಿ ಚೇಸಿಂಗ್​ ಮಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ದುರ್ಬಲ ತಂಡಗಳಾದ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಚೇಸ್​ ಮಾಡಿ ಗೆದ್ದಿತ್ತು. ಆದರೆ, ಬಲಿಷ್ಠ ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ ಚೇಸಿಂಗ್​ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಜಡೇಜಾ ಬ್ಯಾಟ್ ಬೀಸಿದ ಪರಿ ನೋಡಿ ದಂಗಾಗಿ ಪ್ರತಿಕ್ರಿಯಿಸಿದ ಸಂಜಯ್ ಮಂಜ್ರೇಕರ್!

ಭಾರತ ಕ್ರಿಕೆಟ್ ತಂಡದ ಏಕದಿನ ಪಂದ್ಯಗಳ ಇತಿಹಾಸವನ್ನು ಒಮ್ಮೆ ಕೆದಕಿದರೆ ಚೇಸಿಂಗ್​ನಲ್ಲಿ ಭಾರತ ಎಂದಿಗೂ ಬಲಿಷ್ಠ ತಂಡವೇ. ತಂಡ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಕ್ಕೆ ಅವರ ಬ್ಯಾಟಿಂಗ್ ಸರಾಸರಿ ಸಾಕ್ಷಿ ನುಡಿಯುತ್ತದೆ.

ಇನ್ನೂ ದಶಕಗಳ ಹಿಂದೆ ಅಂದಿನ ನಾಯಕ ಸೌರವ್ ಗಂಗೂಲಿ ನೇತೃತ್ವದಲ್ಲಿ ಇಂಗ್ಲೆಂಡ್​ನ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ಇಂಗ್ಲೆಂಡ್​ ವಿರುದ್ಧವೇ ಬೃಹತ್ ಗುರಿ ಬೆನ್ನಟ್ಟಿ ಗೆದ್ದ ಭಾರತ ಸಾಧನೆಯನ್ನು ಅಷ್ಟು ಸುಲಭಕ್ಕೆ ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ, ಈಗಿನ ಪರಿಸ್ಥಿತಿ ಭಾರತಕ್ಕೆ ಅಷ್ಟು ಪೂರಕವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಹಾಗಾಗಿ ಸೆಮಿಫೈನಲ್​ನಲ್ಲಿ ಚೇಸಿಂಗ್ ತೆಗೆದುಕೊಂಡರೆ ಕಷ್ಟವಾಗಬಹುದು ಎಂದು ಕ್ರಿಕೆಟ್​ ತಜ್ಞರು ಅಭಿಪ್ರಾಯ ಪಟ್ಟಿದ್ದರು. ನ್ಯೂಜಿಲೆಂಡ್​ ವಿರುದ್ಧವೂ ಹಾಗೆಯೇ ಆಗಿದೆ.  ​

ಇದನ್ನೂ ಓದಿ:  ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್​ ನೋಡೋಕೆ ಮಿಸ್​ ಆಯಿತೇ? ಇಲ್ಲಿದೆ ಪಂದ್ಯದ ಹೈಲೈಟ್ಸ್​​ನ್ಯೂಜಿಲೆಂಡ್​ ನೀಡಿದ ಅಲ್ಪ ಮೊತ್ತವನ್ನು ಬೆನ್ನು ಹತ್ತಲು ಭಾರತ ತಂಡ ವಿಫಲವಾಗಿತ್ತು. ನ್ಯೂಜಿಲೆಂಡ್​ ಮಾರಕ ದಾಳಿಗೆ ಭಾರತ ತತ್ತರಿಸಿತ್ತು. ಜಡೇಜಾ ಹೋರಾಟ ಸಂಪೂರ್ಣವಾಗಿ ವ್ಯರ್ಥವಾಗಿತ್ತು. ಈ ಮೂಲಕ ಭಾರತ ವಿಶ್ವಕಪ್​ನಿಂದ ಹೊರ ಬಿದ್ದಿದೆ. ಭಾರತ ಮೊದಲು ಬ್ಯಾಟಿಂಗ್​ ಆಯ್ದುಕೊಂಡಿದ್ದರೆ ಗೆಲುವು ಖಂಡಿತವಾಗಿಯೂ ಸಿಗುತ್ತಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ