ವಿಶ್ವಕಪ್​ನಲ್ಲಿ ಎರಡೆರಡು ತಂಡವನ್ನು ಪ್ರತಿನಿಧಿಸಿದ ಆಟಗಾರರು ಯಾರು ಗೊತ್ತೇ?

ದ. ಆಫ್ರಿಕಾದ ಕ್ರಿಕೆಟ್​ ತಂಡದ ಮಾಜಿ ನಾಯಕ ಕೆಪ್ಲರ್​​ ವೆಸಲ್​​ ವಿಶ್ವಕಪ್​​ನಲ್ಲಿ ಎರಡು ವಿಭಿನ್ನ ತಂಡಗಳ ಪರ ಆಡಿದ ಮೊತ್ತ ಮೊದಲ ಆಟಗಾರ. ಆಫ್ರಿಕಾದ ಬ್ಲೊಮ್​​ಫಾಂಟೀನ್​ನಲ್ಲಿ ಹುಟ್ಟಿ ಬೆಳೆದ ಕೆಪ್ಲರ್​​​, ನಂತರ ಆಸ್ಟ್ರೇಲಿಯಾ ತಂಡ ಸೇರಿಕೊಂಡರು.

news18
Updated:May 31, 2019, 5:37 PM IST
ವಿಶ್ವಕಪ್​ನಲ್ಲಿ ಎರಡೆರಡು ತಂಡವನ್ನು ಪ್ರತಿನಿಧಿಸಿದ ಆಟಗಾರರು ಯಾರು ಗೊತ್ತೇ?
ಎಡ್​​​ ಜಾಯ್ಸ್
  • News18
  • Last Updated: May 31, 2019, 5:37 PM IST
  • Share this:
ವಿಶ್ವಕಪ್ 12ನೇ ಆವೃತ್ತಿಗೆ ನಿನ್ನೆಯಷ್ಟೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ತಂಡ ಆಫ್ರಿಕಾಗೆ ಸೋಲುಣಿಸಿ ಗೆಲುವಿನ ಆರಂಭ ಪಡೆದುಕೊಂಡಿದೆ. ವಿಶ್ವಕಪ್ ಎಂಬ ಮಹಾಸಮರದಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸ ಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿನ ಕನಸಾಗಿರುತ್ತಿದೆ.

44 ವರ್ಷಗಳ ಸುದೀರ್ಘಾವಧಿ ಇತಿಹಾಸ ಹೊಂದಿರುವ ಐಸಿಸಿ ಏಕದಿನ ಕ್ರಿಕೆಟ್​ನಲ್ಲಿ ಈವರೆಗೆ ಒಟ್ಟು 11 ಟೂರ್ನಿಗಳು ನಡೆದಿದೆ. ಆದರೆ ವಿಶ್ವಕಪ್​ ಮಹಾಸಂಗ್ರಾಮದಲ್ಲಿ ಎರಡು ವಿಭಿನ್ನ ತಂಡಗಳನ್ನು ಪ್ರತಿನಿಧಿಸುವ ಮೂಲಕ ಕೆಲವು ಆಟಗಾರರು ಅಪರೂಪದ ದಾಖಲೆಯನ್ನು ಮಾಡಿದ್ದಾರೆ. ಆ ಆಟಗಾರರು ಯಾರು.? ಈ ಕುರಿತ ಮಾಹಿತಿ ಇಲ್ಲಿದೆ.

ಕೆಪ್ಲರ್​​ ವೆಸೆಲ್​: (ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ):ದ. ಆಫ್ರಿಕಾದ ಕ್ರಿಕೆಟ್​ ತಂಡದ ಮಾಜಿ ನಾಯಕ ಕೆಪ್ಲರ್​​ ವೆಸಲ್​​ ವಿಶ್ವಕಪ್​​ನಲ್ಲಿ ಎರಡು ವಿಭಿನ್ನ ತಂಡಗಳ ಪರ ಆಡಿದ ಮೊತ್ತ ಮೊದಲ ಆಟಗಾರ. ಆಫ್ರಿಕಾದ ಬ್ಲೊಮ್​​ಫಾಂಟೀನ್​ನಲ್ಲಿ ಹುಟ್ಟಿ ಬೆಳೆದ ಕೆಪ್ಲರ್​​​, ನಂತರ ಆಸ್ಟ್ರೇಲಿಯಾ ತಂಡ ಸೇರಿಕೊಂಡರು. ಮೊದಲಿಗೆ ಕ್ವೀನ್​ಲ್ಯಾಂಡ್​ ತಂಡದ ಪರ ಆಡಲು ಪ್ರಾರಂಭಿಸಿದ ಕೆಪ್ಲರ್​ 1982ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದರು. ನಂತರದಲ್ಲಿ 1983ರ ವಿಶ್ವಕಪ್​ನ ಕಿಮ್​​ ಹ್ಯೂಸ್​​​ ಸಾರಥ್ಯದ ಆಸ್ಟೇಲಿಯಾ ತಂಡದಲ್ಲಿ ಸ್ಥಾನ ಪಡೆದು, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಎರಡೂ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಕೆಪ್ಲರ್​​ ವೆಸೆಲ್ ಅವರಿಗಿದೆ.

ಆಂಡರ್ಸನ್​​ ಕಮಿನ್ಸ್​ (ವೆಸ್ಟ್​​ ಇಂಡೀಸ್​ ಮತ್ತು ಕೆನಡಾ):


Loading...

ಬಾರ್ಬೆಡೋಸ್​ನಲ್ಲಿ ಜನಿಸಿದ ಆಂಡರ್ಸನ್​ ಕಮಿನ್ಸ್​​ ಈ ಸಾಧನೆ ಮಾಡಿದ ಎರಡನೇ ಆಟಗಾರ. ವೆಸ್ಟ್​ ಇಂಡೀಸ್​ನ ದೈತ್ಯ ಆಲ್​ರೌಂಡರ್​​ ಎಂದೇ ಗುರುತಿಸಿಕೊಂಡ ಆಂಡರ್ಸನ್​​ 1991ರಲ್ಲಿ ವೆಸ್ಟ್​ ಇಂಡೀಸ್ ತಂಡ ಸೇರಿಕೊಳ್ಳುವ ಮೂಲಕ 1992ರ ವಿಶ್ವಕಪ್​​ ಟೂರ್ನಿಯನ್ನು ಆಡಿದ್ದರು. ನಂತರ 15 ವರ್ಷದ ಬಳಿಕ ಕೆನಡಾ ತಂಡದ ಪರ ಆಡಿದ್ದಾರೆ. 2007ರ ವಿಶ್ವಕಪ್​ ಟೂರ್ನಿಯಲ್ಲಿ ಕೆನಡಾ ರಾಷ್ಟ್ರೀಯ ತಂಡವನ್ನು ಇವರು ಪ್ರತಿನಿಧಿಸಿದ್ದಾರೆ.

ಐಯಾನ್​ ಮಾರ್ಗನ್​ (ಐರ್ಲೆಂಡ್​ ಮತ್ತು ಇಂಗ್ಲೆಂಡ್​):ಈ ಬಾರಿಯ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಮುನ್ನಡೆಸುತ್ತಿರುವ ಇಯಾನ್ ಮಾರ್ಗನ್ ಆರಂಭದಲ್ಲಿ ಐರ್ಲೆಂಡ್ ತಂಡದಲ್ಲಿ ಆಡಿದ್ದರು ಎಂಬುದನ್ನು ನಂಬಲೇಬೇಕು. ಐರ್ಲೆಂಡ್​ನ ಡಬ್ಲಿನ್​ನಲ್ಲಿ ಜನಿಸಿದ ಮಾರ್ಗನ್​ 2007ರ ವಿಶ್ವಕಪ್​ನಲ್ಲಿ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಬಳಿಕ 2009ರಲ್ಲಿ ಇಂಗ್ಲೆಂಡ್​ ತಂಡಕ್ಕೆ ಸೇರಿದ್ದರು. 2011ರ ವಿಶ್ವಕಪ್​ನಲ್ಲಿ ಆಡಿದ 3 ಪಂದ್ಯಗಳಲ್ಲಿ ಮಾರ್ಗನ್​ 2 ಅರ್ಧಶತಕ ದಾಖಲಿಸಿಕೊಂಡಿದ್ದರು. ಇದೀಗ 32 ವರ್ಷದ ಅನುಭವಿ ಆಟಗಾರ 2019ರ ವಿಶ್ವಕಪ್​ನಲ್ಲೂ ಇಂಗ್ಲೆಂಡ್​ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಎಡ್​​​ ಜಾಯ್ಸ್​ (ಇಂಗ್ಲೆಂಡ್​ ಮತ್ತು ಐರ್ಲೆಂಡ್​):ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಪ್ರತಿನಿಧಿಸಿದ ಬಳಿಕ ಐರ್ಲೆಂಡ್​ಗೆ ಹಿಂದುರಿಗಿದ ಏಕಮಾತ್ರ ಆಟಗಾರ ಏಡ್​ ಜಾಯ್ಸ್​. ಎಡಗೈ ಬ್ಯಾಟ್ಸ್​ಮನ್​ರಾದ ಎಡ್​ ಜಾಯ್ಸ್​ ತಮ್ಮ ತಾಯ್ನಾಡಿನ ಐರ್ಲೆಂಡ್​ ತಂಡವನ್ನು ಪ್ರತಿನಿಧಿಸುವ ಸಲುವಾಗಿ ಇಂಗ್ಲೆಂಡ್​ ತಂಡವನ್ನು ತೊರೆದಿದ್ದರು. 2007 ರಲ್ಲಿ ಇಂಗ್ಲೆಂಡ್​ ತಂಡದಲ್ಲಿ ಆಡಿದ ಜಾಯ್ಸ್​ ನಂತರ 2011 ರಲ್ಲಿ ಐರ್ಲೆಂಡ್​ ತಂಡವನ್ನು ಪ್ರತಿನಿಧಿಸಿದರು.

 
First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...