World Cup Points Table 2019: ಯಾವ ತಂಡ ಯಾವ ಸ್ಥಾನದಲ್ಲಿದೆ?; ತಾಜಾ ಅಂಕಪಟ್ಟಿಯ ಸಂಪೂರ್ಣ ವಿವರ ಇಲ್ಲದೆ!

ICC WORLD CUP 2019 POINTS TABLE: ಈವರೆಗೆ ಒಟ್ಟು ವಿಶ್ವಕಪ್​ನಲ್ಲಿ 19 ಪಂದ್ಯಗಳು ನಡೆದಿವೆ. ಇದರಲ್ಲಿ ನಾಲ್ಕು ಪಂದ್ಯ ಮಳೆಗೆ ಆಹುತಿಯಾಗಿದೆ.

Vinay Bhat | news18
Updated:June 13, 2019, 8:22 PM IST
World Cup Points Table 2019: ಯಾವ ತಂಡ ಯಾವ ಸ್ಥಾನದಲ್ಲಿದೆ?; ತಾಜಾ ಅಂಕಪಟ್ಟಿಯ ಸಂಪೂರ್ಣ ವಿವರ ಇಲ್ಲದೆ!
ಐಸಿಸಿ ಕ್ರಿಕೆಟ್ ವಿಶ್ವಕಪ್ 2019
  • News18
  • Last Updated: June 13, 2019, 8:22 PM IST
  • Share this:
ಬೆಂಗಳೂರು (ಜೂ. 13): 12ನೇ ಐಸಿಸಿ ವಿಶ್ವಕಪ್ ಆವೃತ್ತಿ ಮಹತ್ವದ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಬಲಿಷ್ಠ ಎಂದೆನಿಸಿಕೊಂಡಿದ್ದ ತಂಡಗಳೇ ಮಕಾಡೆ ಮಲಿಗಿದೆ. ಗೆಲ್ಲುವ ಫೇವರಿಟ್ ಆಗಿದ್ದ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಹೀಗಿರುವಾಗ ವಿಶ್ವಕಪ್​ನ ತಾಜಾ ಅಂಕಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ...

ಈವರೆಗೆ ಒಟ್ಟು ವಿಶ್ವಕಪ್​ನಲ್ಲಿ 19 ಪಂದ್ಯಗಳು ನಡೆದಿವೆ. ಇದರಲ್ಲಿ ನಾಲ್ಕು ಪಂದ್ಯ ಮಳೆಗೆ ಆಹುತಿಯಾಗಿದೆ.

ಅಂಕಪಟ್ಟಿಯನ್ನು ನೋಡುವುದಾದರೆ ಮೊದಲ ಸ್ಥಾನದಲ್ಲಿ 7 ಪಾಯಿಂಟ್​ನೊಂದಿಗೆ ನ್ಯೂಜಿಲೆಂಡ್ ತಂಡವಿದೆ. ಆಡಿರುವ 4 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದಿರುವ ಕಿವೀಸ್ ಪಡೆ ಇಂದಿನ ಭಾರತ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಒಂದು ಅಂಕ ತನ್ನದಾಗಿಸಿದೆ. ಹೀಗೆ ಒಟ್ಟು 7 ಅಂಕದ ಜೊತೆಗೆ ಉತ್ತಮ ರನ್​ರೇಟ್​ನೊಂದಿಗೆ ಅಗ್ರಸ್ಥಾನ ಭದ್ರ ಪಡಿಸಿದೆ.

ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಆಡಿರುವ ನಾಲ್ಕು ತಂಡಗಳಲ್ಲಿ ಮೂರನ್ನು ಗೆದ್ದಿದ್ದು ಒಂದರಲ್ಲಿ ಸೋಲುಂಡಿದೆ. ಹೀಗಾಗಿ 6 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿದೆ.

Cricket Wolrd Cup 2019: ಭಾರತ-ನ್ಯೂಜಿಲೆಂಡ್ ಪಂದ್ಯ ಮಳೆಗೆ ಆಹುತಿ; ಕೊಹ್ಲಿ ಮುಂದಿನ ಟಾರ್ಗೆಟ್ ಪಾಕಿಸ್ತಾನ

ಟೀಂ ಇಂಡಿಯಾ ಮೂರನೇ ಸ್ಥಾನಕ್ಕೇರಿದೆ. 3 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ದ. ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದೆ. ಇಂದು ನಡೆಯಬೇಕಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸ್ಥಗಿತಗೊಂಡ ಪರಿಣಾಮ ಒಂದು ಅಂಕ ಸಂಪಾದಿಸಿ ಒಟ್ಟು 5 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

4ನೇ ಸ್ಥಾನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದು, ಒಂದರಲ್ಲಿ ಸೋಲುಂಡಿದೆ. ಹೀಗಾಗಿ 4 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ.ಶ್ರೀಲಂಕಾ ಕೂಡ 4 ಅಂಕ ಸಂಪಾದಿಸಿದೆ. ಆದರೆ ರನ್​ರೇಟ್ ಆಧಾರದ ಮೇಲೆ 5ನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿ 3 ಅಂಕದೊಂದಿಗೆ ವೆಸ್ಟ್​ ಇಂಡೀಸ್ ಇದ್ದರೆ, ಏಳನೇ ಸ್ಥಾನ ಬಾಂಗ್ಲಾದೇಶ 3 ಅಂಕ, ಎಂಟನೆ ಸ್ಥಾನ ಪಾಕಿಸ್ತಾನ 3 ಅಂಕ, 9ನೇ ಸ್ಥಾನ ದಕ್ಷಿಣ ಆಫ್ರಿಕಾ 1 ಅಂಕ ಹಾಗೂ ಅಫ್ಘಾನಿಸ್ತಾನ ಆಡಿರುವ ಮೂರು ಪಂದ್ಯಗಳಲ್ಲಿ ಮೂರನ್ನೂ ಸೋತು ಕೊನೆಯ ಸ್ಥಾನದಲ್ಲಿದೆ.

 First published: June 13, 2019, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading