ICC Cricket World Cup 2019: ಸೆಮಿ ಫೈನಲ್​ಗೆ ಲಗ್ಗೆ ಇಡಲಿದೆ ಈ ನಾಲ್ಕು ತಂಡಗಳು!

ಸೋಲಿಲ್ಲದ ಸರದಾರನಾಗಿ ಮರೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಕೂಡ ಸೆಮೀಸ್ ಹಾದಿಯನ್ನು ಎದುರು ನೋಡುತ್ತಿದೆ. ಆತಿಥೇಯ ಇಂಗ್ಲೆಂಡ್​ ಸ್ಥಿತಿ ಅಯೋಮಯ ದಂತಿದೆ.

Vinay Bhat | news18
Updated:June 25, 2019, 8:28 PM IST
ICC Cricket World Cup 2019: ಸೆಮಿ ಫೈನಲ್​ಗೆ ಲಗ್ಗೆ ಇಡಲಿದೆ ಈ ನಾಲ್ಕು ತಂಡಗಳು!
ಐಸಿಸಿ ಕ್ರಿಕೆಟ್ ವಿಶ್ವಕಪ್ 2019
 • News18
 • Last Updated: June 25, 2019, 8:28 PM IST
 • Share this:
ಬೆಂಗಳೂರು (ಜೂ. 25): ಇಂಗ್ಲೆಂಡ್​​ನಲ್ಲಿ ವಿಶ್ವಕಪ್​ ಶುರುವಾಗಿ ಅದಾಗಲೇ ಅರ್ಧದಷ್ಟು ಪಂದ್ಯಗಳು ಮುಗಿದಿವೆ. ಕೆಲವು ತಂಡಗಳ ಫಲಿತಾಂಶ ಹೊರಬಿದ್ದಿದ್ದು, ಅಫ್ಘಾನಿಸ್ತಾನ ಹಾಗೂ ದ. ಆಫ್ರಿಕಾ ತಂಡ ಟೂರ್ನಿಯಿಂದಲೇ ಹೊರ ಬಿದ್ದಿವೆ.

ಈ ಮಧ್ಯೆ ಸೆಮಿ ಫೈನಲ್​​​ಗೆ ಯಾವ ತಂಡ ಪ್ರವೇಶ ಪಡೆಯಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಂಕಪಟ್ಟಿಯನ್ನು ನೋಡುವುದಾದರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಭಾರತ ಹಾಗೂ ಇಂಗ್ಲೆಂಡ್ ತಂಡ ಮೊದಲ 4 ಸ್ಥಾನದಲ್ಲಿ ಭದ್ರವಾಗಿದೆ. ಆಸ್ಟ್ರೇಲಿಯಾ ಇನ್ನು ಪಂದ್ಯ ಗೆದ್ದರೆ ಸೆಮಿ ಫೈನಲ್​ಗೆ ಲಗ್ಗೆ ಇಡಲಿದೆ.

ಇತ್ತ ಸೋಲಿಲ್ಲದ ಸರದಾರನಾಗಿ ಮರೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಕೂಡ ಸೆಮೀಸ್ ಹಾದಿಯನ್ನು ಎದುರು ನೋಡುತ್ತಿದೆ. ಆತಿಥೇಯ ಇಂಗ್ಲೆಂಡ್​ ಸ್ಥಿತಿ ಅಯೋಮಯ ದಂತಿದೆ. ಬಾಂಗ್ಲಾದೇಶ 5ನೇ ಸ್ಥಾನದಲ್ಲಿ ಇದೆಯಾದರು ಮುಂದಿನ ಹಾದಿ ಕಠಿಣವಾಗಿದೆ. ಇವರ ಜೊತೆ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡ ಕೂಡ ಪೈಪೋಟಿ ನೀಡುತ್ತಿದೆ.

ನಿಟ್ಟುಸಿರು ಬಿಟ್ಟಿದ್ದ ಟೀಂ ಇಂಡಿಯಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಠ!

ಸದ್ಯ ಈಗಿರುವ ಪಾಯಿಂಟ್​​ ಪಟ್ಟಿಯನ್ನು ನೋಡುವುದಾದರೆ:

 • ನ್ಯೂಜಿಲೆಂಡ್- 6 ಪಂದ್ಯ, 5 ಗೆಲುವು, 11 ಅಂಕ 
 • ಆಸ್ಟ್ರೇಲಿಯಾ- 6 ಪಂದ್ಯ, 5 ಗೆಲುವು, 10 ಅಂಕ 

 • ಭಾರತ- 5 ಪಂದ್ಯ, 4 ಗೆಲುವು, 9 ಅಂಕ 

 • ಇಂಗ್ಲೆಂಡ್- 6 ಪಂದ್ಯ, 4 ಗೆಲುವು, 8 ಅಂಕ

 • ಬಾಂಗ್ಲಾದೇಶ- 7 ಪಂದ್ಯ, 3 ಗೆಲುವು, 7 ಅಂಕ

 • ಶ್ರೀಲಂಕಾ- 6 ಪಂದ್ಯ, 2 ಗೆಲುವು, 6 ಅಂಕ

 • ಪಾಕಿಸ್ತಾನ- 6 ಪಂದ್ಯ, 2 ಗೆಲುವು, 5 ಅಂಕ

 • ವೆಸ್ಟ್​ ಇಂಡೀಸ್- 6 ಪಂದ್ಯ, 1 ಗೆಲುವು, 3 ಅಂಕ

 • ದಕ್ಷಿಣ ಆಫ್ರಿಕಾ- 7 ಪಂದ್ಯ, 1 ಗೆಲುವು, 3 ಅಂಕ

 • ಅಫ್ಘಾನಿಸ್ತಾನ- 7 ಪಂದ್ಯ, 0 ಗೆಲುವು, 0 ಅಂಕ

First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ